ಕರಾವಳಿ

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ; ಹೆದ್ದಾರಿಯಲ್ಲಿ ಟಯರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ

Pinterest LinkedIn Tumblr

ಉಡುಪಿ: ಕಾಂಗ್ರೆಸ್ ಹಾಗೂ ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದು ಎರಡು ಕೂಡ ಹಿಂದೂ ವಿರೋಧಿ ಪಕ್ಷಗಳು ಎಂದು ಕುಂದಾಪುರ ಬಿಜೆಪಿ ಗೋ ಪ್ರಕೋಷ್ಟದ ಸಂಚಾಲಕ ಅವಿನಾಶ್ ಉಳ್ತೂರು ಕಿಡಿಕಾರಿದ್ದಾರೆ.

ಸಾಸ್ತಾನದ ಟೋಲ್ ಗೇಟ್ ಬಳಿ ಕುಂದಾಪುರ ಬಿಜೆಪಿ ಗೋ ಪ್ರಕೋಷ್ಟದಿಂದ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ಹಿಂದೂ ವಿರೋಧಿ ಸರಕಾರವಾಗಿದ್ದು, ಗೋ ಹತ್ಯೆಗೆ ಸಹಕರಿಸುತ್ತಿದೆ. ಈ ಬಾರಿ ಜೆಡಿಎಸ್ ಜೊತೆ ಅಪವಿತ್ರ ಮೈತ್ರಿ ಮಾಡಿಕೊಂಡು ಜನಾದೇಶವನ್ನು ದಿಕ್ಕರಿಸಿದೆ. ಆದರೇ ಎಂದಿಗೂ ಬಿ.ಎಸ್.ವೈ ಅವರೇ ನಮ್ಮ ಸಿಎಂ ಎಂದರು.

ಇದೇ ಸಂದರ್ಭ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ದ ಘೋಷಣೆ ಕೂಗಲಾಯಿತು. ಮತ್ತು ಹೆದ್ದಾರಿ ಸಮೀಪ ಟಯರ್ ಸುಟ್ಟು ಆಕ್ರೋಷ ವ್ಯಕ್ತಪಡಿಸಲಾಯಿತು.

Comments are closed.