ಕುಂದಾಪುರ: ಬಿಜೆಪಿ ಪ್ರಣಾಳಿಕೆ ಕಾಂಗ್ರೆಸ್ ಪ್ರಣಾಳಿಕೆಯ ಕಾಪಿ ಎಂಬ ಆರೋಪಕ್ಕೆ ಉಡುಪಿಯ ಜಿಲ್ಲೆಯ ಕುಂದಾಪುರದ ಸಿದ್ದಾಪುರದಲ್ಲಿ ಬಿ.ಎಸ್ ಯಡಿಯೂರಪ್ಪ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಬಿ.ಎಸ್.ವೈ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ ವೀರಪ್ಪ ಮೊಯ್ಲಿ ಒಬ್ಬ ತಲೆತಿರುಕ, ಆ ಮಾತಿಗೆ ಬೆಲೆಯಿಲ್ಲ ಎಂದು ಮೊಯ್ಲಿಯನ್ನು ಏಕವಚನದಲ್ಲಿ ಸಂಭೋಧಿಸಿದ ಗರಂ ಆಗಿದ್ದಾರೆ.

ರಾಷ್ಟ್ರೀಕ್ರತ ಬ್ಯಾಂಕ್, ಸಹಕಾರಿ ಸಂಘದ 1 ಲಕ್ಷ ಸಾಲ ಮನ್ನಾ್, ತಾಳಿಭಾಗ್ಯ ಯೋಜನೆ ಇವೆಲ್ಲಾ ಬಿಜೆಪಿಯ ನೂತನ ಯೋಜನೆಗಳು. ಇದನ್ನೆಲ್ಲಾ ಕಾಂಗ್ರೆಸ್ ಎಂದೂ ಪ್ರಣಾಳಿಕೆಯಲ್ಲಿ ಸೇರಿಸಿಲ್ಲ. ಮೀನುಗಾರರು, ಪ್ರವಾಸೋಧ್ಯಮದ ಬಗ್ಗೆ ಕಾಂಗ್ರೆಸ್ ಪ್ರಣಾಳಿಕೆಯಲ್ಲೇನಿದೆ? ಲೋಕಾಯುಕ್ತ ಬಲಪಡಿಸುವ ಬಗ್ಗೆ ಈಗ ಕಾಂಗ್ರೆಸಿಗರು ಮಾತನಾಡುತ್ತಿದ್ದಾರೆ. ಈ ಐದು ವರ್ಷದಲ್ಲಿ ಅವರು ಕತ್ತೆ ಕಾಯುತ್ತಿದ್ದರಾ? ಎಂದು ಬಿ.ಎಸ್.ವೈ ಪ್ರಶ್ನಿಸಿದ್ದಾರೆ.
ಸಿಎಂ ಸಿದ್ಧರಾಮಯ್ಯ ಚಾಮುಂಡಿ, ಬಾದಾಮಿಯಲ್ಲಿ ಸೋಲುವುದು ಶತಸಿದ್ಧ ಎಂದು ಬಿ.ಎಸ್.ವೈ ಹೇಳಿದ್ದಾರೆ.
Comments are closed.