ಕರಾವಳಿ

ಹಾಲಾಡಿ ಶ್ರೀನಿವಾಸ ಶೆಟ್ಟಿ ಗೆಲುವಿನ ಬಗ್ಗೆ ಬಿ.ಎಸ್. ಯಡಿಯೂರಪ್ಪ ಹೇಳಿದ್ದೇನು?

Pinterest LinkedIn Tumblr

ಕುಂದಾಪುರ: ಕುಂದಾಪುರ ಬಿಜೆಪಿ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಗೆಲುವಿನ ಚರ್ಚೆಯ ಅಗತ್ಯವೇ ಇಲ್ಲ. 25-30 ಸಾವಿರ ಓಟಿನ ಅಂತರದಲ್ಲಿ ಅವರ ಗೆಲುವು ನಿಶ್ಚಿತ ಎಂದು ಸಿದ್ದಾಪುರದಲ್ಲಿ ಬಿ.ಎಸ್.ವೈ. ಹೇಳಿದ್ದಾರೆ.

ಕುಂದಾಪುರದ ಸಿದ್ದಾಪುರದಲ್ಲಿ ಶನಿವಾರ ಆಯೋಜಿಸಲಾಗಿದ್ದ ಬಿಜೆಪಿ ಚುನಾವಣಾ ಪ್ರಚಾರ ಸಭೆಗೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆಗಮಿಸಿದ್ರು. ವಿವಿಧ ಕಾರಕ್ರಮಗಳ ಒತ್ತಡದ ನಡುವೆ ಆಗಮಿಸಿದ ಬಿ.ಎಸ್.ವೈ ಸಭೆಯ ಮುಕ್ತಾಯದ ಬಳಿಕ ನೆರೆದಿದ್ದ ಸಾವಿರಾರು ಜನರ ಎದುರು ಹಾಲಾಡಿ ಶ್ರೀನಿವಾಸ ಶೆಟ್ಟಿಯವರನ್ನು ಉದ್ದೇಶಿಸಿ ಹೊಗಳಿಕೆಯ ಮಾತನಾಡಿದ್ರು.

ಶ್ರೀನಿವಾಸ ಶೆಟ್ಟ್ರು ಮಿತಭಾಷಿ. ಶ್ರೀನಿವಾಸ ಶೆಟ್ಟಿಯವರ ಗೆಲವಿನ ಬಗ್ಗೆ ಚರ್ಚೆ ಮಾಡುವ ಅಗತ್ಯವೇ ಇಲ್ಲ. ೨೫-೩೦ ಸಾವಿರ ಓಟಿನ ಅಂತರದಲ್ಲಿ ಹಾಲಾಡಿ ಗೆಲ್ಲುವುದು ನಿಶ್ಚಿತ ಎಂದರು.

ಸಂಪೂರ್ಣ ಕಾರ್ಯಕ್ರಮದಲ್ಲಿ ಗಂಭೀರವಾಗಿದ್ದ ಬಿ.ಎಸ್. ಯಡಿಯೂರಪ್ಪ ಹಾಲಾಡಿಯವರ ವಿಚಾರ ಮಾತನಾಡುವಾಗ ಮುಖದಲ್ಲಿ ನಗು ಎದ್ದು ಕಾಣುತ್ತಿತ್ತು.

ವರದಿ- ಯೋಗೀಶ್ ಕುಂಭಾಸಿ

Comments are closed.