ಕರಾವಳಿ

ದ.ಕ,ಜಿಲ್ಲೆಯ ಅಂಕಿತಾ ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ ದ್ವಿತೀಯ : ಇಂಜಿನಿಯರ್ ಆಗುವ ಗುರಿ

Pinterest LinkedIn Tumblr

ಮಂಗಳೂರು, ಎಪ್ರಿಲ್. 30: ಈ ಭಾರಿಯ ದ್ವಿತೀಯ ಪಿಯುಸಿಯಲ್ಲಿ ದ.ಕ.ಜಿಲ್ಲೆಯ ಸುರತ್ಕಲ್ ಗೋವಿಂದಾಸ್ ಕಾಲೇಜಿನ ವಿದ್ಯಾರ್ಥಿನಿ ಪ್ರಸಾದ್ ಎಂಬವರ ಪುತ್ರಿ ಅಂಕಿತಾ.ಪಿ ಅವರು 2ನೇ ರ್‍ಯಾಂಕ್ ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ 600ರಲ್ಲಿ 595 ಅಂಕಗಳನ್ನು ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಿರುವ ಅಂಕಿತಾ ಪಿ. ಇಂಜಿನಿಯರ್ ಆಗುವ ಗುರಿಯನ್ನು ಹೊಂದಿದ್ದಾರೆ. ಭೌತಶಾಸ್ತ್ರ, ರಸಾಯನಶಾಸ್ತ್ರ, ಸಂಖ್ಯಾಶಾಸ್ತ್ರದಲ್ಲಿ ತಲಾ 100 ಅಂಕಗಳನ್ನು ಪಡೆದಿರುವ ಅಂಕಿತಾ, ಗಣಿತದಲ್ಲಿ 99, ಸಂಸ್ಕೃತದಲ್ಲಿ 99 ಹಾಗೂ ಇಂಗ್ಲಿಷ್‌ನಲ್ಲಿ 97 ಅಂಕಗಳನ್ನು ಪಡೆದಿದ್ದಾರೆ.

ಮೂಲತ: ಸುಳ್ಯ ನಿವಾಸಿಯಾಗಿರುವ ಪ್ರಸಾದ್ ಎ. ಮತ್ತು ಭಾರತಿ ಪಿ. ದಂಪತಿ ಪುತ್ರಿ ಅಂಕಿತಾ 10ನೆ ತರಗತಿವರೆಗೆ ಎಂಆರ್‌ಪಿಎಲ್‌ನ ಡೆಲ್ಲಿ ಪಬ್ಲಿಕ್ ಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡಿದ್ದರು.ಪ್ರಸಾದ್‌ರವರು ಎಂಆರ್‌ಪಿಎಲ್ ಸಂಸ್ಥೆಯಲ್ಲಿ ಮ್ಯಾನೇಜರ್ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಭಾರತಿ ಗೃಹಿಣಿಯಾಗಿದ್ದಾರೆ.

ಇಂಜಿನಿಯರ್ ಆಗುವ ಗುರಿ :

“ಅಂಕಿತಾಗೆ ರ‍್ಯಾಂಕ್ ಬರಬೇಕೆಂಬ ಆಸೆ ಇತ್ತು. ಅದು ಈಡೇರಿದೆ. 2ನೇ ರ‍್ಯಾಂಕ್ ಮೂಲಕ ಆಕೆ ನಮಗೆಲ್ಲಾ ಖುಷಿ ತಂದಿದ್ದಾಳೆ. ಮುಂದೆ ಉತ್ತಮ ಸಂಸ್ಥೆಯಲ್ಲಿ ಇಂಜಿನಿಯರ್ ಶಿಕ್ಷಣದ ಗುರಿಯನ್ನು ಆಕೆ ಹೊಂದಿದ್ದಾಳೆ” ಎಂದು ಅಂಕಿತಾ ತಂದೆ ಪ್ರಸಾದ್ ಅವರು ಮಾಧ್ಯವೊಂದಕ್ಕೆ ತಿಳಿಸಿದ್ದಾರೆ.

Comments are closed.