ಕುಂದಾಪುರ: ಇವರದ್ದು ಪುರೋಹಿತ ಕುಟುಂಬ. ಓದಿನ ಜೊತೆಗೆ ಧಾರ್ಮಿಕತೆಯ ಬಗ್ಗೆಯೂ ಈತನಿಗೆ ಒಲವು. ಕಾಲೇಜಿನಲ್ಲಿ ಲೆಕ್ಚರರ್ ಹೇಳಿಕೊಟ್ಟಿದ್ದೇ ಪಾಠ. ಮತ್ಯಾವ ಟ್ಯ್ಶನ್ ಈತನಿಗೆ ಬೇಡ. ಕಾಮರ್ಸ್‌ನಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದ ಕುಂದಾಪುರ ಕುವರ ಕುರಿತ ಸ್ಟೋರಿಯಿದು.

ಕುಂದಾಪುರ ಆರ್.ಎನ್.ಶೆಟ್ಟಿ ಪಿಯು ಕಾಜೇಜ್ ವಿದ್ಯಾರ್ಥಿ ವೆಂಕಟೇಶ್ ಪುರಾಣಿಕ್ ಕಾಮರ್ಸ್ ವಿಭಾಗದಲ್ಲಿ 600ಕ್ಕೆ 593 ಅಂಕ ಪಡೆದು ರಾಜ್ಯಕ್ಕೆ ಎರಡನೇ ಸ್ಥಾನ ಪಡೆದು ಸಾಧನೆ ಮಾಡಿದ್ದಾನೆ. ಸ್ಟ್ಯಾಟ್-100, ಎಕನಾಮಿಕ್ಸ್-99, ಬಿಜಿನೆಸ್-100, ಅಕೌಂಟೆನ್ಸಿ-100, ಸಂಸ್ಕೃತ 100 ಹಾಗೂ ಇಂಗ್ಲೀಷ್ 96 ರಷ್ಟು ಅಂಕ ಪಡೆದಿದ್ದು, ಮುಂದೆ ಸಿಎ ಮಾಡುವ ಆಸೆ ವ್ಯಕ್ತ ಪಡಿಸಿದ್ದಾನೆ. ಕುಂದಾಪುರ ತಾಲೂಕ್ ಬಸ್ರೂರು ಮಾರ್ಗೋಳಿ ಸುಬ್ರಹ್ಮಣ್ಯ ಪುರಾಣಿಕ ಹಾಗೂ ಅನ್ನಪೂರ್ಣ ಪುರಾಣಿಕ್ ಇಬ್ಬರು ಮಕ್ಕಳಲ್ಲಿ ವೆಂಕಟೇಶ್ ಹಿರಿಯ. ತಂಗಿ ವೈಷ್ಣವಿ ಬಸ್ರೂರು ಸರ್ಕಾರಿ ಪ್ರೌಢಶಾಲೆಯಲ್ಲಿ ೮ನೇ ತರಗತಿ ವಿದ್ಯಾರ್ಥಿ. ಬಸ್ರೂರು ಸರ್ಕಾರಿ ಪೌಢಶಾಲೆಯಲ್ಲಿ ಎಸ್ಸೆಸ್‌ಎಲ್ಸಿಯಲ್ಲಿ 625ಕ್ಕೆ 622 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಪಾಸಾಗಿದ್ದು ವೆಂಕಟೇಶ್ ಹಿಂದಿನ ಸಾಧನೆ. ಅಂಕಕ್ಕಾಗಿ ಓದಬಾರದು. ಓದಿನ ಜತೆ ಇತರ ವಿಷಯದಲ್ಲೂ ಆಸಕ್ತಿ ವಹಿಸಿದರೆ, ಓದಿನ ಕಡೆ ಮತ್ತಷ್ಟು ಆಸಕ್ತಿ ಮೂಡುತ್ತದೆ. ಓದಿನೊಟ್ಟಿಗೆ ಇತರ ಹವ್ಯಾಸಗಳ ವಿದ್ಯಾರ್ಥಿಗಳು ಅಳವಡಿಸಿಕೊಳ್ಳುವುದು ಉತ್ತಮ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳುತ್ತಾನೆ ಸಾಧಕ ವೆಂಕಟೇಶ್.
ನಾವು ಮನೆಯಲ್ಲಿ ಮಗನಿಗೆ ಓದುವಂತೆ ಒತ್ತಾಯ ಮಾಡೋದಿಲ್ಲ. ದಿನಕ್ಕೆ ಇಂತಿಷ್ಟೇ ಹೊತ್ತು ಓದಬೇಕು, ಇಷ್ಟೇ ಅಂಕ ಪಡೆಯಬೇಕು ಎಂದು ಒತ್ತಡ ಹಾಕುವುದಿಲ್ಲ. ಮಗನಿಗೆ ಮೆಮೋರಿ ಪವರ್ ಹೆಚ್ಚಿದ್ದರಿಂದ ಶಾಲೆಯಲ್ಲಿ ಅಧ್ಯಾಪಕರು ಹೇಳಿದ್ದೇ ಸಾಕಾಗುತ್ತದೆ. ಅಂಕ ಪಡೆಯಬೇಕು ಅಂತ ಓದಿದ್ದರೆ ಇನ್ನೂ ಹೆಚ್ಚಿನ ಅಂಕ ಪಡೆಯುತ್ತಿದ್ದ. ರಾಜ್ಯಕ್ಕೆ ಎರಡನೇ ಸ್ಥಾನ ಪಡೆದು ಪಾಸಾದ ಮಗನ ಬಗ್ಗೆ ಹೆಮ್ಮೆಯಾಗುತ್ತದೆ ಎನ್ನೋದು ತಂದೆ ಸುಬ್ರಮಣ್ಯ ಪುರಾಣಿಕ್ ಅಭಿಪ್ರಾಯ. ಮುಂದೆ ಅವಿನಗೆ ಏನು ಇಷ್ಟವೋ ಅದನ್ನು ಆಯ್ಕೆ ಅವನೇ ಮಾಡಿಕೊಳ್ಳುವ ಸ್ವತಂತ್ರವಿದೆ. ನಾವು ಯಾವ ಒತ್ತಡ ಜೊತೆ ಇಂತಾದ್ದೇ ಓದಬೇಕು ಎಂದು ತಾಕೀತು ಮಾಡೋದಿಲ್ಲ ಎನ್ನೋದು ಅವರ ಮಾತು. ಮನೆ ಮಗನ ಸಾಧನೆಯಿಂದ ಇಡೀ ಮನೆಯಲ್ಲಿ ಹಾಗೂ ಕುಟುಂಬಸ್ಥರಲ್ಲಿ ಸಂತಸ ಹೆಚ್ಚಾಗಿದೆ. ಮಗನಿಗೆ ಸಿಹಿ ತಿನಿಸಿ ಸಂಭ್ರಮ ಆಚರಿಸಿದ್ರು.
ವರದಿ- ಯೋಗೀಶ್ ಕುಂಭಾಸಿ
Comments are closed.