ಕರಾವಳಿ

ಕ್ಷೇತ್ರದಲ್ಲಿ ಅಭೂತಪೂರ್ವ ಸ್ಪಂದನೆ – ಬಿಜೆಪಿಗೆ ಭಾರೀ ಬಹುಮತದ ಗೆಲುವು ಖಂಡಿತ : ಡಿ.ವೇದವ್ಯಾಸ್ ಕಾಮತ್

Pinterest LinkedIn Tumblr

ಮಂಗಳೂರು, ಎಪ್ರಿಲ್,30 :ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾಗಿರುವ ಡಿ.ವೇದವ್ಯಾಸ್ ಕಾಮತ್ ಅವರು ಬೋಳಾರದ ವಾರ್ಡ್ ನಂ 58 ಹಾಗೂ ವೆಲೆನ್ಸಿಯಾ ವಾರ್ಡ್ ನಂ 48ರಲ್ಲಿ ಮನೆ ಮನೆಗೆ ಭೇಟಿ ನೀಡಿ ಭಾರತೀಯ ಜನತಾ ಪಾರ್ಟಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಕ್ಷೇತ್ರದ ಮತದಾರರು ಈ ಬಾರಿ ತೋರಿಸುತ್ತಿರುವ ಅಭೂತಪೂರ್ವ ಸ್ಪಂದನೆ, ಕಾರ್ಯಕರ್ತರ ಉತ್ಸಾಹ ನೋಡಿದರೆ ಭಾರತೀಯ ಜನತಾ ಪಾರ್ಟಿಯು ಭಾರೀ ಬಹುಮತದಿಂದ ಸುಲಭ ಜಯ ಸಾಧಿಸುವುದು ನಿಚ್ಚಳವಾಗಿದೆ ಎಂದು ವೇದವ್ಯಾಸ ಕಾಮಾತ್ ಹೇಳಿದ್ದಾರೆ.

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಚುನಾವಣಾ ನಿರ್ವಹಣಾ ಸಮಿತಿಯ ಸಹ ಸಂಚಾಲಕ್. ಶ್ರೀ ರವಿಶಂಕರ್ ಮಿಜಾರ್, ಸುಧೀಂದ್ರ, ಶರಣ್ ಪಂಪ್ ವೆಲ್, ಭಾಸ್ಕರ ಚಂದ್ರ ಶೆಟ್ಟಿ, ಪ್ರಮೋದ್, ಜಗದೀಶ್, ಪ್ರದೀಪ್ ಪಂಪ್ ವೆಲ್, ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

Comments are closed.