ಕರಾವಳಿ

ರಾಜ್ಯದ ಇತಿಹಾಸದಲ್ಲಿಯೇ ಪ್ರಥಮ : ರಾಷ್ಟ್ರೀಯ ಅಧ್ಯಕ್ಷರಿಂದ ಮಂಗಳೂರಿನಲ್ಲಿ ಪಕ್ಷದ ಪ್ರಣಾಳಿಕೆ ಬಿಡುಗಡೆ – ಪ್ರಣಾಳಿಕೆಯ ಸಂಕ್ಷಿಪ್ತ ಮಾಹಿತಿ ಇಲ್ಲಿದೆ

Pinterest LinkedIn Tumblr

ಮಂಗಳೂರು, ಎಪ್ರಿಲ್.27: ಕರ್ನಾಟಕ ರಾಜ್ಯ ಕಾಂಗ್ರೆಸ್‌ನ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಂದ ಅದು ಕೂಡ ಮಂಗಳೂರು ನಗರದಲ್ಲಿ ಪಕ್ಷದ ಪ್ರಣಾಳಿಕೆಯನ್ನು ಶುಕ್ರವಾರ ಬಿಡುಗಡೆಗೊಂಡಿದ್ದು, ಪ್ರಣಾಳಿಕೆಯಲ್ಲಿ ಎಲ್ಲಾ ಸಮುದಾಯದ ಎಲ್ಲಾ ವರ್ಗಗಳನ್ನೂ ಆಕರ್ಷಿಸುವ ಭರವಸೆಗಳನ್ನು ನೀಡಲಾಗಿದೆ.

* ಕರ್ನಾಟಕದ ಕೃಷಿ ಕಾರಿಡಾರ್‌ಗಳ ಸೃಷ್ಟಿ

*ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷದ ಈವರೆಗೆ ರಾಜ್ಯದಲ್ಲಿ ಸಾಧಿಸಿರುವ ಪ್ರಗತಿಗಳ ಜತೆಗೆ ಕೃಷಿ ಕ್ಷೇತ್ರಕ್ಕೆ ಪ್ರಮುಖ ಆದ್ಯತೆ ನೀಡಲಾಗಿದೆ. ಕೃಷಿ ಕ್ಷೇತ್ರದ ಅಭ್ಯುದಯದ ದೃಷ್ಟಿಯಿಂದ ‘ಕರ್ನಾಟಕದ ಕೃಷಿ ಕಾರಿಡಾರ್‌ಗಳ ಸೃಷ್ಟಿ’ಯ ಭರವಸೆ ನೀಡಲಾಗಿದೆ.

*ಕರ್ನಾಟಕದಲ್ಲಿ ಕೃಷಿ ಕಾರಿಡಾರ್‌ಗಳ ಅಭಿವೃದ್ಧಿಯ ಮೂಲಕ ಸುಸ್ಥಿರ ಕೃಷಿ ವಹಿವಾಟನ್ನು ಅಭಿವೃದ್ಧಿಪಡಿಸುವ ಯೋಜನೆಗಳ ಭರವಸೆ.

ರೈತರಿಗೆ ಸುಧಾರಿತ ಉತ್ಪಾದಕತೆ ಮತ್ತು ಆದಾಯ ಭದ್ರತೆ, ಹವಾಮಾನ ಚೇತರಿಸಿಕೊಳ್ಳುವ ತಂತ್ರಜ್ಞಾನ, ಮೌಲ್ಯಾಧಾರಿತ ಮತ್ತು ಸುಧಾರಿತ ಮಾರುಕಟ್ಟೆ ಜಾಲವನ್ನು ನಿರ್ಮಿಸಿ ಅವರಿಗೆ ಸುಸ್ಥಿರ ಜೀವನವನ್ನು ಕಟ್ಟಿಕೊಡುವ ಭರವಸೆಯನ್ನು ನೀಡಲಾಗಿದೆ. ಸರಕಾರಿ ಶಾಲೆಗಳ 12ನೆ ತರಗತಿವರೆಗೆ ಉಚಿತ ಶಿಕ್ಷಣ

* ಪ್ರಸ್ತುತ ರಾಜ್ಯದಲ್ಲಿ 1ರಿಂದ 12 ವರ್ಷದವರೆಗಿನ ಮಕ್ಕಳಿಗೆ ಶಿಕ್ಷಣದ ಖಾತರಿಯನ್ನು ನೀಡಲಾಗಿದೆ. ಇದೀಗ ಸರಕಾರಿ ಶಾಲೆಗಳಲ್ಲಿ 12ನೆ ತರಗತಿವರೆಗೆ ಉಚಿತ ಶಿಕ್ಷಣವನ್ನು ಒದಗಿಸುವ ಭರವಸೆಯನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ.

* 18ರಿಂದ 23 ವರ್ಷ ಪ್ರಾಯದ ಎಲ್ಲಾ ಕಾಲೇಜು ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಫೋನ್.

* ವೃತ್ತಿ ತರಬೇತಿ ವಿಶ್ವವಿದ್ಯಾಲಯವನ್ನು ಕೌಶಲ್ಯಾಭಿವೃದ್ಧಿಗಾಗಿ ರಚನೆ.

* ಒಂದು ಹೊಸ ಕರ್ನಾಟಕ ವಿಜ್ಞಾನ, ತಂತ್ರಜ್ಞಾನ, ಮಾನವಶಾಸ್ತ್ರ ಮತ್ತು ಸಮಾಜ ವಿಜ್ಞಾನ ಫೌಂಡೇಶನ್ (ಕೆಎಸ್‌ಟಿಎಚ್‌ಎಸ್‌ಎಫ್)ನ್ನು ಈ ಎಲ್ಲಾ ವಿಷಯಗಳಲ್ಲಿ ಸಂಶೋಧನೆಗಳನ್ನು ಮಾಡಲು ಸ್ಥಾಪನೆ ಮಾಡಲಾಗುವುದು.

* ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಅಂತರ್ಜಾಲ ಸಂಪರ್ಕ ಮತ್ತು ಇತರ ತಾಂತ್ರಿಕ ಮೂಲಭೂತ ಸೌಕರ್ಯಗಳನ್ನು ಉತ್ತಮಪಡಿಸುವುದು.

*ಶೈಕ್ಷಣಿಕ ಸಂಸ್ಥೆಗಳ ಆದಾಯ ಮತ್ತು ವೆಚ್ಚಕ್ಕೆ ಸಂಬಂಧಿಸಿ ಉತ್ತಮವಾದ ಹಣಕಾಸು ಪಾದರದರ್ಶಕತೆಯನ್ನು ಖಚಿತಪಡಿಸಲು ಸೂಕ್ತ ಕಾನೂನು ರಚನೆ.

*ಪ್ರೌಢಶಾಲಾ ಹಂತದಲ್ಲಿಯೇ ವೃತ್ತಿಪರ ಶಿಕ್ಷಣ ಆರಂಭ.

* ರಾಜ್ಯದ ಐದು ವಿಶ್ವವಿದ್ಯಾನಿಲಯಗಳನ್ನು ವಿಶ್ವದರ್ಜೆ ವಿಶ್ವವಿದ್ಯಾನಿಲಯಗಳನ್ನಾಗಿಸುವುದು. ಒಲಿಂಪಿಕ್ಸ್ ಪದಕ ವಿಜೇತರಿಗೆ 1 ಕೋಟಿ ರೂ. ನಗದು

* ಕರ್ನಾಟಕದ ಯಾವುದೇ ಕ್ರೀಡಾಪಟು ಒಲಿಪಿಂಕ್ಸ್‌ನಲ್ಲಿ ಪದಕ ಗಳಿಸಿದರೆ ಅವರಿಗೆ 1 ಕೋಟಿ ರೂ. ನಗದು ಬಹುಮಾನ ಮತ್ತು ಇತರ ಅಂತರ್ ರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳಲ್ಲಿ ಗೆದ್ದರೆ ನಗದು ಬಹುಮಾನ.

*ಬೋಧನಾ ಸೌಲಭ್ಯಗಳೊಂದಿಗೆ ಎಲ್ಲಾ ತಾಲೂಕುಗಳಲ್ಲಿ ಕ್ರೀಡಾ ಕೇಂದ್ರಗಳ ಆರಂಭಿಸಲು ಯೋಜನೆಗಳ ಪ್ರಾರಂಭ.

* ಮಕ್ಕಳಿಗೆ ಕ್ರೀಡಾ ಸಂಸ್ಕೃತಿಯನ್ನು ಹೆಚ್ಚಿಸಲು ಕ್ರೀಡೆ ಮತ್ತು ಯೋಗವನ್ನು ಶಾಲೆಯಲ್ಲಿ ಕಡ್ಡಾಯ ವಿಷಯವಾಗಿಸುವುದು.

* ಕನಿಷ್ಠ ಒಂದು ರಾಷ್ಟ್ರೀಯ ಸ್ಪರ್ಧೆಯನ್ನು ರಾಜ್ಯದಲ್ಲಿ ಪ್ರತಿ ವರ್ಷ ಆಯೋಜಿಸುವುದು ಮತ್ತು ಕನಿಷ್ಠ ಒಂದು ಅಂತರ್ ರಾಷ್ಟ್ರೀಯ ಸ್ಪರ್ಧೆಯನ್ನು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಆಯೋಜಿಸುವುದು.

* ಬೆಂಗಳೂರಿನಲ್ಲಿ ಕನಿಷ್ಠ 10 ಅಂತರ್‌ರಾಷ್ಟ್ರೀಯ ಮಟ್ಟದ ಕ್ರೀಡಾಂಗಣಗಳನ್ನು ನಿರ್ಮಿಸಿ, ಅಂತರ್ ರಾಷ್ಟ್ರೀಯ ಕ್ರೀಡಾ ಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸುವುದು.

* ಮೈಸೂರಿನಲ್ಲಿ ಕ್ರೀಡಾ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುವುದು. ಸಾಹಿತ್ಯ ಭಾಷಾ ಪ್ರಾಧಿಕಾರ ರಚನೆ

* ರಾಜ್ಯದಲ್ಲಿ ಸಾಹಿತ್ಯ ಭಾಷಾ ಪ್ರಾಧಿಕಾರವನ್ನು ರಚನೆ ಮಾಡಲಾಗುವುದು.

* ಗ್ರಾಮೀಣ ಸಾಂಸ್ಕೃತಿಕ ಕೇಂದ್ರಗಳನ್ನು ಸ್ಥಾಪಿಸಿ, ಶಾಸ್ತ್ರೀಯ ನೃತ್ಯ/ಜನಪದ ನೃತ್ಯ ಮತ್ತು ಹಾಡುಗಳು/ ಜನಪದ ಇತ್ಯಾದಿಗಳನ್ನು ಬೋಧಿಸುವುದು. ಶೇ.100 ವಿದ್ಯುತ್ ನೀಡುವ ಭರವಸೆ

* ಪರಿಸರವನ್ನು ರಕ್ಷಿಸಲು ಪಕ್ಷ ಬದ್ಧವಾಗಿದ್ದು, ಶುದ್ಧವಾದ ವಿದ್ಯುತ್ ಬಳಕೆಯ ನಿಟ್ಟಿನಲ್ಲಿ ನವೀಕರಿಸಬಹುದಾದ ವಿದ್ಯುತ್‌ಗೆ ಶೇ.50ರಷ್ಟು ಬದಲಾಗಲಿದೆ. ಇದರೊಂದಿಗೆ ಶೇ.100 ವಿದ್ಯುತ್ ನೀಡುವ ಭರವಸೆ. ಪ್ರಗತಿಪರ ರಾಜ್ಯಕ್ಕಾಗಿ ಉತ್ಪಾದಕ ಉದ್ಯಮ

* ಕರ್ನಾಟಕ ಸೌಕರ್ಯ ಕಾಯಿದೆ, 2002ರಡಿ ಏಕಗವಾಕ್ಷಿ ಅನುಮೋದನೆ ನೀಡಿಕೆಯ ಮೂಲಕ ಆನ್‌ಲೈನ್ ಪೋರ್ಟಲ್(www.ebizKarnataka.gov.in), ಇದರಲ್ಲಿ 15 ಸಂಬಂಧಪಟ್ಟ ಇಲಾಖೆಗಳ ನೋಂದಣಿ ಮತ್ತು ಅನುಮೋದನೆ.

* ಹೂಡಿಕೆ ಕರ್ನಾಟಕ ಫೋರಂನ್ನು ಆರ್ಥಿಕ ಅಭಿವೃದ್ಧಿ ಬೋರ್ಡ್ ಸಿಂಗಪೂರ್ ಸಹಯೋಗದೊಂದಿಗೆ ಸ್ಥಾಪಿಸಿ ಬ್ರಾಂಡ್ ಕರ್ನಾಟಕವನ್ನು ಪ್ರೋತ್ಸಾಹಿಸುವುದು. ಜಾಗತಿಕವಾಗಿ ರಾಜ್ಯಕ್ಕೆ ಹೂಡಿಕೆಯನ್ನು ಆಹ್ವಾನಿಸುವುದು. 1 ಕೋಟಿ ರೂ.ವರೆಗೆ ‘ಸ್ಟಾರ್ಟ್‌ಅಪ್ ಸಬ್ಸಿಡಿ

* ಅಂತರ್ ರಾಷ್ಟ್ರೀಯ ಪೇಟೆಂಟ್ ಇರುವ ಕಂಪೆನಿಗಳಿಗೆ ಪ್ರೋತ್ಸಾಹಕ್ಕಾಗಿ ಸ್ಟಾರ್ಟಪ್ ಸಬ್ಸಿಡಿ ಒದಗಿಸಲಾಗುವುದು. ಇದರಿಂದ ಕಂಪೆನಿಯು ತಕ್ಷಣ ಉತ್ಪಾದನೆ ಆರಂಭಿಸಬಹುದು. ಅದು ಸಮಾರು 25 ಲಕ್ಷ ರೂ. ಅನುದಾನದಿಂದ 1 ಕೋಟಿ ರೂ.ವರೆಗೆ ಒಳಗೊಂಡಿರುತ್ತದೆ ಮತ್ತು ಶೇ.6ರಂತೆ ಸುಮಾರು 75 ಲಕ್ಷ ರೂ.ಗಳ ಸಾಫ್ಟ್ ಸಾಲ.

* ಸೌರ ವಿದ್ಯುತ್ ಬಳಕೆ/ ಖರೀದಿಗೆ ಪ್ರೋತ್ಸಾಹ. ಉನ್ನತ ಮಟ್ಟದ ಐಟಿ ಪ್ರತಿಭಾ ಪೂಲ್ (ಟ್ಯಾಲೆಂಟ್ ಪೂಲ್)ರಚನೆ

* 3 ಮಿಲಿಯನ್‌ಗಳಿಗಿಂತಲೂ ಹೆಚ್ಚು ಮಾಹಿತಿ ತಂತ್ರಜ್ಞಾನದ ಉದ್ಯೋಗಳನ್ನು ಪೂರೈಸಲು, ಕೌಶಲ್ಯ ವೃದ್ಧಿಸುವ ಮತ್ತು ಮಾಹಿತಿ ತಂತ್ರಜ್ಞಾನವನ್ನು ಒಳಗೊಂಡಿರುವ ಪಠ್ಯಕ್ರಮಗಳ ಮೂಲಕ ಉನ್ನತ ಮಟ್ಟದ ಐಟಿ ಪ್ರತಿಭಾ ಪೂಲ್ (ಟ್ಯಾಲೆಂಟ್ ಪೂಲ್)ಗಳ ನಿರ್ಮಾಣ.

* ಐಟಿ ಕ್ಷೇತ್ರವನ್ನು ರಾಜ್ಯದ ಜಿಎಸ್‌ಡಿಪಿಗೆ ಶೇ.25ಕ್ಕಿಂತ ಹೆಚ್ಚು ಮತುತ ಭಾರತದ ತಂತ್ರಜ್ಞಾನಕ್ಕೆ ಸಂಬಂಧಿಸಿದ ಒಟ್ಟು ವಹಿವಾಟಿನ ಶೇ.33ರಷ್ಟು ಕೊಡುಗೆಯನ್ನು ನೀಡಲು ವಿಸ್ತರಣೆ.

*ಐಟಿ ಕೊಡುಗೆಯನ್ನು ಈಗಿನ 60 ಬಿಲಿಯನ್‌ ಯುಎಸ್ ಡಾಲರ್‌ನಿಂದ 300 ಬಿಲಿಯನ್ ಯುಎಸ್ ಡಾಲರ್‌ಗೆ ಏರಿಕೆಗೆ ಕ್ರಮ. ಮಂಗಳೂರು ಮತ್ತು ಹುಬ್ಬಳ್ಳಿ ನಡುವೆ ವಾಯುಯಾನ ಸಂಪರ್ಕ

* ಮಂಗಳೂರು ಮತ್ತು ಹುಬ್ಬಳ್ಳಿ ನಡುವೆ ವಾಯುಯಾನ ಸಂಪರ್ಕವನ್ನು ಕಲ್ಪಿಸುವುದು.

*ರಾಜ್ಯಕ್ಕಾಗಿ ಆಂತರಿಕ ಬಂದರು ಪ್ರಾಧಿಕಾರ ರಚಿಸಿ ಅದನ್ನು ಕಾರ್ಯಗತಗೊಳಿಸುವುದು.

*ರಾಜ್ಯದಲ್ಲಿ ವಿಮಾನ ನಿಲ್ದಾಣಗಳು ಮತ್ತು ಅರ್‌ಸ್ಟ್ರೀಪ್ ಮೂಲ ಸೌಕರ್ಯಗಳ ಅಭಿವೃದ್ಧಿ.

*ಸ್ಯಾಟ್ ಲೈಟ್ ಪಟ್ಟಣಗಳ ಅಭಿವೃದ್ಧಿಗೆ ಉತ್ತೇಜನ.

* 2ನೆ ಟಯರ್ ಸಿಟಿಗಳಾದ ಮೈಸೂರು, ಹುಬ್ಬಳ್ಳಿ, ಧಾರವಾಡ, ವಿಜಯಪುರ, ಕಲ್ಬುರ್ಗಿ, ಮಂಗಳೂರು ನಗರಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗಾಗಿ ಸರಕಾರ ವಿಶೇಷ ಪ್ಯಾಕೇಜ್ ಒದಗಿಸಲಿದೆ.

* ಸಿಗಡಿ ಸಾಕಣೆ, ಮತ್ಸೋದ್ಯಮ ಅಭಿವೃದ್ದಿ ಮತ್ತು ಅಕ್ವಾಕಲ್ಚರ್ ಕ್ಷೇತ್ರಗಳಲ್ಲಿ ಕರ್ನಾಟಕ ಪ್ರಥಮ ಸ್ಥಾನ ಗಳಿಸುವಂತೆ ಮಾಡುವುದು.

*ಗಣಿಗಾರಿಕೆ ಚಟುವಟಿಕೆಯಿಂದ ಹಾನಿಗೊಳಗಾದ ಜನರಿಗೆ ಮೂಲ ಸೌಕರ್ಯವನ್ನು ಒದಗಿಸುವುದು ಮತ್ತು ಅವರ ಕೌಶಲ್ಯಾಭಿವೃದ್ದಿಗಾಗಿ 8,000 ಕೋಟಿ ರೂ.ಗಳನ್ನು ಮೀಸಲಿಡುವುದು.

* ಜೀವನಾಧಾರಕ್ಕಾಗಿ ಒಳನಾಡು ಮೀನುಗಾರಿಕೆ ಮೇಲೆ ಅವಲಂಬಿತವಾದ ಮೀನುಗರರಿಗೆ ಅಗತ್ಯ ಮೂಲಸೌಕರ್ಯ, ಹಣಕಾಸಿನ ನೆರವು. ಸ್ಥಳೀಯ ಮಾರುಕಟ್ಟೆ ಹಾಗೂ ಅಂತರ್ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಉತ್ತಮ ವೇದಿಕೆ ಕಲ್ಪಿಸುವುದು. ಕೆರೆಗಳನ್ನು ತುಂಬಲು ವಿಶ್ವೇಶ್ವರಯ್ಯ ಅಭಿಯಾನ

* ಕೆರೆಗಳನ್ನು ತುಂಬಲು ವಿಶ್ವೇಶ್ವರಯ್ಯ ಅಭಿಯಾನ ಆರಂಭಿಸಲಾಗುವುದು.

* 2018-2023ರ ಅವಧಿಯಲ್ಲಿ ನೀರಾವರಿಗಾಗಿ 1,25,000 ಕೋ.ರೂ. ಮೀಸಲು.

* ಹುಬ್ಬಳ್ಳಿ, ಧಾರವಾಡ, ಹಾವೇರಿ ಮತ್ತು ಗದಗಳನ್ನು ಒಳಗೊಂಡ ಕರ್ನಾಟಕದ ಮಧ್ಯ ಭಾಗಕ್ಕೆ ಕುಡಿಯಲು ಮತ್ತು ಕೃಷಿ ನೀರಾವರಿ ಅಗತ್ಯಗಳಿಗಾಗಿ ನೀರನ್ನೊದಗಿಸುವ ಭರವಸೆ.

*ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸುವುದು.

* ಕಾವೇರಿ 4ನೆ ಹಂತವನ್ನು ಮುಂದುವರಿಸಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಮತ್ತು ಇತರ ಪ್ರದೇಶಗಳಿಗೆ ಕಾವೇರಿ ಅಚ್ಚುಕಟ್ಟಿನಡಿ ಕುಡಿಯುವ ನೀರನ್ನು ಒದಗಿಸಲು ಯೋಜನೆ ಹಾಕುವುದು ಮತ್ತು ಯೋಜನೆಗಳನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸುವುದು. ಇದರಿಂದ ಸುಮಾರು 75 ಟಿಎಂಸಿ ನೀರನ್ನು ಬಳಸಿಕೊಳ್ಳಬಹುದು.

* ಬೆಂಗಳೂರಿನ 192 ಕೆರೆಗಳನ್ನು ಅಭಿಯಾನ ಮಾದರಿಯಲ್ಲಿ ಸ್ವಚ್ಛಗೊಳಿಸಿ ಪುನಶ್ಚೇತನಗೊಳಿಸುವುದು.

*ಕನಿಷ್ಠ 2000 ಜನಸಂಖ್ಯೆಯಿರುವ ಗ್ರಾಮಗಳಿಗೆ ಕುಡಿಯುವ ನೀರನ್ನು ನಳ್ಳಿಗಳ ಮೂಲಕ ಪೂರೈಕೆ.

*ಪಶ್ಚಿಮ ವಾಹಿನಿ ಯೋಜನೆಗೆ ಶೀಘ್ರವೇ ಪ್ರೋತ್ಸಾಹ ನೀಡಿ ಕುಡಿಯುವ ನೀರನ್ನು ಒದಗಿಸುವುದು. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ನೀರಾವರಿಗೆ ಅವಕಾಶ ಮಾಡಿಕೊಡುವುದು. ಪ್ರತಿ ಗ್ರಾ.ಪಂ.ನಲ್ಲಿ ಒಂದು ಸ್ಮಾರ್ಟ್ ಗ್ರಾಮ

* ಪ್ರತಿ ಗ್ರಾಮ ಪಂಚಾಯತ್‌ನಲ್ಲಿ ಒಂದು ಸ್ಮಾರ್ಟ್ ಗ್ರಾಮ ಅಭಿವೃದ್ದಿ.

* ಎಲ್ಲಾ ಸಾರ್ವಜನಿಕ ಸೇವೆಗಳ ಮಾಹಿತಿಗಳನ್ನು ಗ್ರಾಮ ಪಂಚಾಯತ್‌ಗಳಲ್ಲಿ ಏಕೀಕರಿಸುವುದು ಮತ್ತು ಇವುಗಳನ್ನು ಎಲ್‌ಇಡಿ ಪ್ರದರ್ಶನಗಳ ಮೂಲಕ ಪ್ರದರ್ಶಿಸುವುದು. ಇದಕ್ಕಾಗಿ ಸೌರ ವಿದ್ಯುತ್ ಬಳಸುವುದು.

*ಗ್ರಾಮಕ್ಕೊಂದು ಗ್ರಾಮ ಅಭಿವೃದ್ಧಿ ಸಮಿತಿ ರಚನೆ. ತಾಲೂಕು ಮಟ್ಟದಲ್ಲಿ ರುಡ್‌ಸೆಟ್‌ಗಳ ಸ್ಥಾಪನೆ

* ವಿವಿಧ ವ್ಯಾಪಾರವನ್ನು ಒಳಗೊಂಡ ರುಡ್‌ಸೆಟ್‌ಗಳನ್ನು ತಾಲೂಕು ಮಟ್ಟದಲ್ಲಿ ಸ್ಥಾಪಿಸುವುದು.

*ಐಟಿಐಗಳ ಸಬಲೀಕರಣ ಮತ್ತು ಸಶಕ್ತಗೊಳಿಸುವುದು.

* ಜಿಲ್ಲಾ ಮಟ್ಟದಲ್ಲಿ ಉಪಸಂಸ್ಥೆ ಮಾದರಿಯಲ್ಲಿ ವಿಶೇಷವಾದ ಮಾರಾಟ ಮಳಿಗೆಳನ್ನು ಸ್ಥಾಪನೆ ಮಾಡುವುದು. ವಾರ್ಷಿಕ ಕನಿಷ್ಠ 15 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ

* ರಾಜ್ಯದಲ್ಲಿ ವಾರ್ಷಿಕ ಕನಿಷ್ಠ 10-15 ಲಕ್ಷ ಉದ್ಯೋಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಲಾಗಿದೆ.

*ಕೌಶಲ್ಯಾಭಿವೃದ್ಧಿಯಲ್ಲಿ ಪರಿಣಿತ ತರಬೇತುದಾರರನ್ನು ತರಬೇತುಗೊಳಿಸಲು ಕೇಂದ್ರಗಳನ್ನು ತೆರೆಯಲಾಗುವುದು. ಅವು ಮೋಕ್ಷಗುಂಡಂ ಸರ್ ಎಂ. ವಿಶ್ವೇಶ್ವರಯ್ಯ ಕೇಂದ್ರಗಳಂತೆ ಕಾರ್ಯ ನಿರ್ವಹಿಸಲಿವೆ. ಒಬಿಸಿ ನಿಗಮ ಸ್ಥಾಪನೆ

* ಕಾಂಗ್ರೆಸ್ ಓಬಿಸಿ ನಿಗಮ ಸ್ಥಾಪಿಸಲಿದ್ದು, ಇದು ಇತರ ಹಿಂದುಳಿದ ವರ್ಗಗಳ ಸಮಸ್ಯೆಗಳನ್ನು ಪರಿಹರಿಸಲಿದೆ.

* ಸಾಮಾಜಿಕ ನ್ಯಾಯದಡಿ ಬಿಪಿಎಲ್ ಸ್ಲಾಬನ್ನು 2 ಲಕ್ಷ ರೂ.ಗಳಿಗೆ ಏರಿಕೆ ಮಾಡಲಾಗುವುದು.

* ಒಬಿಸಿ ಸಮುದಾಯದ ವಿದ್ಯಾರ್ಥಿಗಳ ಪ್ರವೇಶ ಶುಲ್ಕದಲ್ಲಿ ಶೇ. 75ರಷ್ಟು ರಿಯಾಯಿತಿ.

*500 ಕುಶಲಕರ್ಮಿ ಉದ್ಯಮಗಳ ಸ್ಥಾಪನೆ.

* ತೃತೀಯ ಲಿಂಗಿಗಳು ಸಾಂವಿಧಾನಿಕ ಹಕ್ಕು ಮತ್ತು ಸ್ವಾತಂತ್ರವನ್ನು ಪಡೆಯುವ ನಿಟ್ಟಿನಲ್ಲಿ ಸಾರ್ವಜನಿಕ ಸ್ಥಳಗಳು, ಸಂಪನ್ಮೂಲಗಳು ಮತ್ತು ಅಭಿವ್ಯಕ್ತಿ ಸ್ವಾತಂತ್ರವನ್ನು ಪಡೆಯುವುದನ್ನು ಖಚಿತಪಡಿಸುವುದು.

* ತೃತೀಯ ಲಿಂಗಿಗಳಿಗೆ ವೃತ್ತಿಪರ ತರಬೇತಿ.

* ಉದ್ಯೋಗಿನಿ ಯೋಜನೆಯನ್ನು ತೃತೀಯ ಲಿಂಗಿಗಳಿಗೂ ವಿಸ್ತರಿಸುವುದು.

* ಸಫಾಯಿ ಕರ್ಮಚಾರಿ, ಸ್ಮಶಾನ ಅಗೆಯುವವರಿಗೆ ಶೇ.10ರಷ್ಟು ಮನೆಗಳನ್ನು ಮೀಸಲಿರಿಸುವುದು.

* ವಕ್ಫ್ ಸ್ವತ್ತುಗಳ ಅಭಿವನದ್ಧಿ ಮಂಡಳಿ ರಚನೆ.

* ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾ ಮಟ್ಟದ ಕೌಶಲ್ಯಾಭಿವೃದ್ಧಿ ಕೇಂದ್ರ ತೆರೆಯುವುದು.

*ಮೊರಾರ್ಜಿ ದೇಸಾಯಿ ಶಾಲೆಗಳನ್ನು ಪಿಯುಸಿ ಮಟ್ಟಕ್ಕೆ ಮೇಲ್ದರ್ಜೆಗೇರಿಸುವುದು.

* 1000 ಮೌಲಾನಾ ಆಝಾದ್ ಶಾಲೆಗಳ ನಿರ್ಮಾಣ. ಪ್ರತಿ ತಾಲೂಕಿನಲ್ಲಿ ಮೌಲಾನಾ ಶಾಲೆಗಳ ಸ್ಥಾಪನೆ.

* ಅಲ್ಪಸಂಖ್ಯಾತರ ಶೈಕ್ಷಣಿಕ ಸ್ತಿತಿಗತಿಯನ್ನು ಅಭಿವೃದ್ಧಿಪಡಿಸಲು 250 ಹಾಸ್ಟೆಲ್‌ಗಳು ಮತ್ತು 150 ವಸತಿ ಶಾಲೆಗಳನ್ನು ನಿರ್ಮಿಸಿ 12,500 ಮತ್ತು 37,500 ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವುದು.

* ಸ್ನಾತಕೋತ್ತರ ಮಟ್ಟದಲ್ಲಿ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ

* ಉದ್ಯೋಗದಲ್ಲಿ ಶೇ.30 ಮೀಸಲಾತಿ ಹಾಗೂ ಸ್ನಾತಕೋತ್ತರ ಮಟ್ಟದಲ್ಲಿ ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ.

* ಕುಟುಂಬಶ್ರೀ ಮಾದರಿಯಲ್ಲಿ ರಾಜ್ಯ ಮಟ್ಟದ ಸ್ತ್ರೀಶಕ್ತಿ ಒಕ್ಕೂಟ ರಚನೆ

* ಸ್ಯಾನಿಟರಿ ಪ್ಯಾಡ್‌ಗಳ ಮೇಲಿನ ತೆರಿಗೆ ತೆಗೆದು ಹಾಕುವುದು.

* ಮೆಟ್ರಿಕ್‌ಗಿಂತ ಕಡಿಮೆ ಓದಿರುವ ಮಹಿಳೆಯರಿಗೆ ಆರ್‌ಟಿಓದಲ್ಲಿ ಉಚಿತ ಮೋಟಾರು ವಾಹನ ತರಬೇತಿ. ಅವರಿಗೆ ರಿಯಾಯಿತಿ ದರದಲ್ಲಿ ಆಟೋರಿಕ್ಷಾ, ಕಾರುಗಳನ್ನು ಒದಗಿಸುವುದು.

* ಮಹಿಳೆಯರಿಗೆ ಮಾತ್ರ ಸೇವೆಗಳನ್ನು ಸಂಜೆ 7ರಿಂದ ಬೆಳಗ್ಗೆ 7 ಗಂಟೆಯವರೆಗೆ ಪಿಂಕ್ ಬಸ್‌ಗಳ ಸೌಲಭ್ಯ.

__ವಾಭಾ

Comments are closed.