ರಾಷ್ಟ್ರೀಯ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ2 2018 ಬಿಡುಗಡೆ

Pinterest LinkedIn Tumblr


ಹೊಸದಿಲ್ಲಿ: ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ ಸರಣಿಯಲ್ಲಿ ಪರಿಷ್ಕೃತ 2018 ಜೆ2 ಆವೃತ್ತಿಯನ್ನು ದೇಶದಲ್ಲಿ ಬಿಡುಗಡೆ ಮಾಡಿದೆ. ಕಳೆದ ವರ್ಷ ಬಿಡುಗಡೆಯಾಗಿದ್ದ ಗ್ಯಾಲಕ್ಸಿ ಜೆ2 ಸ್ಮಾರ್ಟ್‌ಫೋನ್ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿತ್ತು. ಹೀಗಾಗಿ ಅದರ ಸುಧಾರಿತ ಆವೃತ್ತಿಯನ್ನು ಸ್ಯಾಮ್‌ಸಂಗ್ ಹೊರತಂದಿದೆ.

ಬೆಲೆ: 8,190 ರೂ.

ಜೆ2 2018 ಮಾದರಿಯಲ್ಲಿ ಸ್ಯಾಮ್‌ಸಂಗ್‌ ಮಾಲ್ ಆ್ಯಪ್‌ ಮತ್ತು ಉಪಕರಣ ನಿರ್ವಹಣೆ (ಡಿವೈಸ್‌ ಮೇಂಟೆನೆನ್ಸ್‌-ಮೀಡಿಯಾ ಫೈಲ್‌ಗಳನ್ನು ನೇರವಾಗಿ ಮೆಮೊರಿ ಕಾರ್ಡ್‌ಗೆ ಸೇವ್‌ ಮಾಡುತ್ತದೆ) ಆಯ್ಕೆ ನೀಡಿದ್ದು, ಬಳಕೆದಾರರಿಗೆ ಪ್ರಯೋಜನವಾಗಲಿದೆ. ಮೂವ್‌ ಟು ಮೆಮೊರಿ ಕಾರ್ಡ್ ಆಯ್ಕೆಯಿಂದ ಸ್ಮಾರ್ಟ್ ಫೋನ್‌ನ ಆಂತರಿಕ ಮೆಮೊರಿಯಲ್ಲಿ ಸಂಗ್ರಹವಾಗುವ ಫೈಲ್‌ಗಳನ್ನು ಸುಲಭದಲ್ಲಿ ಮೆಮೊರಿ ಕಾರ್ಡ್‌ಗೆ ವರ್ಗಾಯಿಸಬಹುದಾಗಿದೆ.

ಆಫರ್:

ರಿಲಯನ್ಸ್ ಜಿಯೋ ಜತೆ ಸ್ಯಾಮ್‌ಸಂಗ್‌ ಆಫರ್‌ ನೀಡುತ್ತಿದ್ದು, ಮೈಜಿಯೋ ಆ್ಯಪ್‌ ಮೂಲಕ 198 ರೂ. ಅಥವಾ 299 ರೂ. ರೀಚಾರ್ಜ್‌ ಮಾಡುವ ಬಳಕೆದಾರರಿಗೆ 2,750 ರೂ. ಕ್ಯಾಶ್‌ಬ್ಯಾಕ್‌ ದೊರೆಯಲಿದೆ. ಜತೆಗೆ ಜಿಯೋ ಆಫರ್‌ ಮೂಲಕ ಮುಂದಿನ 10 ರೀಚಾರ್ಜ್‌ವರೆಗೆ ಪ್ರತಿಬಾರಿ 10 ಜಿಬಿ ಡೇಟಾ ದೊರೆಯಲಿದೆ.

ಸ್ಯಾಮ್‌ಸಂಗ್ ಜೆ2 (2018)

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ2 2018 ವೈಶಿಷ್ಟ್ಯಗಳು:
5 ಇಂಚಿನ ಕ್ಯೂಎಚ್‌ಡಿ ಸೂಪರ್‌ ಅಮೋಲೆಡ್‌ (qHD Super AMOLED) ಡಿಸ್‌ಪ್ಲೇ,
960×540 ಪಿಕ್ಸೆಲ್ ರೆಸೊಲ್ಯೂಷನ್,
1.4 GHz ಕ್ವಾಡ್‌-ಕೋರ್‌ ಕ್ವಾಲ್‌ಕಾಂ ಸ್ನಾಪ್‌ಡ್ರಾಗನ್‌ 425 ಪ್ರೊಸೆಸರ್‌

ಸ್ಟೋರೆಜ್:
2 ಜಿಬಿ ರ‍್ಯಾಮ್‌,
16 ಜಿಬಿ ಸ್ಟೋರೇಜ್‌ ಸಾಮರ್ಥ್ಯ (128 ಜಿಬಿವರೆಗೆ ವಿಸ್ತರಿಸಬಹುದು)

ಕ್ಯಾಮೆರಾ:
8 ಎಂಪಿ ಹಿಂಬದಿ ಕ್ಯಾಮರಾ,
5 ಎಂಪಿ ಸೆಲ್ಫಿ ಕ್ಯಾಮರಾ (ಎರಡೂ ಬದಿ ಎಲ್‌ಇಡಿ ಫ್ಲ್ಯಾಶ್‌)

ಬ್ಯಾಟರಿ: 2600mAh

Comments are closed.