ಕರಾವಳಿ

ಬಿಜೆಪಿ ಹಿರಿಯ (ಮಾಜಿ) ಮುಖಂಡ ಶ್ರೀಕರ ಪ್ರಭು ನಾಮಪತ್ರ ಸಲ್ಲಿಕ್ಕೆ : ಬಿಜೆಪಿ ಸಿದ್ಧಾಂತದಡಿ ನನ್ನ ಗೆಲುವು ಶತಸಿದ್ಧ ಎಂದ ಪ್ರಭು

Pinterest LinkedIn Tumblr

ಮಂಗಳೂರು : ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶ್ರೀಕರ ಪ್ರಭುರವರು ಸೋಮವಾರ ನಾಮಪತ್ರ ಸಲ್ಲಿಸಿದರು.

ಭಾರತೀಯ ಜನತಾ ಪಾರ್ಟಿಯ ಮಾಜಿ ಹಿರಿಯ ಮುಖಂಡ, ಆರ್.ಎಸ್.ಎಸ್ ಕಾರ್ಯಾಕರ್ತ, ಸಾಮಾಜಿಕ ಮುಖಂಡ ಶ್ರೀಕರ ಪ್ರಭು ಸೋಮವಾರ ಬೆಳಿಗ್ಗೆ ತಮ್ಮ ಅಪಾರ ಬೆಂಬಲಿಗರೊಂದಿಗೆ ಮಂಗಳೂರು ಮಹಾನಗರ ಪಾಲಿಕೆ ಕಚೇರಿಗೆ ಆಗಮಿಸಿ ಪಾಲಿಕೆ ಕಚೇರಿಯಲ್ಲಿ ಚುನಾವಣಾಧಿಕಾರಿಗಳಿಗೆ ತಮ್ಮ ನಾಮಪತ್ರ ಸಲ್ಲಿಸಿದರು.

ಬಿಜೆಪಿಯಲ್ಲಿ ಹಲವಾರು ಉನ್ನತ ಹುದ್ದೆಗಳನ್ನು ನಿರ್ವಾಹಿಸಿದ ಬಿಜೆಪಿ ಹಿರಿಯ (ಮಾಜಿ) ಮುಖಂಡ, ಆರ್.ಎಸ್.ಎಸ್ ನಾಯಕ, ಸಾಮಾಜಿಕ ಸೇವಾಕರ್ತ ಶ್ರೀಕರ ಪ್ರಭು ಅವರು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಈ ಭಾರಿ ಕಣಕ್ಕೆ ಇಳಿದಿದ್ದಾರೆ.

2014ರಲ್ಲಿ ಬಿಜೆಪಿಯಿಂದ ಉಚ್ಚಾಟಿತರಾಗಿ ಇದೀಗ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದಿಂದ ಸ್ವತಂತ್ರ ಸ್ಪರ್ಧಾಕಾಂಕ್ಷಿಯಾಗಿ ರುವ ಶ್ರೀಕರ ಪ್ರಭು ಅವರು ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು.

ಈ ಬಾರಿ ಭಾರದ ಮನಸ್ಸಿನಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ನನ್ನ ಗೆಲುವು ಶತಸಿದ್ಧ. ಆದರೆ ಇಷ್ಟು ಸಮಯ ಯಾವ ಸಿದ್ಧಾಂತದಡಿ ಬೆಳೆದೆನೋ ಆ ಸಿದ್ಧಾಂತವನ್ನು ಕೈಬಿಡಲಾರೆ. ನನ್ನನ್ನು ಬಿಜೆಪಿಯಿಂದ ಹೊರತುಪಡಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೂ ಭಾರದ ಮನಸ್ಸಿನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ಮುಂದೆ ಶಾಸಕನಾದರೂ ಬಿಜೆಪಿ ತತ್ವಕ್ಕೆ ಬದ್ಧನಾಗಿಯೇ ಇರುತ್ತೇನೆ’ ಎಂದು ಹೇಳಿದರು.

ಮೋದಿಗಾಗಿ ದುಡಿಯುತ್ತೇನೆ:

ನನಗೆ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ವಾಜಪೇಯಿ ಆದರ್ಶ. ನರೇಂದ್ರ ಮೋದಿ ಅವರ ಮುಂದಿನ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡೇ ಮಾಡುತ್ತೇನೆ ಎಂದು ಶ್ರೀಕರ ಪ್ರಭು ಹೇಳಿದರು.

Comments are closed.