ಕರಾವಳಿ

ಹೊಟ್ಟೆ ಉಬ್ಬರದ ಸಮಸ್ಯೆಯನ್ನು ದೂರ ಮಾಡಲು ಕೆಲವು ಉತ್ತಮ ಸಲಹೆಗಳು

Pinterest LinkedIn Tumblr

ಕೆಲವು ಸಲ ನಾವು ಉಪವಾಸ ಇದ್ದು ಎಷ್ಟೋ ಸಮಯದ ಅಂತರದಲ್ಲಿ ಆಹಾರವನ್ನು ಸೇವಿಸಿದಾಗ ನಮಗೆ ನಮ್ಮ ಹೊಟ್ಟೆ ಭಾರ ಎಂಬ ಭಾವನೆ ಮೂಡುತ್ತದೆ. ಜೊತೆಗೆ ಯಾವುದೇ ಆಹಾರವನ್ನು ಹೊಟ್ಟೆ ತುಂಬಾ ತಿಂದಾಗಲು ಹೊಟ್ಟೆ ದಪ್ಪ ಆಗಿರುವ ರೀತಿ ಕಾಣಿಸುತ್ತದೆ. ಜೊತೆಗೆ ಭಾರ ಎನ್ನಿಸುತ್ತದೆ. ಕೆಲವು ಸಲ ಗ್ಯಾಸ್ಟ್ರಿಕ್ ಸಮಸ್ಯೆ ಇದ್ದಾಗಲೂ ಸಹ ಹೊಟ್ಟೆ ದಪ್ಪ ಕಾಣಿಸುತ್ತದೆ. ಹೊಟ್ಟೆ ನೋವು ಬರುತ್ತದೆ. ನಮ್ಮ ಹೊಟ್ಟೆ ನಮಗೆ ಭಾರವೆನ್ನಿಸುತ್ತದೆ.

ಇಂತಹ ಲಕ್ಷಣಗಳು ಕಂಡು ಬಂದಾಗ ಸರಿಯಾಗಿ ಉಸಿರಾಟ ನೆಡೆಸಲು ಸಾದ್ಯವಾಗುವುದಿಲ್ಲ. ಜೊತೆಗೆ ಸರಿಯಾಗಿ ನೆಡೆಯಲು. ಮಲಗಲು. ಕೂರಲು ಎಲ್ಲದಕ್ಕೂ ಸಮಸ್ಯೆಯಾಗುತ್ತದೆ ಒಂದು ರೀತಿಯ ಹಿಂಸೆ ಕಾಡುತ್ತದೆ. ಜೊತೆಗೆ ಇದು ಕರುಳಿನ ಆರೋಗ್ಯದ ಮೇಲೆ. ಮತ್ತು ಅಂಡಾಶಯದ ಕ್ಯಾನ್ಸರ್ ಕೂಡ ಆಗುವ ಸಾಧ್ಯತೆ ಇರುತ್ತದೆ. ಅದಕ್ಕಾಗಿ ಇಂತಹ ಹೊಟ್ಟೆ ಉಬ್ಬರದ ಸಮಸ್ಯೆಯನ್ನು ದೂರ ಮಾಡಲು ಕೆಲವು ಉತ್ತಮ ಸಲಹೆಗಳು ಇವೆ ಅವುಗಳನ್ನು ನೋಡೋಣ ಬನ್ನಿ..

ಹೊಟ್ಟೆಯೊಳಗಿನ ಕೆಲಸ ಕಾರ್ಯಗಳು ಸರಿಯಾದ ರೀತಿಯಲ್ಲಿ ಆಗದೇ ಇದ್ದಾಗ ಹೊಟ್ಟೆ ಉಬ್ಬರದ ನೋವು ಕಾಣಿಸಿಕೊಳ್ಳುತ್ತದೆ. ಅನಿಯಮಿತ ಮಲ, ಮಲಬದ್ಧತೆ ಮತ್ತು ಗ್ಯಾಸ್ ನಿಂದಾಗಿ ನೋವು ಬರಬಹುದು. ಹೊಟ್ಟೆ ಉಬ್ಬರಿಸಿದೆ ಎಂಬ ಭಾವನೆಯಾದಾಗ ಸಾಕಷ್ಟು ನೀರು ಕುಡಿಯಬೇಕು ಇದು ನೋವು ಕಡಿಮೆ ಮಾಡಿ ಮಲಬದ್ಧತೆ ನಿವಾರಿಸುತ್ತದೆ.

ಆಹಾರವನ್ನು ಸೇವಿಸಿದ ಸ್ವಲ್ಪ ಸಮಯ ಬಿಟ್ಟು ನೆಡೆದಾಡಬೇಕು ಜೊತೆಗೆ ಯಾವುದೇ ಸಮಯದಲ್ಲಿ ಆದರೂ ಹೊಟ್ಟೆ ಉಬ್ಬರಿಸಿ ಭಾರವಾದ ಭಾವನೆಯಾಗುತ್ತಿದ್ದರೆ ಆಗ ಸ್ವಲ್ಪ ನಡೆದಾಡಬೇಕು. ಹೀಗೆ ಮಾಡುವುದರಿಂದ ಹೊಟ್ಟೆಯಲ್ಲಿ ತುಂಬಿರುವ ಗ್ಯಾಸ್ ಹೊರಹೋಗುತ್ತದೆ. ಹೊಟ್ಟೆ ಉಬ್ಬರ ಕಡಿಮೆಯಾಗುತ್ತದೆ.

ಸೋಡಾ ಅಥವಾ ರಾಸಾಯನಿಕವಾಗಿ ಕಾರ್ಬೊನ್ ಡೈಯಾಕ್ಸೈಡ್ ಎಂದು ಕರೆಯಲ್ಪಡುವ ಪಾನೀಯಗಳನ್ನು ಸೇವಿಸುವುದರಿಂದ ಹೊಟ್ಟೆ ಉಬ್ಬರ ಕಡಿಮೆಯಾಗುತ್ತದೆ.

ಹೊಟ್ಟೆ ಉಬ್ಬರವಾದಗ ಅಥವಾ ಅದರಿಂದ ನೋವು ಬರುತ್ತಿದ್ದಾರೆ ಪುದೀನ ಎಲೆಗಳನ್ನು ತಿನ್ನುವುದು. ಅಥವಾ ಪುದೀನಾ ಟೀ ಕುಡಿಯುವುದರಿಂದ ನೋವು. ಉಬ್ಬರ ಕಡಿಮೆಯಾಗುತ್ತದೆ.

ಶುಂಠಿ, ಬ್ಲ್ಯಾಕ್ ಸಾಲ್ಟ್, ನಿಂಬೆ ಜ್ಯೂಸ್ ಇವುಗಳನ್ನು ಸೇವಿಸುವುದರಿಂದ ಸಹ ಹೊಟ್ಟೆ ಉಬ್ಬರದ ನೋವು ನಿವಾರಿಸಬಹುದು .

ಪುಟ್ಟ ಮಕ್ಕಳು ಹೊಟ್ಟೆ ಉಬ್ಬರದಿಂದ ಅಳುತ್ತಿದ್ದರೆ ವೀಳ್ಯದೆಲೆಗೆ ಹರಳೆಣ್ಣೆ ಸವರಿ ಬೆಚ್ಚಗೆ ಮಾಡಿ ಅದರಿಂದ ಮಗುವಿನ ಹೊಟ್ಟೆಗೆ ಶಾಖ ನೀಡಿದರೆ ಗುಣವಾಗುತ್ತದೆ.

ಎರಡು ವೀಳ್ಯದೆಲೆಯಲ್ಲಿ 4 ರಿಂದ 6 ಲವಂಗಗಳನ್ನಿಟ್ಟು ಜಗಿದು ತಿಂದರೆ ಅಜೀರ್ಣ, ಹೊಟ್ಟೆಉಬ್ಬರ ಗುಣವಾಗುತ್ತದೆ.

ಹೊಟ್ಟೆ ಉಬ್ಬರವಾಗಿ ನೋವು ಸಂಕಟ ವಾಗುತ್ತಿರುವಾಗ ಒಂದು ಲೋಟ ಮಜ್ಜಿಗೆಯನ್ನು ಕುಡಿದರೆ ಹೊಟ್ಟೆಉಬ್ಬರ ಕಡಿಮೆಯಾಗುತ್ತದೆ.

ಬಿಸಿಯಾಗಿರುವ ನೀರಿಗೆ ಬೇರು ಸಹಿತ ಗರಿಕೆ, ಅರ್ಧ ಚಮಚ ಜೀರಿಗೆ, ಕಾಲು ಚಮಚ ಕಾಳುಮೆಣಸು ಹಾಕಿ ಕಷಾಯ ಮಾಡಬೇಕು. ಸೋಸಿ ತಣ್ಣಗಾದ ಮೇಲೆ ಜೇನುತುಪ್ಪ ಸೇರಿಸಿ ಕುಡಿಯವುದರಿಂದ ಹೊಟ್ಟೆಉಬ್ಬರ, ದೂರವಾಗುತ್ತದೆ.

ಈ ಎಲ್ಲ ಪ್ರಯತ್ನಗಳನ್ನು ಮಾಡಿದರು ನಿಮ್ಮ ಹೊಟ್ಟೆಉಬ್ಬರ ಕಡಿಮೆಯಾಗುತ್ತಿಲ್ಲ ಎನ್ನುವ ಕ್ಷಣದಲ್ಲಿ Enoದಂತಹ ಕೆಲವೊಂದು ಪೌಡರ್ ಗಳು ಗ್ಯಾಸ್ ನಿಂದ ತಕ್ಷಣ ಪರಿಹಾರ ಒದಗಿಸುತ್ತದೆ.ಇವುಗಳನ್ನು ಸೇವಿಸಿ.

ಹೊಟ್ಟೆ ಉಬ್ಬರದ ನೋವು ತಡೆಯಲು ಕೆಲವೊಂದು ಸಾಮಾನ್ಯ ವಿಧಾನಗಳೆಂದರೆ ಯಾವುದೇ ಆಹಾರವನ್ನು ನಿಧಾನವಾಗಿ ತಿನ್ನಬೇಕು ಮತ್ತು ಸರಿಯಾಗಿ ಜಗಿಯಬೇಕು ಇದರಿಂದ ಹೊಟ್ಟೆಯಲ್ಲಿ ಆಹಾರ ಸರಿಯಾಗಿ ಜೀರ್ಣವಾಗಿ ಗ್ಯಾಸ್ ತುಂಬಿಕೊಳ್ಳುವುದು ತಪ್ಪುತ್ತದೆ.

ಸರಿಯಾದ ಆಹಾರ ಕ್ರಮ ಮತ್ತು ವ್ಯಾಯಾಮದಿಂದ ಅಜೀರ್ಣ ಸಮಸ್ಯೆ ನಿವಾರಿಸಬಹುದು. ಅನಾರೋಗ್ಯವಾಗಿ ತಿನ್ನಬೇಡಿ ಮತ್ತು ಆರೋಗ್ಯಕರ ಮತ್ತು ಒಳ್ಳೆಯ ಜೀವನಶೈಲಿ ಪಾಲಿಸಿಕೊಂಡು ಹೋಗಿ.

ಇದರಲ್ಲಿ ಯಾವುದೇ ವಿಧಾನಗಳು ನಿಮ್ಮ ಹೊಟ್ಟೆ ಉಬ್ಬರಕ್ಕೆ ಕೆಲಸ ಮಾಡದಿದ್ದರೆ ಆಗ ವೈದ್ಯರನ್ನು ಭೇಟಿಯಾಗಿ. ಕೆಲವೊಂದು ಸಲ ಹೊಟ್ಟೆ ಉಬ್ಬರವು ಅಂಡಾಶಯದ ಗರ್ಭಕೋಶದಿಂದ ಬರಬಹುದು. ಇದನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚುವುದು ತುಂಬಾ ಕಷ್ಟ. ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವುದೇ ವಿಷಯದ ಬಗ್ಗೆ ಹೆಚ್ಚು ಹೆಚ್ಚು ಗಮನವಿಡಬೇಕು. ನಿಮ್ಮ ಆರೋಗ್ಯವನ್ನು ಕಾಪಡಿಕೊಳ್ಳಬೇಕು.

Comments are closed.