ಕರಾವಳಿ

ಬಾಲಕಿಯ ಅತ್ಯಾಚಾರ,ಕೊಲೆಗೆ ಖಂಡನೆ ಹಾಗೂ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಗೆ ಆಗ್ರಹಿಸಿ ಮಂಗಳೂರಿನ ಮೀನು ವ್ಯಾಪಾರಸ್ಥರಿಂದ ಮೌನ ಪ್ರತಿಭಟನೆ

Pinterest LinkedIn Tumblr

ಮಂಗಳೂರು, ಎಪ್ರಿಲ್. 23: ಜಮ್ಮು-ಕಾಶ್ಮಿರದ ಕಥುವಾದಲ್ಲಿ ನಡೆದ ಪುಟ್ಟ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಕೃತ್ಯವನ್ನು ಖಂಡಿಸಿ ಹಾಗೂ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ನೀಡಲು ಆಗ್ರಹಿಸಿ ಮಂಗಳೂರಿನ ಸಮಸ್ತ ಮೀನು ವ್ಯಾಪಾರಸ್ಥರು ಮತ್ತು ಕಾರ್ಮಿಕರು ಮಂಗಳೂರಿನ ಮೀನು ದಕ್ಕೆಯಲ್ಲಿ ಸೋಮವಾರ ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ಮೌನ ಪ್ರತಿಭಟನೆ ನಡೆಸಿದರು.

ಬಾಲಕಿಯ ಹತ್ಯೆಯನ್ನು ಖಂಡಿಸಿ, ಹಳೆ ಬಂದರು ಧಕ್ಕೆಯ ಹಸಿ ಮೀನು ಮಾರಾಟಗಾರರು ಮತ್ತು ಕಮಿಷನ್ ಏಜೆಂಟರ ಸಂಘವು ಹರತಾಳಕ್ಕೆ ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಸೋಮವಾರ ಧಕ್ಕೆಯಲ್ಲಿ ಮೀನು ವಹಿವಾಟು, ವ್ಯವಹಾರ ಸ್ಥಗಿತಗೊಂಡಿದೆ.

ಬಾಲಕಿಯ ಅತ್ಯಾಚಾರ, ಕೊಲೆ ಕೃತ್ಯ ಖಂಡಿಸಿ ಸೋಮವಾರ ನಗರದ ಮೀನುಗಾರಿಕಾ ಧಕ್ಕೆಯಲ್ಲಿ ಮೀನುಗಾರರ ಮುಖಂಡ ಹಮೀದ್ ಕುದ್ರೋಳಿಯವರ ನೇತ್ರತ್ವದಲ್ಲಿ ದಕ್ಕೆಯ ವ್ಯಾಪಾರಸ್ತರು ವ್ಯವಹಾರವನ್ನು ಬಂದ್ ಮಾಡಿ ಮೌನ ಪ್ರತಿಭಟನೆ ನಡೆಸಿದರು.

ಇನ್ನೊಂದೆಡೆ ಪ್ರತಿಭಟನೆಯ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೋಟುಗಳು ಕೂಡ ಮೀನು ಹಿಡಿಯಲು ಸಮುದ್ರಕ್ಕೆ ಹೋಗದೆ ರವಿವಾರವೇ ದಡ ಸೇರಿವೆ.

ಮಂಗಳೂರಿನ ಕೇಂದ್ರ ಮಾರುಕಟ್ಟೆಯಲ್ಲೂ ಸ್ವಯಂ ಪ್ರೇರಿತ ಬಂದ್ :

ಇದೇ ವೇಳೆ ಕಥುವಾದಲ್ಲಿ ನಡೆದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಕೃತ್ಯವನ್ನು ಖಂಡಿಸಿ ನಗರದ ಸೆಂಟ್ರಲ್ ಮಾರ್ಕೆಟ್ ನ ವ್ಯಾಪಾರಸ್ಥರು ಮತ್ತು ಕೂಲಿ ಕಾರ್ಮಿಕರು ತಮ್ಮ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡುವ ಮೂಲಕ ಸ್ವಯಂ ಪ್ರೇರಿತ ಬಂದ್ ನಡೆಸಿದರು.

Comments are closed.