ಕ್ರೀಡೆ

ಕಿಂಗ್ಸ್​ ಇಲೆವೆನ್​ ಪಂಜಾಬಿಗೆ ಶರಣಾದ ಡೆಲ್ಲಿ ಡೇರ್​ ಡೆವಿಲ್ಸ್; ​ ಸತತ ಸೋಲಿನಿಂದ ಕಂಗೆಟ್ಟ ಗಂಭೀರ್

Pinterest LinkedIn Tumblr

ನವದೆಹಲಿ: ಐಪಿಎಲ್​ ಟಿ20 ಪಂದ್ಯಾವಳಿಯಲ್ಲಿ ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡ ಡೆಲ್ಲಿ ಡೇರ್​ ಡೆವಿಲ್ಸ್​ ವಿರುದ್ಧ ನಾಲ್ಕು ರನ್ ಗಳ ಗೆಲುವು ದಾಖಲಿಸಿದೆ.

ಇಂದು ಫಿರೋಜ್​ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್​, ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​​ ನಷ್ಟಕ್ಕೆ 143 ರನ್​ ಸೇರಿಸಿತು.

ಗೆಲುವಿಗೆ 144 ರನ್ ಟಾರ್ಗೆಟ್ ಬೆನ್ನತ್ತಿದ ಡೆಲ್ಲಿ, ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 139 ರನ್​ ಗಳಿಸುವ ಮೂಲಕ ಪಂಜಾಬ್​ ವಿರುದ್ಧ ಸೋಲು ಅನುಭವಿಸಿತು.

ಡೆಲ್ಲಿ ಡೇರ್‌ ಡೆವಿಲ್ಸ್‌ ತಂಡದ ಪರ ಶ್ರೇಯಸ್‌ ಅಯ್ಯರ್‌ 57 ರನ್‌ ಗಳಿಸದರೂ ಜಯದ ಶ್ರೇಯಸ್ಸು ಮಾತ್ರ ಪಂಜಾಬ್‌ಗೆ ದಕ್ಕಿತು.

ಪಂಜಾಬ್ ತಂಡದ ಪರ ಕರುಣ್​ ನಾಯರ್​(34), ಡೇವಿಡ್​ ಮಿಲ್ಲರ್​(26), ಲೋಕೇಶ್​ ರಾಹುಲ್​ (23) ಹಾಗೂ ಮಯಾಂಕ್​ ಅಗರ್​ವಾಲ್​(21) ರನ್​ ಕಾಣಿಕೆ ನಿಡಿದರು.

ಡೆಲ್ಲಿ ಪರ ಲಯಾಮ್​ ಪ್ಲಂಕೆಟ್​ 3 ವಿಕೆಟ್​ ಕಬಳಿಸಿದರೆ, ಟ್ರೆಂಟ್​ ಬೌಲ್ಟ್​ ಹಾಗೂ ಅವೇಶ್​ ಖಾನ್​ 2 ವಿಕೆಟ್​ ಪಡೆದರು. ಉಳಿದಂತೆ ಡೇನಿಯಲ್​ ಕ್ರಿಶ್ಚಿಯನ್​ ಒಂದು ವಿಕೆಟ್​ ಗಳಿಸಿದರು.

Comments are closed.