ಮನೋರಂಜನೆ

ಬಕಾಸುರ ಕ್ಲೈಮ್ಯಾಕ್ಸ್‌ 250 ಜನ ಮಹಿಳೆಯರ ಆಯ್ಕೆ

Pinterest LinkedIn Tumblr

*ಹರೀಶ್‌ ಬಸವರಾಜ್‌

ಮೊದಲ ಬಾರಿಗೆ 250ಕ್ಕೂ ಹೆಚ್ಚು ಮಹಿಳೆಯರ ಸಲಹೆ ಪಡೆದು ಕ್ಲೈಮ್ಯಾಕ್ಸ್‌ ದೃಶ್ಯವನ್ನು ಹೆಣೆದಿದ್ದಾರೆ ಬಕಾಸುರ ಸಿನಿಮಾದ ನಿರ್ದೇಶಕ ನವನೀತ್‌. ರೋಹಿತ್‌ ಮತ್ತು ರವಿಚಂದ್ರನ್‌ ಕಾಂಬಿನೇಶನ್‌ನಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಕ್ಲೈಮ್ಯಾಕ್ಸ್‌ಗಾಗಿ ಚಿತ್ರತಂಡ ಮಹಿಳೆಯರ ಮೊರೆ ಹೋಗಿದ್ದಾರೆ.

ಈ ಬಗ್ಗೆ ಲವಲವಿಕೆ ಜತೆ ಮಾತನಾಡಿದ ನಾಯಕ ರೋಹಿತ್‌ ‘ನಮ್ಮ ಚಿತ್ರದಲ್ಲಿ ನಾಯಕ ಒಬ್ಬ ಲಾಯರ್‌. ದುಡ್ಡಿಗಾಗಿ ಅವನು ಎಂಥಹ ಕೇಸ್‌ ಬೇಕಾದರೂ ತೆಗೆದುಕೊಳ್ಳುತ್ತಾನೆ. ಅನ್ಯಾಯವಾದವನಿಗೆ ಶಿಕ್ಷೆ ಕೊಡಿಸಲು ಹಿಂದೇಟು ಹಾಕದ ವ್ಯಕ್ತಿತ್ವ ಈ ವಕೀಲನದ್ದು. ಇಂತಹ ಲಾಯರ್‌ನ ಒಂದು ಕೇಸ್‌ ತೀರ್ಮಾನವೇ ಸಿನಿಮಾದ ಕ್ಲೈಮ್ಯಾಕ್ಸ್‌ . ಆ ಕೇಸ್‌ ಯಾವುದು, ಅದರ ಹಿನ್ನೆಲೆ ಏನು ಎನ್ನುವುದು ಕೂಡ ಸಿನಿಮಾದ ಪ್ರಮುಖ ದೃಶ್ಯ. ಹಾಗಾಗಿ ನಾವು ಮತ್ತು ನಮ್ಮ ತಂಡ ಎರಡು ರೀತಿಯಲ್ಲಿ ಕ್ಲೈಮ್ಯಾಕ್ಸ್‌ ಬರೆದುಕೊಂಡಿದ್ದೆವು. ಇದರಲ್ಲಿ ಯಾವುದು ಉತ್ತಮ ಎಂಬ ಆಯ್ಕೆಯಾಗಿ ಸುಮಾರು 250ಕ್ಕೂ ಹೆಚ್ಚು ಮಹಿಳೆಯರನ್ನು ಮಾತನಾಡಿಸಿದೆವು. ಅವರೊಂದಿಗೆ ಎರಡೂ ಕ್ಲೈಮ್ಯಾಕ್ಸ್‌ ಮಾತನಾಡಿದೆವು. ಹೆಚ್ಚು ಮತಬಿದ್ದ ಮತ್ತು ಮಹಿಳೆಯರು ಸಲಹೆ ಕೊಟ್ಟ ಅಂಶಗಳನ್ನು ಸೇರಿಸಿ ಒಂದನ್ನು ಫೈನಲ್‌ ಮಾಡಿದ್ದೇವೆ. ಮಹಿಳೆಯರು ಕೊಟ್ಟ ಸಲಹೆ ಉಪಯುಕ್ತ ಅನಿಸಿದವು. ಹಾಗಾಗಿ ಅವರ ಸಲಹೆಯನ್ನೂ ಸಿನಿಮಾದಲ್ಲಿ ಬಳಸಿಕೊಂಡಿದ್ದೇವೆ’ಎನ್ನುತ್ತಾರೆ ರೋಹಿತ್‌.

‘ಕ್ಲೈಮ್ಯಾಕ್ಸ್‌ ದೃಶ್ಯವನ್ನು ಶೂಟ್‌ ಮಾಡಿದ ನಂತರ ನಾವೆಲ್ಲ ಒಟ್ಟಿಗೆ ಕೂತು ನೋಡಿದೆವು. ಎಡಿಟಿಂಗ್‌ ಟೇಬಲ್‌ ಮೇಲೆ ನೋಡಿದಾಗ ನಮಗೂ ಖುಷಿಯಾಯಿತು. ಅವರ ಸಲಹೆ ನಿಜಕ್ಕೂ ಸಿನಿಮಾದ ಕಥೆಗೆ ಒಳ್ಳೆಯ ಕ್ಲೈಮ್ಯಾಕ್ಸ್‌ ಅನಿಸಿತು’ ಎನ್ನುವುದು ರೋಹಿತ್‌ ಮಾತು.

ಕರ್ವ ಚಿತ್ರ ಖ್ಯಾತಿಯ ನವನೀತ್‌ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ರೋಹಿತ್‌ ಮತ್ತವರ ಸ್ನೇಹಿತರು ನಿರ್ಮಾಣದ ಜವಾÜಬ್ದಾರಿ ಹೊತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಎರಡು ಟ್ರೇಲರ್‌ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಿಸಿದೆ. ಈ ಸಿನಿಮಾ ಇದೇ 27ಕ್ಕೆ ರಿಲೀಸ್‌ ಆಗುತ್ತಿದೆ.
“ಈ ಚಿತ್ರದಲ್ಲಿ ಕ್ಲೈಮ್ಯಾಕ್ಸ್‌ ಬಹಳ ವಿಶೇಷವಾಗಿದ್ದು, ಮಹಿಳೆಯರು ಸಲಹೆಯಂತೆ ಸ್ಕ್ರಿಪ್ಟ್‌ ಬರೆದು ಮಾಡಲಾಗಿದೆ. ಚಿತ್ರದ ಹೈಲೈಟ್‌ಗಳಲ್ಲಿ ಇದು ಒಂದು.” -ಆರ್‌ ಜೆ ರೋಹಿತ್‌, ನಟ

Comments are closed.