ಕರಾವಳಿ

ಕಥುವಾ ಅತ್ಯಾಚಾರ,ಕೊಲೆ ಖಂಡಿಸಿ ನಾಳೆ ಬಂದರ್ ದಕ್ಕೆಯಲ್ಲಿ ಮೀನುಗಾರರ ಪ್ರತಿಭಟನೆ : ಮಂಗಳೂರಿಗೆ ನಾಳೆ ಮೀನು, ಮಾಂಸ ಅಲಭ್ಯ

Pinterest LinkedIn Tumblr

ಮಂಗಳೂರು, ಎಪ್ರಿಲ್.22: ಜಮ್ಮು ಕಾಶ್ಮೀರದ ಕಥುವಾದಲ್ಲಿ 8ರ ಹರೆಯದ ಬಾಲಕಿ ಮೇಲೆ ನಡೆದ ಅತ್ಯಾಚಾರ, ಕೊಲೆ ಖಂಡಿಸಿ ಹಾಗೂ ದೌರ್ಜನ್ಯಕ್ಕೊಳಗಾದ ಎಲ್ಲರಿಗೂ ನ್ಯಾಯ ಲಭಿಸಬೇಕು ಎಂದು ಆಗ್ರಹಿಸಿ ಮಂಗಳೂರಿನ ವ್ಯಾಪಾರಸ್ಥರು ನಾಳೆ (ಎ.23) ನಗರದ ಸೆಂಟ್ರಲ್ ಮಾರ್ಕೆಟ್ ಮತ್ತು ಬಂದರ್ ದಕ್ಕೆಯ (ಮೀನು ಮಾರಾಟ ಹಾಗೂ ರಫ್ತು ) ವ್ಯವಹಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಬಂದರ್ ದಕ್ಕೆಯ ವ್ಯಾಪಾರಸ್ಥರ ಮುಖಂಡ ಹಾಗೂ ಸಾಮಾಜಿಕ ಸೇವಾ ಕರ್ತ ಹಮೀದ್ ಕುದ್ರೋಳಿ ತಿಳಿಸಿದ್ದಾರೆ.

ಮಂಗಳೂರು ಮಾರುಕಟ್ಟೆ ವ್ಯಾಪಾರಸ್ಥರ ಒಕ್ಕೂಟದ ನೇತೃತ್ವದಲ್ಲಿ ಸೆಂಟ್ರಲ್ ಮಾರ್ಕೆಟ್ ಜಂಕ್ಷನ್‌ನಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಮಾರುಕಟ್ಟೆಯ ಎಲ್ಲಾ ಸಂಘಸಂಸ್ಥೆಗಳ ಹಾಗೂ ಕೂಲಿ ಕಾರ್ಮಿಕರು ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಬಂದರ್ ದಕ್ಕೆಯಲ್ಲಿ ಮೀನು ವ್ಯಾಪಾರಸ್ಥರು ಮತ್ತು ಕಾರ್ಮಿಕರು ಕೂಡ ಬೆಳಗ್ಗೆ 10 ಗಂಟೆಗೆ ಪ್ರತಿಭಟನೆ ನಡೆಸಿಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ದೇಶಾದ್ಯಂತ ನಡೆಯುವ ಅತ್ಯಾಚಾರ ಪ್ರಕರಣದ ದುಷ್ಕರ್ಮಿಗಳಿಗೆ ಗಲ್ಲು ಶಿಕ್ಷೆ ನೀಡಿದರಷ್ಟೇ ಇಂತಹ ಅಮಾನುಷ ದೌರ್ಜನ್ಯಕ್ಕೆ ತಡೆ ಹಾಕಬಹುದು ಎಂದು ಅಭಿಪ್ರಾಯಪಟ್ಟಿರುವ ವ್ಯಾಪಾರಸ್ಥರ ಒಕ್ಕೂಟ ಪ್ರತಿಭಟನೆ ಸಂದರ್ಭ ದೇಶದಾದ್ಯಂತ ದೌರ್ಜನ್ಯಕ್ಕೊಳಗಾದ ಎಲ್ಲರಿಗೂ ನ್ಯಾಯ ಲಭಿಸಬೇಕು ಎಂದು ಆಗ್ರಹಿಸಿಸುವುದಾಗಿ ಹಮೀದ್ ಕುದ್ರೋಳಿ ತಿಳಿಸಿದ್ದಾರೆ.

ಮಾಂಸ ವ್ಯಾಪಾರಸ್ಥರ ಸಂಘದ ಬೆಂಬಲ :

ವ್ಯಾಪಾರಸ್ಥರು ಮತ್ತು ಕಾರ್ಮಿಕರು ಜತೆಗೂಡಿ ವ್ಯವಹಾರ ಸ್ಥಗಿತಗೊಳಿಸಿ ನಡೆಸುವ ಪ್ರತಿಭಟನೆಗೆ ಮಾಂಸ ವ್ಯಾಪಾರಸ್ಥರ ಸಂಘದ ಮುಖಂಡರಾದ ಅಲಿ ಹಸನ್ ಮತ್ತು ಜೆ. ಅಬ್ದುಲ್ ಖಾದರ್ ಬೆಂಬಲ ವ್ಯಕ್ತಪಡಿಸಿದ್ದು, ಎಲ್ಲರೂ ಇದನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.

Comments are closed.