ಕರಾವಳಿ

ಅಣ್ಣಾಮಲೈ ನಂಗೆ ಫ್ರೆಂಡ್, ಸೆಲೆಬ್ರೇಟಿಗಳು ತುಂಬಾ ಕ್ಲೋಸ್: ಉಡುಪಿ ಮೂಲದ ವಂಚಕ ಬೆಂಗಳೂರಲ್ಲಿ ಅರೆಸ್ಟ್

Pinterest LinkedIn Tumblr

ಬೆಂಗಳೂರು/ಉಡುಪಿ: ನನಗೆ ಎಸ್ಪಿ ಅಣ್ಣಾಮಲೈ ಒಳ್ಳೆಯ ಫ್ರೆಂಡ್. ನಾನು ಅವರಿಂದ ಸ್ಪೂರ್ತಿ ಪಡೆದು ಐಪಿಎಸ್ ಪರೀಕ್ಷೆ ಬರೆದಿರುವೆ. ಸದ್ಯ ಪೈಲೆಟ್ ಆಗಿದ್ದು ನನ್ನ ಬ್ಯಾಂಕ್ ಅಕೌಂಟ್ ಸಮಸ್ಯೆಯಿದ್ದು ಹಣ ಸಹಕಾರ ಮಾಡಿ ಎಂದು ಜನರನ್ನು ಎಸ್ಪಿ ಅಣ್ಣಾಮಲೈ ಸೇರಿದಂತೆ ವಿವಿಧ ಗಣ್ಯರ ಹೆಸರಿನಲ್ಲಿ ವಂಚಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮೂಲತಃ ಉಡುಪಿ ಜಿಲ್ಲೆಯ ಕೋಟದವನಾದ ಪ್ರಮೋದ್ ಕಾಮತ್ ಎಂಬಾತ ಬಂಧಿತ ವ್ಯಕ್ತಿ. ಈತ ಹೆಸರಾಂತ ಚಿತ್ರ ನಟರು, ಉದ್ಯಮಿಗಳು ಹಾಗೂ ಎಸ್ಪಿ ಅಣ್ಣಾಮಲೈ ಮೊದಲಾದ ಅಧಿಕಾರಿಗಳೊಂದಿಗಿನ ಫೋಟೋ ತೋರಿಸಿ ಮೋಸ ಮಾಡುತ್ತಿದ್ದ.

ಈ ಹಿಂದೆ ಅಂಚೆ ಇಲಾಖೆಯಲ್ಲಿ ಕೆಲಸ ಮಾಡಿಕೊಂಡಿದ್ದ ಈತ ಅಲ್ಲಿಯೂ ಹಣದ ವ್ಯವಹಾರದಲ್ಲಿ ಕಿರಿಕ್ ಮಾಡಿಕೊಂಡ ಕಾರಣ ಆತನನ್ನು ಕೆಲಸದಿಂದ ತೆಗೆದಿದ್ದರು. ಬಳಿಕ ಐಷಾರಾಮಿ ಜೀವನದ ಹುಚ್ಚಿಗೆ ಬಿದ್ದಿದ್ದ ಆತ ತಾನು ಬುಸಿನೆಸ್ ಮೆನ್ ಎಂದು ಎಲ್ಲರ ಬಳಿ ಹೇಳಿಕೊಂಡಿದ್ದ. ಅಗ್ಗಾಗೆ ಊರು ಬಿಡುತ್ತಿದ್ದ ಆತ ಮುಂಬೈ, ಬೆಂಗಳೂರು ಮೊದಲಾದೆಡೆ ಸಂಚರಿಸಿ ಅಲ್ಲಲ್ಲಿ ಜನರನ್ನು ಬೇರೆಬೇರೆ ಕಾರಣಗಳಲ್ಲಿ ಮೋಸ ಮಾಡುತ್ತಿದ್ದ ಎನ್ನಲಾಗಿದೆ.

ಇತ್ತೀಚೆಗೆ ತಾನು ಪೈಲೆಟ್ ಎಂಬ ಹೆಸರಿನಲ್ಲಿ ಹಲವರಿಗೆ ಉಂಡೆನಾಮ ಹಾಕಿದ್ದ ಈತನ ಬಂಡವಾಳ ಬಯಲಾಗುತ್ತಿದ್ದಂತೆಯೇ ಮೋಸಕ್ಕೊಳಗಾದವರು ಆತನನ್ನು ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಬೆಂಗಳೂರು ಹೊರವಲಯದ ನೆಲಮಂಗಲ ಸಿಟಿ ಪೊಲೀಸ್ ಠಾಣೆಯಲ್ಲಿ ಈತನ ತನಿಖೆ ನಡೆಯುತ್ತಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್ಪಿ ಅಣ್ಣಾಮಲೈ ಅವರು ಈ ಹಿಂದೆ ಕಚೇರಿಗೆ ಎರಡು ಬಾರಿ ಬಂದಿದ್ದ. ತಾನು ನಾಗರಿಕ ಸೇವೆ ಬಗ್ಗೆ ಆಸಕ್ತಿ ಹೊಂದಿದ್ದು ಅದಕ್ಕೆ ಸಲಹೆ ಬೇಕು ಎಂದಿದ್ದರಿಂದ ನಾನು ಕೆಲ ಸಲಹೆ ನೀಡಿದ್ದೆ. ಆತ ಈ ರೀತಿ ವಂಚನೆ ಮಾಡಿದ್ದು ಸರಿಯಲ್ಲ. ನಿತ್ಯ ನಮ್ಮ ಬಳಿ ಹಲವಾರು ಜನರು ಪ್ರೀತಿಯಿಂದ ಬಂದು ಫೋಟೋ ತೆಗಿಸಿಕೊಳ್ಳುತ್ತಾರೆ. ಅದೇ ಫೋಟೋವನ್ನು ಬಳಸಿ ಜನರನ್ನು ವಂಚಿಸುವುದು ಸರಿಯಲ್ಲ ಎಂದು ಅಣ್ಣಾಮಲೈ ಹೇಳಿದ್ದಾರೆ.

Comments are closed.