ಕರಾವಳಿ

ಕಾಂಗ್ರೆಸ್ ನಾಯಕ ಆಸ್ಕರ್ ಫೆರ್ನಾಂಡಿಸ್‌ಗೆ ಅನಾರೋಗ್ಯ; ದೆಹಲಿಯಲ್ಲಿ ಚಿಕಿತ್ಸೆ, ರಾಹುಲ್ ಭೇಟಿ

Pinterest LinkedIn Tumblr

ಉಡುಪಿ/ದೆಹಲಿ: ಅನಾರೋಗ್ಯದ ಸಲುವಾಗಿ ಕಳೆದ ಕೆಲವಾರು ದಿನಗಳಿಂದ ದೆಹಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫೆರ್ನಾಂಡಿಸ್ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ದೆಹಲಿಯ ಆಸ್ಪತ್ರೆಗೆ ಎ‌ಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಪ್ರಭಾವಿ ನಾಯಕ ಆಸ್ಕರ್ ಫೆರ್ನಾಂಡಿಸ್ ಸದ್ಯ ಗುಣಮುಖಗೊಳ್ಳುತ್ತಿದ್ದಾರೆ. ಮುಂದಿನ ತಿಂಗಳಷ್ಟೇ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು ಕರಾವಳಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಆಸ್ಕರ್ ಪ್ರಭಾವ ಬಹಳಷ್ಟು ಮುಖ್ಯ. ಹಿಂದಿನೆಲ್ಲಾ ಚುನಾವಣೆಗಳಲ್ಲಿ ಆಸ್ಕರ್ ಮತಯಾಚನೆ, ಪಕ್ಷದ ಪರ ಪ್ರಚಾರ ಮಾಡಿದ್ದರು.

ಪ್ರಸ್ತುತ ಕರಾವಳಿ ಭಾಗದ ಶಾಸಕರುಗಳ ನೆಚ್ಚಿನ ನಾಯಕರಾದ ಆಸ್ಕರ್ ಅವರುಗಳ ಕ್ಷೇತ್ರಕ್ಕೆ ಅನುದಾನ ಒದಗಿಸುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿದ ಬಗ್ಗೆ ಈ ಹಿಂದೆ ಕಾಂಗ್ರೆಸ್ ಪಕ್ಷದ ಕರಾವಳಿಯ ಹಲವು ಶಾಸಕರು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ.

Comments are closed.