ಕರ್ನಾಟಕ

ಕರ್ನಾಟಕ ಮಾತೆ ತಮಿಳನಿಗಾಗಿ ಒಂದು ಲೋಟ ನೀರು ಕೊಡುವೆಯಾ ಎಂಬ ನಟ ಸಿಂಬು ಮನವಿಗೆ ಪ್ರತಿಕ್ರಿಯೆ ಏನು ಗೊತ್ತೇ…?

Pinterest LinkedIn Tumblr

ಬೆಂಗಳೂರು: ನೀರಿದ್ದರೆ ಯಾರೂ ಕೂಡ ಕೊಡುವುದಿಲ್ಲ ಎಂದು ಹೇಳುವುದಿಲ್ಲ.. ಕರ್ನಾಟಕ ಮಾತೆ ತಮಿಳನಿಗಾಗಿ ಒಂದು ಲೋಟ ನೀರು ಕೊಡುವೆಯಾ ಎಂಬ ತಮಿಳುನಟ ಸಿಂಬು ಅವರ ಮನವಿಗೆ ಕರ್ನಾಟಕ ಮಾತ್ರವಲ್ಲದೇ ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.

ಸಿಂಬು ಮನವಿಗೆ ಸ್ಪಂಧಿಸಿರುವ ಕನ್ನಡಿಗರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸೌಹಾರ್ಧತೆಯ ಪ್ರದರ್ಶನ ಮಾಡುತ್ತಿದ್ದು, ಒಂದು ಲೋಟ ನೀರಿನ್ನು ತಮಿಳನಿಗೆ ನೀಡುವ ಮೂಲಕ ಸಿಂಬು ಅವರ ಮನವಿಗೆ ಆತ್ಮೀಯವಾಗಿ ಸ್ಪಂಧಿಸಿದ್ದಾರೆ. ಸಾಮಾಜಿಕ ಜಾಲತಾಣಗಳಾದ ಟ್ವಿಟರ್, ಫೇಸ್ ಬುಕ್ ಮತ್ತು ವಾಟ್ಸಪ್ ಗಳಲ್ಲಿ ಸಿಂಬು ಅವರು ಹೇಳಿದ್ದ #UniteForHumanity ಹ್ಯಾಶ್ ಟ್ಯಾಗ್ ವೈರಲ್ ಆಗುತ್ತಿದ್ದು, ತಮಿಳು ಸ್ನೇಹಿತರಿಗೆ ಕನ್ನಡಿಗರು ನೀರು ನೀಡುತ್ತಿರುವ ಫೋಟೋಗಳು ಇದೀಗ ಇಂಟರ್ ನೆಟ್ ನಲ್ಲಿ ರಾರಾಜಿಸುತ್ತಿವೆ.

ಈ ಬಗ್ಗೆ ಟ್ವಿಟರ್ ನಲ್ಲಿ ಬರೆದಿರುವ ಕನ್ನಡಿಗರು, ಕಾವೇರಿ ವಿಚಾರನ್ನು ರಾಜಕಾರಣಿಗಳು ಅನಗತ್ಯವಾಗಿ ವಿವಾದ ಮಾಡುತ್ತಿದ್ದಾರೆ. ನಮ್ಮ ರಾಜ್ಯದ ಡ್ಯಾಂ ಗಳಲ್ಲಿ ಸಾಕಷ್ಟು ನೀರಿದ್ದರೆ, ತಮಿಳುನಾಡಿಗೆ ಹರಿಸಲು ನಾವು ಸದಾ ಸಿದ್ಧ. ಆದರೆ ಇಲ್ಲಿನವರಿಗೇ ಕುಡಿಯಲು ನಿರಿಲ್ಲದಿದ್ದರಿಂದ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಾಗುತ್ತಿಲ್ಲ. ಆದರೆ ಕಷ್ಟಕಾಲದಲ್ಲಿ ನಮ್ಮ ತಮಿಳು ಸಹೋದರರನ್ನು ನಾವು ಕೈಬಿಡುವುದಿಲ್ಲ ಎಂಬ ಬರಹಗಳ ಮೂಲಕ ನೀರು ನೀಡುತ್ತಿರುವ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ.

ಅಂತೆಯೇ ಕನ್ನಡಿಗರು ಮತ್ತು ತಮಿಳರು ಐಕ್ಯವಾಗಿದ್ದರೆ ಕಾವೇರಿ ವಿಚಾರವಾಗಿ ರಾಜಕಾರಣ ಮಾಡುತ್ತಿರುವ ಈ ರಾಜಕಾರಣಿಗಳ ಬೇಳೆ ಬೇಯುವುದಿಲ್ಲ ಎಂದೂ ಹೇಳುತ್ತಿದ್ದಾರೆ.

ಇನ್ನು ಇತ್ತ ಸಾಮಾಜಿ ಜಾಲತಾಣಗಳಲ್ಲಿ ಇದೀಗ ಕಾವೇರಿ ವಿಚಾರವಾಗಿ ಸಾಕಷ್ಟು ಚರ್ಚೆಗಳು ಆರಂವಾಗಿದ್ದು, #UniteForHumanity #Kannadigas #UnitForCauvery #CauveryMangementBoard #ISupportSimbu ಎಂಬ ಹ್ಯಾಶ್ ಟ್ಯಾಗ್ ಗಳು ವೈರಲ್ ಆಗುತ್ತಿದೆ.

Comments are closed.