ಕರಾವಳಿ

ಈ ಬಾರಿ ಹಾಲಾಡಿಯನ್ನು ಬೆಂಬಲಿಸಲ್ಲ: ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿದ ಕಿಶೋರ್ & ಇತರ ಅತೃಪ್ತರು!

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯ ಕುಂದಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿಯಲ್ಲೀಗ ಮತ್ತೆ ಭಿನ್ನಮತ ಬುಗಿಲೆದ್ದಿದೆ. ಇತ್ತೀಚೇಗಷ್ಟೇ.. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಮತ್ತೆ ಭಿನ್ನಮತದ ಬಿಸಿ ಮುಟ್ಟಿದೆ.

ಹಾಲಾಡಿಗೆ ಟಿಕೆಟ್ ನೀಡಿದಕ್ಕೆ ಅಸಮಾಧಾನಗೊಂಡಿರುವ ಪಕ್ಷದ ಪ್ರಮುಖ ಸ್ಥಾನದಲ್ಲಿದ್ದವರು ಸಾಮೂಹಿಕವಾಗಿ ತಮ್ಮ ಜಿಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಮಂತ್ರಿ ಸ್ಥಾನ ಸಿಕ್ಕದಿದ್ದಕ್ಕೆ ಪಕ್ಷ ತೊರೆದಿದ್ದ ಶ್ರೀನಿವಾಸ ಶೆಟ್ಟಿಯವರು ಕಳೆದ ಬಾರಿ ಪಕ್ಷೇತರನಾಗಿ ನಿಂತಿದ್ದರು. ಆವಾಗ ಇಡೀ ಕಾರ್ಯಕರ್ತರನ್ನು ಕಡೆಗಣಿಸಿ ಬಿಜೆಪಿಯನ್ನೇ ಸೋಲಿಸಿದ್ದರು ಇದೀಗ ಮತ್ತೆ ಪಕ್ಷ ಕಾರ್ಯಕರ್ತರನ್ನ ಕಡೆಗಣಿಸಿ ಶ್ರೀನಿವಾಸ ಶೆಟ್ಟಿಗೆ ಟಿಕೆಟ್ ಕೊಟ್ಟಿದೆ. ಇದು ಪಕ್ಷದ ಕಾರ್ಯರ್ಕರ್ತರಿಗೆ ಅವಮಾನವಾಗಿದೆ. ಹೀಗಾಗಿ ಅಸಮಾಧಾನಗೊಂಡು ಉಡುಪಿ ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಕೈಗೆ ತಮ್ಮ ಹುದ್ದೆಗಳಿಗೆ ರಾಜೀನಾಮೆಯನ್ನ ನೀಡಿದ್ದೇವೆ. ಯಾವುದೇ ಕಾರಣಕ್ಕೂ ಹಾಲಾಡಿ ಪರ ಕೆಲಸ ಮಾಡದೆ ಇರಲು ತೀರ್ಮಾನಿಸಿದ್ದು ನಾಳೆಯೂ ಕೂಡ ಇನ್ನಷ್ಟು ತಾಲೂಕು ನಾಯಕರು ಕೂಡ ರಾಜೀನಾಮೆಯನ್ನ ಸಲ್ಲಿಸಲಿದ್ದಾರೆ ಎಂದು ಬಿನ್ನಮತೀಯರು ಹೇಳಿದ್ದಾರೆ.

ಕಳೆದ ಬಾರಿ ಹಾಲಾಡಿ ಶ್ರೀನಿವಾಸ ಶೆಟ್ಟಿ ರಾಜೀನಾಮೆ ನೀಡಿದ್ದಾಗ ಹಾಲಾಡಿ ವಿರುದ್ದ ಕಿಶೋರ್ ಕುಮಾರ್ ಸ್ಪರ್ಧಿಸಿದ್ದರು. ಇದೀಗ ಮರಳಿ ಪಕ್ಷಕ್ಕೆ ಬಂದ ಹಾಲಾಡಿಯವರಿಗೆ ಬಿಜೆಪಿ ಪಕ್ಷ ಕರೆದು ಟಿಕೆಟ್ ಕೊಟ್ಟಿರುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ. ಕನಿಷ್ಟ ಪಕ್ಷ ಕಳೆದ ಬಾರಿ ಅಭ್ಯರ್ಥಿಯಾದ ತನ್ನನ್ನು ಒಂದು ಮಾತನ್ನು ಪಕ್ಷ ಕೇಳಲಿಲ್ಲ ಅನ್ನೋದು ಕಿಶೋರ್ ಅಸಮಾಧಾನಕ್ಕೆ ಇನ್ನೊಂದು ಕಾರಣ. ತಮ್ಮನ್ನು ಅವಮಾನಿಸಿದವರಿಗೆ ಯಾವುದೇ ಕಾರಣಕ್ಕೂ ಬೆಂಬಲಿಸುವುದಲ್ಲ ಅಂತಾ ಕಿಶೋರ್ ಹೇಳಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಹಾಲಾಡಿ ವಿರುದ್ದವೇ ನಮ್ಮ ಸಮರ ಅನ್ನೋ ಮಾತನ್ನೂ ಕೂಡ ಕಿಶೋರ್ ಹೇಳಿದ್ದಾರೆ.

ರಾಜಿನಾಮೆ ಕೊಟ್ಟವರು ಯಾರು?
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬಿ. ಕಿಶೋರ್ ಕುಮಾರ್, ಮೇರ್ಡಿ ಸತೀಶ್ ಹೆಗ್ಡೆ, ಚಂದ್ರಮೋಹನ ಪೂಜಾರಿ, ರವೀಂದ್ರ ದೊಡ್ಮನೆ, ಐರೋಡಿ ವಿಠಲ ಪೂಜಾರಿ, ಶ್ರೀನಿವಾಸ್ ಕುಂದರ್ ತಮ್ಮ ಹುದ್ದೆಗಳಿಗೆ ರಾಜೀನಾಮ ಸಲ್ಲಿಸಿದ್ದಾರೆ.

Comments are closed.