ಕರಾವಳಿ

ನೀತಿ ಸಂಹಿತೆ ಉಲ್ಲಂಘನೆ: ಮಂಗಳೂರು ಸೇರಿದಂತೆ ಜಿಲ್ಲೆಯ ವಿವಿಧೆಡೆ 9 ಪ್ರಕರಣ ದಾಖಲು

Pinterest LinkedIn Tumblr

 

ಮಂಗಳೂರು, ಎಪ್ರಿಲ್.9: ಕರ್ನಾಟಕ ರಾಜ್ಯ ವಿಧಾನಸಭೆಗೆ ಮೇ 12ರಂದು ನಡೆಯುವ ಮತದಾನದ ಹಿನ್ನೆಲೆಯಲ್ಲಿ ಜಾರಿಗೊಳಿಸಲಾದ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಘಟನೆಗೆ ಸಂಬಂಧಿಸಿ ದ.ಕ.ಜಿಲ್ಲೆಯಲ್ಲಿ 9 ಪ್ರಕರಣಗಳು ದಾಖಲಾಗಿವೆ.

ಮೂಡುಬಿದಿರೆ, ಮಂಗಳೂರು ನಗರ ಉತ್ತರ, ಮಂಗಳೂರು, ಪುತ್ತೂರಿನಲ್ಲಿ ತಲಾ ಒಂದೊಂದು ಮತ್ತು ಮಂಗಳೂರು ನಗರ ದಕ್ಷಿಣ ಕ್ಷೇತ್ರದಲ್ಲಿ 3, ಬಂಟ್ವಾಳ ಕ್ಷೇತ್ರದಲ್ಲಿ 2 ಪ್ರಕರಣ ದಾಖಲಾಗಿವೆ. ಬೆಳ್ತಂಗಡಿ ಮತ್ತು ಸುಳ್ಯದಲ್ಲಿ ಈವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಟ್ವಾಳದಲ್ಲಿ ಸಚಿವ ರಮಾನಾಥ ರೈ, ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ರಾಮಕೃಷ್ಣ ಆಳ್ವ, ಅಬ್ಬಾಸ್ ಅಲಿ, ಬೇಬಿ ಕುಂದರ್ ಹಾಗೂ ಬಿಜೆಪಿಯ ಉಮೇಶ್ ಡಿ.ಎಂ., ರವಿ ಅರಸು, ಮಂಗಳೂರು ದಕ್ಷಿಣದಲ್ಲಿ ಜ್ಯೋತಿ ಬಲ್ಮಠದ ಯಕ್ಷಮಿತ್ರ ಸಂಘಟನೆಯ ಅಧ್ಯಕ್ಷ ಹಾಗೂ ಬಿಜೆಪಿಯ ಶಂಕರ್ ಆಚಾರ್, ಹರೀಶ್ ಕೋಟ್ಯಾನ್ ಹಾಗೂ ಯೂಸಿ ನ್ಯೂಸ್ -ಯೂಸಿ ವೆಬ್‌ಡಾಟ್‌ಕಾಮ್, ಮಂಗಳೂರು ಉತ್ತರದಲ್ಲಿ ಸಂದೀಪ್ ದೇವಾಡಿಗ, ಆಕಾಶ್, ಚರಣ್ ರಾಜ್, ರಕ್ಷಿತ್ ಭಂಡಾರಿ, ಪುತ್ತೂರಿನಲ್ಲಿ ಎಸ್ಕೆಎಸೆಸ್ಸೆಫ್ ಸಂಘಟನೆ, ಮೂಡುಬಿದಿರೆಯಲ್ಲಿ ರಾಕೇಶ್ ರಾಕ್ ಹೇರ್ ಡ್ರೆಸ್ಸೆಸ್ ಹಳೆಯಂಗಡಿ, ಮಥಾ ಡೆವಲಪ್ಪರ್ಸ್‌, ಭಗವತಿ ಯುನೈಟೆಡ್ ಪ್ರೆಂಡ್ಸ್, ಭಗವತಿ ಸೌಂಡ್ಸ್ ಆಯಂಡ್ ಕ್ಯಾಟರರ್ಸ್‌ ಹಳೆಯಂಗಡಿ, ಜಯಶ್ರೀ ಮತ್ತು ಯಾದವ ದೇವಾಡಿಗ, ವಿದ್ಯಾವಿನಾಯಕ ಯುವಕ ಮಂಡಲದ ಅಧ್ಯಕ್ಷ, ರಾಜೇಶ್ ಕೋಟ್ಯಾನ್, ಚಂದ್ರಶೇಖರ್ ಅಂಚನ್, ಆಶ್ರಿತಾ ಕ್ಯಾಟರರ್ಸ್‌ ಹೊಯಿಗೆಗುಡ್ಡೆ, ಮಂಗಳೂರು ಕ್ಷೇತ್ರದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಪ್ರಕರಣ ದಾಖಲಾಗಿದೆ.

Comments are closed.