ಕುಂದಾಪುರ: ಆದಾಯಕ್ಕೂ ಮೀರಿ ಆಸ್ತಿ ಸಂಪಾದಿಸಿದ ಆರೋಪದಲ್ಲಿ ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ)ಯವರು ಕುಂದಾಪುರ ತಾಲೂಕು ಪಂಚಾಯತಿ ಇಂಜಿನಿಯರ್ (ಎ.ಡಬ್ಲ್ಯು.ಇ.) ಮನೆ, ಮಾವನ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ.
ತಾಲೂಕುಪಂಚಾಯತ್ ಇಂಜಿನಿಯರ್ ರವಿಶಂಕರ್ ಎನ್ನುವವರ ಕುಂದಾಪುರದ ಮನೆ, ಹಾಗೂ ಕಚೇರಿ, ಹೊನ್ನಾವರದಲ್ಲಿರುವ ಮಾವನ ಮನೆ ಮೇಲೆ ಏಕಕಾಲಕ್ಕೆ ಎಸಿಬಿ ದಾಳಿ ನಡೆಸಿದೆ.
ಎಸಿಬಿ ಎಸ್ಪಿ ಶ್ರುತಿ, ಉಡುಪಿ ಡಿವೈಎಸ್ಪಿ ದಿನಕರ್ ಶೆಟ್ಟಿ, ಮಂಗಳೂರು ಡಿವೈಎಸ್ಪಿ ಸುಧೀರ್ ಹೆಗ್ಡೆ, ಎಸಿಬಿ ನಿರೀಕ್ಷಕರಾದ ಜಯರಾಮ ಡಿ. ಗೌಡ, ಸತೀಶ್ ಕುಮಾರ್ ಮೊದಲಾದ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಸಂಜೆಯವರೆಗೂ ಈ ಕಾರ್ಯ ಮುಂದುವರೆಯಲಿದೆ. ರವಿಶಂಕರ್ ಹೊಂದಿರುವ ಮೂರು ಸೈಟುಗಳು, ಚಿನ್ನಾಭರಣಗಳ ಲೆಕ್ಕ ಪರಿಶೋಧನೆ ಕಾರ್ಯ ನಡೆಯುತ್ತಿದೆ. ಕುಂದಾಪುರದಲ್ಲಿರುವ ಬೆಲೆಬಾಳುವ ಬಂಗಲೆಯಲ್ಲಿ ತಪಾಸಣೆ ಕಾರ್ಯ ಮುಂದುವರೆದಿದೆ.
Comments are closed.