ಉಡುಪಿ: ಉಡುಪಿ ಎಂಟು ದಿನಗಳ ಹಿಂದೆ ಉಡುಪಿಯ ಪಡುಬಿದ್ರಿ ಕಾಂಜರಕಟ್ಟೆ ಯ ಬಾರೊಂದರ ಬಳಿ ಬರ್ಬರವಾಗಿ ಕೊಲೆಯಾಗಿದ್ದ ರೌಡಿ ಶೀಟರ್ ನವೀನ್ ಡಿಸೋಜಾ ಕೊಲೆ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಪಾತಕ ಲೋಕದ ಅಧ್ಯಾಯ ಮುಗಿದು ನೆಮ್ಮದಿಯಿಂದ ಇದ್ದ ಉಡುಪಿ ಜನರಿಗೆ ಈ ರೌಡಿ ಕಾಳಗ ಮತ್ತೆ ನಿದ್ದೆಗೆಡಿಸಿತ್ತು.

ಫೆಬ್ರವರಿ 28 ರಂದು ರಾತ್ರಿ ನಡೆದಿದ್ದ ನವೀನ್ ಕೊಲೆಯನ್ನ ತನಿಖೆ ನಡೆಸುತ್ತಿದ್ದ ಪೊಲಿಸರಿಗೆ ಆತನ ವೈರಿಗಳೇ ಮಾಡಿರುವುದು ಗೊತ್ತಾಗಿದ್ದೆ ತಡ ಪ್ರಕರಣದ ಬೆನ್ನು ಬಿದ್ದ ಪೊಲೀಸರು ಐದು ಜನ ನಟೋರಿಯಸ್ ಗಳನ್ನ ಬಂಧಿಸಿದ್ದಾರೆ. ಪ್ರಮುಖ ಆರೋಪಿಯಾದ ರೌಡಿ ಶೀಟರ್ ಇನ್ನಾ ಗ್ರಾಮದ ಕಿಶನ್ ಹೆಗ್ಡೆ,ಇನ್ನೋಬ್ಬ ರೌಡಿ ಶೀಟರ್ ಗುಂಡಿಬೈಲು ರಮೇಶ್ ಪೂಜಾರಿ, ಮತ್ತೊಬ್ಬ ರೌಡಿ ಶಿಟರ್ ನಡ್ಸಾಲು ಗ್ರಾಮದ ಮೋಹನ್ ಚಂದ್ರ,ಮಹೇಶ್ ಗಾಣಿಗ ಹಾಗೂ ನಾಗರಾಜ ಎನ್ನುವ ನಟೋರಿಯಸ್ ಗಳು ಇದೀಗ ಪೊಲೀಸರ ಕೈಗೆ ಸಿಕ್ಕಿ ಬಿದ್ದು ಕಂಬಿ ಎಣಿಸುತ್ತಿದ್ದಾರೆ.


ಕಿಶನ್ ಹೆಗ್ಡೆ ಹಾಗೂ ನವೀನ್ ಡಿಸೋಜಾ ಮಧ್ಯೆ ಹಣ ಕಾಸಿನ ವಿಚಾರದಲ್ಲಿ ಅವಾಗವಾಗ ಜಗಳ ನಡೆಯುತ್ತಿತ್ತು.ನವೀನ್ ಡಿಸೋಜಾ ಬಳಿಯಿಂದ ಕಿಶನ್ ನಾಲ್ಕು ಲಕ್ಷ ಹಣವನ್ನ ಸಾಲವಾಗಿ ಪಡಕೊಂಡಿದ್ದ. ಪಡಕೊಂಡ ಹಣ ವಾಪಸ್ಸು ನೀಡದ ಕಾರಣ ಇಬ್ಬರ ಮಧ್ಯೆ ಹಲವು ಬಾರಿ ಜಗಳವೂ ನಡೆದಿತ್ತು.ಅಷ್ಟೇ ಅಲ್ಲದೇ ಹಣ ನೀಡದೇ ಇದ್ದರೆ ನಿನ್ನ ಮುಗಿಸಿ ಬಿಡುವುದಾಗಿ ನವೀನ್ ಕಿಶನ್ ಹೆಗ್ಡೆಗೆ ಬೆದರಿಕೆನೂ ಹಾಕಿದ್ದನಂತೆ .ಈ ಕಾರಣಕ್ಕಾಗಿ ಇಬ್ಬರ ಮಧ್ಯೆ ವೈರತ್ವ ಮೂಡಿತ್ತು.
ಇದೇ ಸಂಧರ್ಭದಲ್ಲಿ ಮಹೇಶ್ ಗಾಣಿಗ ಜೊತೆ ಕೂಡ ನವೀನ್ ಕಾಲು ಕೆರೆದು ಜಗಳ ಮಾಡಿಕೊಂಡಿದ್ದ, ಮಾಂಸ ಕೊಡಿಸುವುದಾಗಿ ಹೇಳಿ ಮನೆಗೆ ಕರೆದುಕೊಂಡು ಹೋಗಿದ್ದ ನವೀನ್ ಡಿಸೋಜಾ ತನ್ನ ತಾಯಿ ಜೊತೆನೂ ಮಹೇಶ್ ಗಾಣಿಗ ಜಗಳ ಮಾಡುವಂತೆ ಮಾಡಿದ್ದ , ಹೀಗಾಗಿ ಮಹೇಶ್ ಗಾಣಿಗ ಕೂಡ ನವೀನ್ ಮೇಲೆ ಕುಪಿತನಾಗಿದ್ದ .ಈ ಇಬ್ಬರು ಬಾರಲ್ಲಿ ಕುಳಿತ್ತಿದ್ದಾಗ ನವೀನ್ ಡಿಸೋಜನನ್ನು ಮುಗಿಸಲು ಪ್ಲಾನ್ ಮಾಡಿದ್ದಾರೆ.ಜೊತೆಗೆ ಇನ್ನೂ ಮೂವರನ್ನು ಹಣ ಕೊಡುವುದಾಗಿ ತಮ್ಮ ಗುಂಪಲ್ಲಿ ಸೇರಿಸಿ ನವೀನ್ ಡಿಸೋಜನಿಗೆ ಸ್ಕೆಚ್ ಹಾಕಿದರು.
ಅಂದು ಈ ನಟೋರಿಯಸ್ ಗ್ಯಾಂಗ್ ನವೀನ್ ಡಿಸೋಜನಿಗಾಗಿ ಹೊಂಚು ಹಾಕಿ ಕಾದು ಕುಳಿತ್ತಿತ್ತು. ರಾತ್ರಿ ಸುಮಾರು 9.30 ಗಂಟೆಗೆ ಕಂಠ ಪೂರ್ತಿ ಕುಡಿದು ಬಾರಿನಿಂದ ಹೊರ ಬಂದ ನವೀನ್ ಡಿಸೋಜಾ ಹಾಗೂ ಆತನ ಇಬ್ಬರು ಗೆಳೆಯರು , ಬೈಕಿನಲ್ಲಿ ಕೂರುತ್ತಿದ್ದಂತೆ ಕಿಶನ್ ಹೆಗ್ಡೆ ಕಾರನ್ನ ಚಾಲಾಯಿಸಿ ಬೈಕಿಗೆ ಡಿಕ್ಕಿ ಹೊಡೆಯುತ್ತಾನೆ. ಈ ಸಂದರ್ಭದಲ್ಲಿ ನೆಲಕ್ಕೆ ಬಿದ್ದ ನವೀನ್ ಡಿಸೊಜನಿಗೆ ಈ ನಾಲ್ವರು ಖತರ್ ನಾಕ್ ಕ್ರಿಮಿನಲ್ ಗಳು ತಲಾವಾರ್ ನಿಂದ ಕಡಿದು ಕೊಲೆ ಮಾಡಿ ಪರಾರಿಯಾಗಿರುತ್ತಾರೆ.
ಸಿಸಿಟಿವಿ ಫೂಟೇಜ್ ಗಳನ್ನು ತನಿಖೆಗೆ ಒಳಪಡಿಸಿದ ಪೊಲಿಸರಿಗೆ ಯಾವುದೇ ಸುಳಿವು ಸಿಕ್ಕಿರುವುದಿಲ್ಲ. ಈ ಸಂಧರ್ಭದಲ್ಲಿ ಕೆಲವು ದಿನಗಳ ಹಿಂದೆ ಗಲಾಟೆ ಮಾಡಿದ್ದ ಮಹೇಶ್ ಗಾಣಿಗನನ್ನ ವಿಚಾರಣೆ ನಡೆಸಿದಾಗ ,ಕೊಲೆ ನಡೆಸಿರುವುದು ತಮ್ಮದೇ ಗ್ಯಾಂಗ್ ಎಂದು ಒಪ್ಪಿಕೊಂಡಿರುತ್ತಾನೆ.ಮತ್ತು ಇತರ ನಾಲ್ವರ ವಿಷಯನ್ನು ಬಾಯಿ ಬಿಟ್ಟಿದ್ದು.ಕೊಲೆ ಮಾಡಿದ ನಾಲ್ವರು ಮುಂಬೈಗೆ ತೆರಳಿರುವುದಾಗಿ ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾನೆ .
ಕೊಲೆ ಮಾಡಿದ ರೌಡಿಗಳು ನೇರ ಮುಂಬೈನ ರೆಸಾರ್ಟ್ ವೊಂದರಲ್ಲಿ ಇರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು .ಮುಂಬೈಗೆ ತೆರಳಿ ನಾಲ್ವರನ್ನು ಅರೆಸ್ಟ್ ಮಾಡಿದ್ದಾರೆ.
ಒಟ್ಟಿನಲ್ಲಿ ಹಣ ಕಾಸಿನ ವಿಚಾರದಲ್ಲಿ ರೌಡಿ ಶಿಟರ್ ಒಬ್ಬನನ್ನು ರೌಡಿಗಳೇ ಕೊಲೆ ಮಾಡಿರುವುದು ಉಡುಪಿ ಜಿಲ್ಲೆಯ ಜನತೆಗೆ ದಂಗಾಗಿ ಬಿಟ್ಟಿದ್ದಾರೆ.
ಇದನ್ನೂ ಓದಿರಿ:
ಉಡುಪಿ: ಚೂರಿಯಿಂದ ಇರಿದು ರೌಡಿ ಶೀಟರ್ ನವೀನ್ ಡಿಸೋಜಾ ಬರ್ಬರ ಕೊಲೆ
ರೌಡಿ ಶೀಟರ್ ಹತ್ಯೆ ಪ್ರಕರಣ; ತನಿಖೆ ಮೂರು ತಂಡಗಳ ರಚನೆ: ಎಸ್ಪಿ ಲಕ್ಷ್ಮಣ್ ನಿಂಬರ್ಗಿ
Comments are closed.