ಕರಾವಳಿ

ರೌಡಿ ಶೀಟರ್ ಹತ್ಯೆ ಪ್ರಕರಣ; ತನಿಖೆ ಮೂರು ತಂಡಗಳ ರಚನೆ: ಎಸ್ಪಿ ಲಕ್ಷ್ಮಣ್ ನಿಂಬರ್ಗಿ

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯ ಪಡುಬಿದ್ರಿ ಸಮೀಪದ ಕಾಂಜರಕಟ್ಟೆ ಎಂಬಲ್ಲಿ ರೌಡಿಶೀಟರ್ ನವೀನ್ ಡಿಸೋಜಾ ಎನ್ನುವವನ್ನ ಬರ್ಬರವಾಗಿ ಮಾರಕಯುಧಗಳಿಂದ ಕೊಲೆ ಮಾಡಿ ಪರಾರಿಯಾಗಿರುವ ಆರೋಪಿಗಳನ್ನ ಪತ್ತೆ ಹಚ್ಚಲು ಉಡುಪಿ ಪೊಲೀಸರು ಮೂರು ಪ್ರತ್ಯೇಕ ತಂಡಗಳನ್ನು ರಚಿಸಿದ್ದಾರೆ.

ಕಾರ್ಕಳ ಹಾಗೂ ಪಡುಬಿದ್ರಿ ಠಾಣೆಗಳಲ್ಲಿ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ರೌಡಿ ಶಿಟರ್ ನವೀನ್ ಡಿಸೋಜರಿಗೆ ಹಲವು ಜೀವ ಬೆದರಿಕೆಗಳು ಈ ಹಿಂದೆ ಇದ್ದಿದ್ದವು ಎನ್ನಲಾಗಿದೆ.ಈ ಹಿನ್ನಲೆಯಲ್ಲಿ ಕೂಡ ಪೊಲೀಸ್ ತನಿಖೆ ತೀವ್ರಗೊಂಡಿದ್ದು ,ಬೇರೆ ಬೇರೆ ಅಯಾಮಗಳಲ್ಲಿ ತನಿಖೆ ಮುಂದುವರೆಯುತ್ತಿದೆ ಎಂದು ಉಡುಪಿ ಪೊಲೀಸ್ ವರಿಷ್ಠಧಿಕಾರಿ ಲಕ್ಷ್ಮಣ್ ನಿಂಬರಗಿ ಹೇಳಿದ್ದಾರೆ.

(ಪೊಲೀಸ್ ವರಿಷ್ಠಧಿಕಾರಿ ಲಕ್ಷ್ಮಣ್ ನಿಂಬರಗಿ)

ನಿನ್ನೆ ತಡ ರಾತ್ರಿ ಸುಮಾರು 10 ಗಂಟೆಗೆ , ಪಡುಬಿದ್ರಿ ಸಮೀಪದ ಸಾಂತೂರು ಗ್ರಾಮದ ಕಾಂಜರಕಟ್ಟೆಯ , ಗ್ಲೋರಿಯ ಬಾರೊಂದರಲ್ಲಿ ರೌಡಿ ಶೀಟರ್ ನವೀನ್ ಡಿಸೋಜ ಹಾಗೂ ಅತನ ಗೆಳೆಯರು ಗುಂಡು ಪಾರ್ಟಿ ಮುಗಿಸಿ ಹೊರಬಂದು ಬೈಕ್ ಎರುತ್ತಿದ್ದಂತೆ, ಕಾರಿನಲ್ಲಿ ಕಾದು ಕುಳಿತ್ತಿದ್ದ ತಂಡವೊಂದು ಬೈಕಿಗೆ ಡಿಕ್ಕಿ ಹೊಡೆದಿದ್ದಾರೆ.ಈ ಸಂಧರ್ಭದಲ್ಲಿ ಮೂವರು ಬೈಕಿನಿಂದ ಕೆಳ ಬೀಳುತ್ತಿದ್ದಂತೆ, ಕಾರಿನಿಂದ ಹೊರ ಬಂದ ದುಷ್ಕರ್ಮಿಗಳು ರೌಡಿ ಶೀಟರ್ ಮೇಲೆ ಮಾರಕಯುಧಗಳಿಂದ ದಾಳಿ ನಡೆಸಿ ಕಾರಿನಲ್ಲಿ ಪಾರಾರಿಯಾಗಿದ್ದಾರೆ .ಘಟನೆ ಸಂಧರ್ಭ ಜೊತೆಗಿದ್ದ ಗೆಳೆಯರು ಹೆದರಿ ಅಲ್ಲಿಂದ ಓಡಿ ಹೋಗಿರುತ್ತಾರೆ.ನವೀನ್ ಡಿಸೋಜ ಕುತ್ತಿಗೆ ಭಾಗ ಹಾಗೂ ಕೈಗಳಿಗೆ ಬಲವಾದ ಏಟು ಬಿದ್ದ ಕಾರಣ ಆತ ಸ್ಥಳದಲ್ಲೇ ಸಾವನ್ನಾಪ್ಪಿದ್ದಾನೆ.

ವಿಪರೀತ ಕುಡಿತದ ಚಟವಿರುವ ನವೀನ್ ಡಿಜೋಜ ಹಲವರೊಂದಿಗೆ ಕಾಲು ಕೆರೆದು ಜಗಳ ಮಾಡಿಕೊಳ್ಳುತ್ತಿದ್ದ ಎನ್ನಲಾಗಿದೆ,ಭೂಮಿಗೆ ಸಂಭಂಧ ಪಟ್ಟ ಹಲವು ಗಲಾಟೆಗಳಲ್ಲಿ ಈತ ಬಾಗಿಯಾಗಿದ್ದ. ಹಳೆ ವೈಷ್ಯಮ್ಯದ ಹಿನ್ನಲೆಯಲ್ಲಿ ಕೊಲೆ ಮಾಡಿರುವ ಸಂಶಯ ವ್ಯಕ್ತವಾಗಿದೆ.ಈ ಎಲ್ಲಾ ಅಯಾಮಗಳಲ್ಲೂ ತನಿಖೆ ನಡೆಯುತ್ತಿದ್ದು ಅದಷ್ಟು ಬೇಗ ಆರೋಪಿಗಳನ್ನ ಪತ್ತೆ ಹಚ್ಚುವುದಾಗಿ ಪೊಲೀಸ್ ಇಲಾಖೆ ಹೇಳಿದೆ.

Comments are closed.