ಕರಾವಳಿ

ಗೋಹತ್ಯೆ ಮಾತ್ರವಲ್ಲ, ಎಲ್ಲಾ ಪ್ರಾಣಿಗಳ ಹತ್ಯೆ ನಿಷೇಧಿಸಿದರೇ ನನ್ನ ಬೆಂಬಲ: ಗೃಹ ಸಚಿವ ರಾಮಲಿಂಗಾರೆಡ್ಡಿ

Pinterest LinkedIn Tumblr

ಉಡುಪಿ: ಕರ್ನಾಟಕ ರಾಜ್ಯದಲ್ಲಿ ಬಿಜೆಪಿಯಿಂದ ಹಿಂದೂಗಳಿಂದ ‌ಕೊಲೆಯಾದವರ ಪಟ್ಟಿ 14 ಮಂದಿಯಾಗಿದೆ. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ತನಿಖೆ ವಿಚಾರವಾಗಿ ಸದ್ಯ ಮಾತನಾಡಲ್ಲ, ತನಿಖೆ ಬಗ್ಗೆ ಏನನ್ನೂ ಹೇಳುವುದಿಲ್ಲ. ಈಗಾಗಲೇ ವಿಧಾನಸಭೆಯಲ್ಲಿ ಹೇಳಿರುವುದಷ್ಟೇ ನನ್ನ ಪ್ರತಿಕ್ರಿಯೆ ಎಂದು ಉಡುಪಿಯಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಸುಫಾರಿ ಹಂತಕರಿಗೆ ಮಹಾರಾಷ್ಟ್ರ, ಉತ್ತರಪ್ರದೇಶದಿಂದ ಶಸ್ತ್ರಾಸ್ತ್ರ ಬರುತ್ತಿವೆಯೆಂಬುದು ಗೌರಿ ಲಂಕೇಶ್ ಹತ್ಯೆ ಸೇರಿದಂತೆ ಇತರೆ ಕೇಸ್ ತನಿಖೆ ವೇಳೆ ಗೊತ್ತಾಗಿದೆ. ಅಲ್ಲಿನ ಸರ್ಕಾರಗಳು ಅಕ್ರಮವಾಗಿ ಪಿಸ್ತೂಲ್ ಸೇರಿದಂತೆ ಶಸ್ತ್ರಾಸ್ತ್ರ ಮಾರಾಟ ಅಂಗಡಿ ಬಂದ್ ಮಾಡಬೇಕು. ಕೊಲೆಗಾರರು, ಸುಫಾರಿ ಹಂತಕರು ಈ ಎರಡೂ ರಾಜ್ಯಗಳಿಂದ ತರುತ್ತಿದ್ದಾರೆ, ಇದಕ್ಕೆ ಕಡಿವಾಣ ಹಾಕಬೇಕಿರುವುದು ಆ ರಾಜ್ಯಗಳ ಜವಾಬ್ದಾರಿಯಾಗಿದೆ. ರಾಜ್ಯಗಳಲ್ಲಿ ನಡೆದ ಕೆಲ ಹತ್ಯೆ ಗಳಿಗೆ ಇಲ್ಲಿಂದ ತಂದ ಶಸ್ತ್ರಾಸ್ತ್ರ ಬಳಕೆಯಾಗಿದೆ ಎಂದಿದ್ದಾರೆ.

ಗೋ ಮಾಂಸ ರಫ್ತನ್ನು ಕೇಂದ್ರ ಸರ್ಕಾರ ಮೊದಲು ತಡೆ ಮಾಡಲಿ. ಕೇವಲ ಗೋಹತ್ಯೆ ಬಗ್ಗೆ ಮಾತ್ರ ಬಿಜೆಪಿಯವರು ಮಾತನಾಡುತ್ತಾರೆ. ಎಲ್ಲಾ ಪ್ರಾಣಿಗಳ ಹತ್ಯೆಯನ್ನ ಕೇಂದ್ರ ನಿಷೇಧ ಮಾಡಲಿ, ಇದಕ್ಕೆ ನಾವು ಬೆಂಬಲ ಹಾಗೂ ಸಹಕಾರ ನೀಡುತ್ತೇನೆ. ಗೋಹತ್ಯೆ ಬಗ್ಗೆ ಯುಪಿ ಸಿಎಂ ಆದಿತ್ಯಾನಾಥ ಯೋಗಿ, ಮೇನಕಾ ಗಾಂಧಿ ಸೇರಿದಂತೆ ಬಿಜೆಪಿ ನಾಯಕರು ಮಾತನಾಡುತ್ತಾರೆ. ಗೋ ಮಾಂಸ ರಫ್ತು ನಿಷೇಧದ ಬಗ್ಗೆ ಯಾಕೆ ಮಾತನಾಡುವುದಿಲ್ಲ. ಯೋಗಿ ಆದಿತ್ಯನಾಥ ಕರೆಯಿಸಿ ಬಿಜೆಪಿಯವರು ಭಾಷಣ ಮಾಡಿಸುತ್ತಾರೆ. ಸಿಎಂ ಯೋಗಿ ಮೇಲೆ ಅಟೆಂಟ್ ಮರ್ಡರ್ ಕೇಸ್ ಇತ್ತು ಎಂದು ರೆಡ್ಡಿ ಕಿಡಿಕಾರಿದ್ದಾರೆ.

ಪಿಎಫ್ಐ, ಎಸ್ಡಿಪಿಐ ನಿಷೇಧ ವಿಚಾರವಾಗಿ ಮಾತನಾಡಿದ ಅವರು, ನಿಷೇಧ ಮಾಡುವುದಿದ್ದರೆ ಎಲ್ಲರಿಗೂ ಮಾಡಬೇಕು. ಪಿಎಫ್ಐ, ಎಸ್ಡಿಪಿಐ ಹೊಸದೇನಲ್ಲ, ಮೊದಲಿನಿಂದ ಇದ್ದವರು. ಆವಾಗ ಕಾಂಗ್ರೆಸ್ ಓಟ್ ಬ್ಯಾಂಕ್ ಡಿವೈಡ್ ಆಗುತ್ತೆ ಅಂತ ಬೆಳೆಯಲು ಬಿಜೆಪಿಗರೇ ಬಿಟ್ಟರು. ಈ ಸಂಘಟನೆಯನ್ನು ಬಿಜೆಪಿ ಅಧಿಕಾರದಲ್ಲಿದ್ದಾಗ ನಿಷೇಧಿಸುವಂತೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಮಾಡಿಲ್ಲ. ಆದರೆ ನಾವು ಈಗ ಕಂಟ್ರೋಲ್ ಮಾಡ್ತಾ ಇದ್ದೀವಿ, ನಾವು ಎರಡು ಭಯೋತ್ಪಾದಕರ ಫ್ಯಾಕ್ಟರಿಗಳನ್ನು ಮುಚ್ಚಿಸಿದ್ದೇವೆ. ದ.ಕ. ಜಿಲ್ಲೆಯಲ್ಲಿರುವ ಕೋಮು ಫ್ಯಾಕ್ಟರಿಗಳನ್ನು ಮುಚ್ಚಿಸುವ ಕೆಲಸ ಮಾಡಿದ್ದೇವೆ ಎಂದಿದ್ದಾರೆ.

Comments are closed.