ಕರಾವಳಿ

ಕಣ್ಣಿನ ದೃಷ್ಟಿಯಿಲ್ಲದ ‘ಗರುಡ’ ಪಕ್ಷಿಗೆ ಚಿಕಿತ್ಸೆ ನೀಡಿದ ಉಡುಪಿಯ ‘ನೇತ್ರಾ’ಲಯ!

Pinterest LinkedIn Tumblr

ಉಡುಪಿ: ಬಾನಲ್ಲಿ ಹಾರಡುತ್ತಿದ್ದ ಗರುಡ ಪಕ್ಷಿಯೊಂದು ಯೊಂದು ಇದ್ದಕ್ಕಿದ್ದಂತೆ ತನ್ನ ದೃಷ್ಟಿ ಕಳಕ್ಕೊಂಡು ನೆಲಕ್ಕೆ ಬೀಳುತ್ತದೆ. ಆ ಗರುಡ ಪಕ್ಷಿಯ ಅದೃಷ್ಟ ಚೆನ್ನಾಗಿತ್ತೋ ಎನೋ..ದೃಷ್ಟಿ ಕಳಕೊಂಡ ಗರುಡ ಪಕ್ಷಿ ಶ್ರೀಗಳೊಬ್ಬರ ಕಣ್ಣಿಗೆ ಬೀಳುತ್ತೆ.ಮನ ಕರಗಿದ ಶ್ರೀಗಳು , ಗರುಡನಿಗೆ ದೃಷ್ಟಿ ಕೊಡಿಸಲು ಮುಂದಾಗಿರುವ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಕೃಷ್ಣ ದೇವರಿಗೆ ಎಷ್ಟು ಮಹತ್ವವನ್ನು ಕೊಡಲಾಗುತ್ತೋ ಅಷ್ಟೇ ಮಹತ್ವವನ್ನು ಮಠದಲ್ಲಿರುವ ಗರುಡ ದೇವರ ಮೂರ್ತಿಗೂ ನೀಡಲಾಗುತ್ತೇ.ಪ್ರತಿ ನಿತ್ಯ ಪೂಜೆ ಪುನಾಸ್ಕಾರಗಳು, ಕೃಷ್ಣ ಮಠದಲ್ಲಿರುವ ಗರುಡ ದೇವರಿಗೂ ಮಾಡಲಾಗುತ್ತೆ .ಹೀಗಾಗಿ ಇಲ್ಲಿನ ಮಠಕ್ಕೂ ಗರುಡಕ್ಕೂ ಎಲ್ಲಿಲ್ಲದ ಸಂಭಂಧವಿದೆ.ಗರುಡನಿಗೆ ಪೂಜೆ ರೂಪದಲ್ಲಿ ಸೇವೆ ಮಾಡುತ್ತಿದ್ದ ಸ್ವಾಮೀಜಿಗೆ ಇದೀಗ ನಿಜ ಗರುಡ ಪಕ್ಷಿಯ ಸೇವೆ ಮಾಡೋ ಘಟನೆಯೊಂದು ನಡೆದಿದೆ. ನಿನ್ನೆಯ ದಿನ ಬಾನಲ್ಲಿ ಹಾರಾಡುತ್ತಿದ್ದ ಗರುಡವೊಂದು ದೃಷ್ಟಿ ಕಳಕೊಂಡು ಇದ್ದಕ್ಕಿದ್ದಂತೆ ಪೇಜಾವರ ಮಠದ ವಾಠರದಲ್ಲಿದ್ದ ತೆಂಗಿನ ಮರದ ಬುಡದಲ್ಲಿ ಬಂದು ಬಿದ್ದಿದೆ. ದಾರಿ ಕಾಣದೆ ಒದ್ದಾಡುತ್ತಿದ್ದ ಗರುಡವನ್ನು ಕಂಡ ಶ್ರೀಗಳ ಶಿಷ್ಯ ವೃಂದ ಅದನ್ನ ಹಿಡಿದುಕೊಂಡು ಪೇಜಾವರ ಕಿರಿಯ ಶ್ರೀಗಳ ಬಳಿ ತಂದಿದ್ದಾರೆ.ಎರಡು ಕಣ್ಣುಗಳು ಕಾಣಿಸದ ಗರುಡನ್ನ ಕಂಡ ಶ್ರೀಗಳ ಮನ ಕರಗಿ ಚಿಕಿತ್ಸೆ ನೀಡಿ ಕಣ್ಣಿನ ದೃಷ್ಟಿ ಬರಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಉಡುಪಿಯ ನೇತ್ರಲಾಯ ಕಣ್ಣಿನ ಆಸ್ಪತ್ರೆಯಲೀಗ ಗರುಡನಿಗೆ ಚಿಕಿತ್ಸೆ ಪ್ರಾರಂಭವಾಗಿದೆ.

ಮನುಷ್ಯರ ಕಣ್ಣಿಗೆ ಚಿಕಿತ್ಸೆ ಮಾಡೋ ವೈದರೇ …ಇದೀಗ ಗರುಡ ಪಕ್ಷಿಯ ಕಣ್ಣಿನ ಚಿಕಿತ್ಸೆಗೆ ಮುಂದಾಗಿರುವಂತಹದ್ದು ವಿಶೇಷ. ಸ್ವಾಮೀಜಿಯ ಮರುಕ ಕಂಡ ವೈದರುಗಳ ತಂಡ ಗರುಡ ಪಕ್ಷಿಗೆ ದೃಷ್ಟಿ ಬರಿಸಲು ಚಿಕಿತ್ಸೆ ಪ್ರಾರಂಭಿಸಿದ್ದಾರೆ. ಬೆಂಗಳೂರಿನ ತಜ್ನ ವೈದರನ್ನು ಸಂಪರ್ಕಿಸಿ ಸಲಹೆಗಳನ್ನ ಪಡೆದಿದ್ದಾರೆ.ಕಣ್ಣಿನ ಅಪರೇಶನ್ ನಡೆಸಬೇಕಾಗಿದ್ದು, ಇದಕ್ಕೆಂದೆ ವಿಶೇಷ ವೈದಕೀಯ ಸಲಕರಣೆಗಳನ್ನು ತರಿಸಲಾಗುತ್ತಿದೆ .ಹತ್ತು ದಿನಗಳ ಕಾಲ ಕಣ್ಣಿಗೆ ಡ್ರಾಪ್ಸ್ ಹಾಕಿದ ನಂತರ ಅಪರೇಶನ್ ಮಾಡಲು ನಿರ್ಧರಿಸಿದ್ದಾರೆ.ಸಾವಿರಾರು ಜನರ ದೃಷ್ಟಿ ತಂದುಕೊಟ್ಟ ವೈದರ ತಂಡವೀಗ …, ಗರುಡ ಪಕ್ಷಿಗೆ ದೃಷ್ಟಿ ಬರಿಸುವ ಅಪರೂಪದ ಶಸ್ತ್ರ ಚಿಕಿತ್ಸೆಗೆ ಸಜ್ಜಾಗಿದ್ದಾರೆ..

ದೃಷ್ಟಿ ಕಳಕೊಂಡ ಗರುಡನನ್ನ ಪೇಜಾವರ ಮಠಲ್ಲಿ ವಿಶ್ರಾಂತಿ ಪಡೆಯುತ್ತಿರುವ ವಿಶ್ವೇಶ ತೀರ್ಥ ಸ್ವಾಮಿಜಿ ಕೂಡ ಕಂಡು ಮರುಗಿದ್ದಾರೆ.ಪ್ರತಿ ನಿತ್ಯ ಪೂಜೆ ಮಾಡೋ ಗರುಡ ದೇವರ ರೂಪದಲ್ಲಿರುವ ನಿಜ ಗರುಡನಿಗೆ ಮಠದಲ್ಲಿಯೇ ಸೇವೆ ಮಾಡಲು ಸ್ವಾಮೀಜಿಗಳು ತೀರ್ಮಾನಿಸಿದ್ದಾರೆ.ಒಂದು ಮೂಗ ಪಕ್ಷಿಯೊಂದಕ್ಕೆ ಮರಳಿ ದೃಷ್ಟಿ ಕೊಡಿಸಲು ಪ್ರಯತ್ನಿಸುತ್ತಿರುವ ಶ್ರೀಗಳಿಬ್ಬರ ಕಾರ್ಯವನ್ನು ಭಕ್ತರು ಕೊಂಡಾಡಿದ್ದಾರೆ.

Comments are closed.