ರಾಷ್ಟ್ರೀಯ

ಸುಂಜವಾನ್ ದಾಳಿ: ಬೆನ್ನಿಗೆ ಉಗ್ರರ ಗುಂಡು ಹೊಕ್ಕರೂ ಹೆಣ್ಣು ಮಗುವಿಗೆ ಜನ್ಮನೀಡಿದ ಮಹಿಳೆ !

Pinterest LinkedIn Tumblr

ಶ್ರೀನಗರ: ಜಮ್ಮು ಕಾಶ್ಮೀರದ ಹೊರವಲಯದ ಸಂಜ್ವಾನ್‌ನಲ್ಲಿರುವ ಸೇನಾ ಸಿಬ್ಬಂದಿ ವಸತಿ ಸಮುಚ್ಛಯದ ಮೇಲೆ ಉಗ್ರರು ದಾಳಿ ನಡೆಸಿರುವಂತೆಯೇ ಗುಂಡೇಟು ತಗುಲಿದ ತುಂಬು ಗರ್ಭಿಣಿಯೊಬ್ಬರು ಮಗುವಿಗೆ ಜನ್ಮ ನೀಡುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದಾರೆ.

ಶನಿವಾರ ಜೈಶ್‌ ಎ ಮೊಹಮ್ಮದ್‌ ಉಗ್ರರು ನಡೆಸಿದ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ತುಂಬು ಗರ್ಭಿಣಿ, ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ತಿಳಿದುಬಂದಿದೆ. ಮಹಿಳೆಯ ಕೆಳ ಭಾಗಕ್ಕೆ ಗುಂಡು ಹೊಕ್ಕಿದ್ದರೂ ಮಹಿಳೆ ಪಪಾಡ ಸದೃಶವಾಗಿ ಪಾರಾಗಿದ್ದು, 35 ವಾರಗಳ ತುಂಬು ಗರ್ಭಿಣಿಯನ್ನು ಏರ್ ಲಿಫ್ಟ್ ಮೂಲಕ ತುರ್ತಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ದಾಳಿ ನಡೆದ ಕೂಡಲೆ ಸೇನಾ ಪಡೆಗಳು ಹೆಲಿಕ್ಯಾಪ್ಟರ್‌ ಬಳಸಿ ಸೇನಾ ಆಸ್ಪತ್ರೆಗೆ ದಾಖಲಿಸಿದ್ದರು.

ಶಸ್ತ್ರ ಚಿಕಿತ್ಸೆ ನಡೆಸಿ ಮಗುವನ್ನು ಹೊರತೆಗೆಯಲಾಗಿದ್ದು, ಮಹಿಳೆ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಹೆಣ್ಣು ಮಗು 2.5 ಕೆ.ಜಿ ತೂಕವಿದ್ದು ಆರೋಗ್ಯವಾಗಿದೆ. ಅಂತೆಯೇ ತಾಯಿಯೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.

Comments are closed.