ಕರಾವಳಿ

ಆತ್ಮತೃಪ್ತಿಗಾಗಿ ರಾಜಕೀಯಕ್ಕೆ ಬಂದಿದ್ದೇನೆ, ಲಾಭಕ್ಕಾಗಿ ಅಲ್ಲ: ಉಪೇಂದ್ರ

Pinterest LinkedIn Tumblr

ಉಡುಪಿ: ಬೆಕ್ಕಿಗೆ ಗಂಟೆ ಕಟ್ಟಿದ್ದೇನೆ .ಗಂಟೆ ಬಾರಿಸುವ ಜನ ಬೇಕಾಗಿದೆ. ಆತ್ಮತೃಪ್ತಿಗಾಗಿ ರಾಜಕೀಯಕ್ಕೆ ಬಂದಿದ್ದೇನೆ ಹೊರತು ಲಾಭಕ್ಕಾಗಿ ಅಲ್ಲ ಅಂತ ನಟ ಹಾಗೂ ಕೆಪಿಜೆಪಿ- ಪ್ರಜಾಕೀಯ ಪಕ್ಷದ ಸ್ಥಾಪಕ ಉಪೇಂದ್ರ ತಿಳಿಸಿದ್ದಾರೆ.

ಕೆಪಿಜೆಪಿ-ಪ್ರಜಾಕೀಯ ಪಕ್ಷದ ಪ್ರಚಾರದ ಹಿನ್ನಲೆಯಲ್ಲಿ ಉಡುಪಿಗೆ ಆಗಮಿಸಿದ ಸಂದರ್ಬದಲ್ಲಿ ಮಾತನಾಡಿದರು.

ನನಗೆ 50 ಸಾವಿರ ಇ ಮೇಲ್ ಬಂದಿದೆ. 30 ಸಾವಿರ ಮಂದಿ ಕ್ರಿಯಾಶೀಲಜನ ನನ್ನ ಜೊತೆಗಿದ್ದಾರೆ ಎಂದರು.ಮೋದಿಯೊಬ್ಬನಿಂದ ಬದಲಾವಣೆ ಸಾಧ್ಯವಿಲ್ಲ. ಜನ ಬದಲಾಗದಿದ್ದರೆ ದೇಶ ಬದಲಾಗಲ್ಲ. ನಾನು ಪ್ರ್ಯಾಕ್ಟಿಕಲ್ ಇಲ್ಲ ಅಂತ ಜನ ನಗುತ್ತಿದ್ದಾರೆ. ಪ್ರಜೆಗಳು ಮಾತನಾಡುವ ಕಾಲ ಬಂದಿದೆ. ಎಂ ಎಲ್ ಎ ಸೀಟು ಗೆಲ್ಲಲು 50 ಕೋಟಿ ಬೇಕಂತೆ. ಪ್ರಜಾಪ್ರಭುತ್ವ ಎಲ್ಲಿಗೆ ತಲುಪಿದೆ ಎಂದು ಉಪೇಂದ್ರ ಪ್ರಶ್ನಿಸಿದರು. ದೇಶದಲ್ಲಿ ಸತ್ಯ ಸಾಯಲ್ಲ- ಸತ್ಯನೇ ಗೆಲ್ಲೋದು. ಸ್ಮಾರ್ಟ್ ಆಗಿ ನಾನು ಪಕ್ಷ ಬಲಪಡಿಸುತ್ತೇನೆ. ಆಪ್ ಪಾರ್ಟಿ ಫಂಡ್ ನಿಂದ ಹಾಳಾಯ್ತು. ಅಣ್ಣಾ ಹಜಾರೆ ಬೆಂಬಲ ಕೇಜ್ರಿವಾಲ್ ಗೆ ಇತ್ತು. ಅರವಿಂದ ಕೇಜ್ರಿವಾಲ್ ಇನ್ನೂ ಚೆನ್ನಾಗಿ ಕೆಲಸ ಮಾಡಬಹುದಿತ್ತು.ರಾಷ್ಟೀಯ ಪಕ್ಷಗಳಿಂದ ಬೇಡಿಕೆ ಬಂದಿದೆ.15 ವರ್ಷಗಳಿಂದ ಆಹ್ವಾನ ಬರ್ತಾನೇ ಇದೆ.ಆದ್ರೆ ನನ್ನ ಕಲ್ಪನೆ ಅವರ ಜೊತೆ ಹೊಂದಾಣಿಕೆಯಾಗುತ್ತಿಲ್ಲ ಎಂದರು.

Comments are closed.