ಉಡುಪಿ: ಧರ್ಮ ಸಂಸದ್ ಸಭೆಯಲ್ಲಿ ಮೀಸಲಾತಿ ವಿಷಯವಾಗಿ ಮಾತನಾಡಿದನ್ನು ತಪ್ಪಾಗಿ ಅರ್ಥೈಸಿಕೊಂಡು ಸಾಹಿತಿಗಳು ಮತ್ತು ವಿದ್ಯಾರ್ಥಿಗಳು ನನ್ನ ವಿರುದ್ದ ಪ್ರತಿಭಟನೆ ಮಾಡಿದ್ದು ನನಗೆ ಬೇಸರ ತಂದಿದೆ ಎಂದು ಪೇಜಾವರ ಮಠಧೀಶಾರಾದ ವಿಶ್ವೇಶ ತೀರ್ಥ ಸ್ವಾಮಿಜಿ ಹೇಳಿದ್ದಾರೆ. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಚಾರ ತಿಳಿಸಿದ್ದಾರೆ.
ನಾನು ದಲಿತ ಮೀಸಲಾತಿಯನ್ನು ವಿರೋಧಿಸಿಲ್ಲ, ಧಾರ್ಮಿಕ ಅಲ್ಪ ಸಂಖ್ಯಾತರಿಗೆ ನೀಡುವ ಸವಲತ್ತುಗಳನ್ನು ಧಾರ್ಮಿಕ ಬಹು ಸಂಖ್ಯಾತರಿಗೂ ನೀಡಿ ಎಂದಷ್ಟೇ ಹೇಳಿದ್ದೇನೆ. ಧಾರ್ಮಿಕ ಅಲ್ಪ ಸಂಖ್ಯಾತರಲ್ಲಿ ದಲಿತರು ಸೇರುವುದಿಲ್ಲ, ಮುಸ್ಲಿಂಮರು ಮತ್ತು ಕ್ರೈಸ್ತರು ಸೇರುತ್ತಾರೆ, ಅವರಿಗೆ ನೀಡುವ ಸವಲತ್ತುಗಳನ್ನು ಬಹುಸಂಖ್ಯಾತ ಹಿಂದೂಗಳಿಗೆ ನೀಡಬೇಕೆಂದು ಹೇಳಿದ ಹೇಳಿಕೆಯನ್ನ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಹೇಳಿದರು.
ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕೆಲಸವಾಗಬಾರದು ಎಲ್ಲರನ್ನು ಸಮಾನವಾಗಿ ನೋಡಬೇಕು, ಸಂವಿಧಾನದಲ್ಲಿ ತಿದ್ದು ಪಡಿಯಾದರೆ ಚರ್ಚ್ ಮತ್ತು ಮಸೀದಿಗಳಿಗೆ ಇರುವ ಸ್ವಯತ್ತತೆ ಮಠ ಮಂದಿರಗಳೂ ದೊರೆಯುತ್ತದೆ. ಮುಸ್ಲಿಂರಿಗೆ ನೀಡುವಂತಹ ಶಾಧಿ ಭಾಗ್ಯದಂತಹ ಸವಲತ್ತುಗಳು ಬಹು ಸಂಖ್ಯಾತ ಹಿಂದೂಗಳಿಗೂ ಸಿಗುತ್ತದೆ.
ಇದಕ್ಕಾಗಿ ಸಂವಿಧಾನದ ತಿದ್ದು ಮಾಡಬೇಕಾಗುತ್ತದೆ ಸಂವಿಧಾನ ಅನೇಕ ಬಾರಿ ತಿದ್ದುಪಡಿಯಾಗಿದೆ. ತಿದ್ದುಪಡಿಗೆ ಸೂಚಿಸಿದ್ದು ಸಂವಿಧಾನ ವಿರೋಧಿಯಾಗುತ್ತದೆಯೇ..?ಅಂಬೆಡ್ಕರ್ ಗೆ ಅವಮಾನವಾಗುತ್ತದೆಯೇ ಹೇಗೆ ? ಎಂದು ನನಗೆ ಅರ್ಥವಾಗುತ್ತಿಲ್ಲ ಎಂದರು.
ಕೆಲವೊಂದು ಬುದ್ದಿ ಜೀವಿಗಳಿಗೆ ಇದು ಅರ್ಥ ಅಗಿಲ್ಲ ಅಥವಾ ಅರ್ಥ ಆಗಿಯೂ ಪ್ರತಿಭಟನೆ ನಡೆಸುತ್ತಿರಬಹುದು.ಇದಕ್ಕೆಲ್ಲಾ ಕಾರಣ ಕೆಲವೊಂದು ಸಾಹಿತಿಗಳು ಮತ್ತು ಬುದ್ದಿ ಜೀವಿಗಳಿಗೆ ನನ್ನ ಮೇಲಿನ ದ್ವೇಷವೇ ಕಾರಣ. ಪೇಜಾವರ ಶ್ರೀಗಳೆಂದರೆ ಕೆಲವರಿಗೆ ಆಗಲ್ಲ. ಧರ್ಮ ಸಂಸತ್ ಯಶಸ್ವಿಯಾಗಿದ್ದು ,ಇದರಲ್ಲಿ ಏನೂ ಸಿಕ್ಕಿಲ್ಲ ಎಂದಾಗ ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನವನ್ನು ಮಾಡುತ್ತಿದ್ದಾರೆ .ಅಷ್ಟೇ ಅಲ್ಲದೇ ದಲಿತರು ಮುಗ್ದರು ಅವರನ್ನ ಸಾಹಿತಿಗಳು ಪ್ರತಿಭಟನೆ ನಡೆಸಲು ಪ್ರಚೋದನೆ ಮಾಡುತ್ತಿದ್ದಾರೆ ಎಂದು ಸಾಹಿತಿಗಳ ವಿರುದ್ದ ಅಕ್ರೋಶವನ್ನ ವ್ಯಕ್ತಪಡಿಸಿದರು.