
ಉಡುಪಿ: ಯುವತಿಯೋರ್ವಳನ್ನು ನಂಬಿಸಿ ಬುಟ್ಟಿಗೆ ಹಾಕಿಕೊಂಡು ಆಕೆಯ ಇಷ್ಟಕ್ಕೆ ವಿರುದ್ಧವಾಗಿ ಬಲತ್ಕಾರ ನಡೆಸಿದ್ದ ಕಾಮುಕನನ್ನು ಕೋಟ ಪೊಲೀಸರು ಬಂಧಿಸಿದ್ದಾರೆ. ಸಾಸ್ಥಾನ ಗುಂಡ್ಮಿ ನಿವಾಸಿಯಾದ ಆರೋಪಿ ಸುಹೇಲ್ ಮಹಮ್ಮದ್ ಅಲಿ ಎಂಬಾತ ಅದಾಗ್ಯೆ ಡಿಗ್ರಿ ಮುಗಿಸಿದ್ದ ಯುವತಿಯನ್ನು ಟಾರ್ಗೇಟ್ ಮಾಡಿ ಲೈಂಗಿಕ ಕಿರುಕುಳ ನೀಡಿ ಬೆದರಿಕೆ ಹಾಕಿದ್ದ.
ತನ್ನ ಮೇಲೆ ನಡೆದ ಅನ್ಯಾಯದ ಬಗ್ಗೆ ಯುವತಿ ಕೋಟ ಪೊಲೀಸ್ ಠಾಣೆಗೆ ದೂರು ನೀಡುತ್ತಲೇ ಆರೋಪಿ ಪರಾರಿಯಾಗಲು ಸ್ಕೆಚ್ ರೂಪಿಸುತ್ತಾನೆ. ಆದರೇ ಪೊಲೀಸರ ಸಮಯಪ್ರಜ್ನೆಯ ಕಾರ್ಯಾಚರಣೆಯಿಂದ ಆರೋಪಿ ಫಲಾಯನಗೈಯುವುದು ತಪ್ಪಿದ್ದು ಆರೋಪಿ ಸುಹೇಲ್ ಸದ್ಯ ಕಂಬಿ ಹಿಂದಿದ್ದಾನೆ. ಕೋಟ ಠಾಣಾಧಿಕಾರಿ ಸಂತೋಷ್ ಕಾಯ್ಕಿಣಿ, ಇಲಾಖೆ ಜೀಪು ಚಾಲಕ ಪ್ರಶಾಂತ್ ಹಾಗೂ ಠಾಣೆಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲು ಯಶಸ್ವಿಯಾಗುತ್ತಾರೆ. ಪೊಲೀಸರ ಈ ಕ್ಷಿಪ್ರ ಕಾರ್ಯಾಚರಣೆಯು ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.