ರಾಷ್ಟ್ರೀಯ

ಅಮೆರಿಕಾಗಿಂತ ಮಧ್ಯಪ್ರದೇಶ ರಸ್ತೆಗಳು ಚೆನ್ನಾಗಿವೆ: ಸಿಎಂ ಹೇಳಿಕೆ ವಿರುದ್ಧ ಟ್ವಿಟ್ಟರಾರತಿ

Pinterest LinkedIn Tumblr


ನವದೆಹಲಿ: ಅಮೆರಿಕದ ರಸ್ತೆಗಳಿಗಿಂತ ಮಧ್ಯಪ್ರದೇಶದ ರಸ್ತೆಗಳೇ ಉತ್ತಮವಾಗಿವೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಆರು ದಿನಗಳ ಅಮೆರಿಕಾ ಪ್ರವಾಸದಲ್ಲಿರುವ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸದ್ಯ ವಾಷಿಂಗ್ಟನ್‌ ನಲ್ಲಿದ್ದಾರೆ, ವಾಷಿಂಗ್ಟನ್ ಡಿಸಿಯ ರಸ್ತೆಗಳು ನನಗೆ ತುಂಬಾ ಹಿಡಿಸಿಲ್ಲ, ಇಲ್ಲಿನ ರಸ್ತೆಗಳಿಗೆ ಹೋಲಿಸಿದರೆ ಮಧ್ಯಪ್ರದೇಶದ ರಸ್ತೆಗಳೇ ವಾಸಿ ಎಂದೆನಿಸಿದೆ ಎಂದು ಯುಎಸ್ – ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟನರ್​ಶಿಪ್ ಫೋರಂನಲ್ಲಿ ಹೇಳಿದ್ದಾರೆ.

ವಾಷಿಂಗ್ಟನ್‌ನ ಏರ್ಪೋರ್ಟ್‌ನಿಂದ ಹೊರಟು ಅಮೆರಿಕದ ರಸ್ತೆಗಳಲ್ಲಿ ಪ್ರಯಾಣಿಸಿದ ನಂತರ ನನಗೆ ಇಲ್ಲಿನ ರಸ್ತೆಗಳ ಬಗ್ಗೆ ಸಮಾಧಾನವಿಲ್ಲ ಎಂದು ಹೇಳಿದ್ದಾರೆಂದು ಎಎನ್ ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಇನ್ನೂ ಚೌಹಾಣ್ ಹೇಳಿಕೆ ಟ್ವಿಟ್ಟರ್ ನಲ್ಲಿ ತೀವ್ರ ಚರ್ಚೆಗೊಳಗಾಗಿದೆ. ಸಿಎಂ ಹೇಳಿಕೆಗೆ ನೆಟ್ಟಿಜನರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

Comments are closed.