ಕರ್ನಾಟಕ

ಶ್ರೀಗಂಧದ ಮರ ಕಳ್ಳರ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಗುಂಡಿನ ದಾಳಿ ; ಓರ್ವ ಸಾವು

Pinterest LinkedIn Tumblr

ಮೈಸೂರು: ಶ್ರೀಗಂಧದ ಮರ ಕಳ್ಳರ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಗುಂಡಿನ ದಾಳಿ ನಡೆಸಿದ್ದು, ಗುಂಡೇಟಿನಿಂದ ಶ್ರೀಗಂಧ ಚೋರನೊಬ್ಬ ಮೃತಪಟ್ಟಿದ್ದಾನೆ.

ಮೈಸೂರಿನ ರಾಮಕೃಷ್ಣನಗರದಲ್ಲಿರುವ ಲಿಂಗಾಬುದಿ ಕೆರೆಯ ಆವರಣದಲ್ಲಿ ಕಳೆದ ಮಧ್ಯ ರಾತ್ರಿ ಘಟನೆ ನಡೆದಿದೆ.

ಐದಕ್ಕೂ ಹೆಚ್ಚು ಮಂದಿಯಿದ್ದ ಕಳ್ಳರ ತಂಡ ಶ್ರೀಗಂಧದ ಮರಗಳ ಕಳುವಿಗೆ ಯತ್ನಿಸುತ್ತಿದ್ದ ವೇಳೆ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಶ್ರೀಗಂಧದ ಮರಗಳ್ಳರ ಮೇಲೆ ಗುಂಡು ಹಾರಿಸಲಾಗಿತ್ತು.

ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗುಂಡಿನ ದಾಳಿ ನಡೆದಿರುವ ಹಿನ್ನೆಲೆ ಲಿಂಗಾಬುದಿ ಕೆರೆಯ ಆವರಣಕ್ಕೆ ಸಾರ್ವಜನಿಕರ ಪ್ರವೇಶವನ್ನು ಪೊಲೀಸರು ತಾತ್ಕಾಲಿಕವಾಗಿ ನಿರ್ಬಂಧಿಸಿದ್ದಾರೆ.

Comments are closed.