ಕರಾವಳಿ

ಟೋಲ್ ವಿರೋಧಿಸಿ 144 ಸೆಕ್ಷನ್ ನಡುವೆಯೂ ಸಾಸ್ತಾನದಲ್ಲಿ ಬಾರಿ ಹೋರಾಟ: ಹಲವರ ಬಂಧನ

Pinterest LinkedIn Tumblr

ಉಡುಪಿ: ಜನವಿರೋಧದ ನಡುವೆಯೂ ಕೂಡ ಸಾಸ್ತಾನ ಗುಂಡ್ಮಿ ಟೋಲ್ ಗೇಟಿನಲ್ಲಿ ಟೋಲ್ ಸಂಗ್ರಹ ಆರಂಭಿಸಿದ ಹಿನ್ನೆಲೆ ಇಂದು ಸಾರ್ವಜನಿಕರು ಬೃಹತ್ ಪ್ರತಿಭಟನೆ ನಡೆಸಿದರು. ಮುಂಜಾಗೃತಾ ಕ್ರಮವಾಗಿ ಶುಕ್ರವಾರ ಸಂಜೆಯಿಂದ ಟೋಲ್ ಗೇಟ್ ಆಸುಪಾಸಿನಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದರೂ ಕೂಡ ಅದನ್ನು ಲೆಕ್ಕಿಸದೇ ಹೆದ್ದಾರಿಯಲ್ಲಿ ಸಹಸ್ರಾರು ಜನರಿಂದ ಮೆರವಣಿಗೆ ಮೂಲಕ ಸಾಗಿದರು.

144 ಸೆಕ್ಷನ್ ಉಲ್ಲಂಘನೆಯಾಗುತ್ತಲೇ ಹೋರಾಟಗಾರರನ್ನು ಬಂಧಿಸಿದ ಪೊಲೀಸರು ಬ್ರಹ್ಮಾವರದ ಧರ್ಮಾವರಂ ಹಾಲಿನಲ್ಲಿ ಬಂದಿಸಿಟ್ಟರು. ನೂರಾರು ಪ್ರತಿಭಟನಾಕಾರರು ಪೊಲೀಸರ ವಶದಲ್ಲಿದ್ದಾರೆ.

Comments are closed.