
ಕನ್ನಡ ಬಿಗ್ಬಾಸ್ ಫೈನಲ್ಗೆ ಇಂದು ಅಂತಿಮ ತೆರೆ ಬೀಳಲಿದ್ದು, ವಿನ್ನರ್ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ. ಈ ಮಧ್ಯೆ ನಿನ್ನೆ ಬಿಗ್ಬಾಸ್ ಮನೆಯಿಂದ ಮೋಹನ್ ಹಾಗು ಮಾಳವಿಕಾ ಕೊನೆಯ ಗಳಿಗೆಯಲ್ಲಿ ಹೊರಬಿದ್ದಿದ್ದಾರೆ.

ಮೋಹನ್, ಮಾಳವಿಕಾ, ಕೀರ್ತಿ, ಪ್ರಥಮ್ ಹಾಗು ರೇಖಾ ಈ ಐದೂ ಜನರು ತಮ್ಮ ಲಗೇಜ್ ಸಮೇತ ಬಿಗ್ಬಾಸ್ ,ಮನೆಯ ಲೀವಿಂಗ್ ಏರಿಯಾದಲ್ಲಿ ತಯಾರಾಗಿದ್ದರು.
ಸುದೀಪ್ ಪ್ರತಿಯೊಬ್ಬರಲ್ಲಿ ಯಾರೂ ಹೊರಹೋಗಬಹುದು ಎಂದನಿಸುತ್ತದೆ ಎಂದು ಕೇಳಿದಾಗ ಪ್ರಥಮ್, ಮೋಹನ್, ಮಾಳವಿಕ ಹೆಸರು ಕೇಳಿ ಬಂದಿತ್ತು. ಕೊನೆಗೆ ಬಿಗ್ಬಾಸ್ ಮನೆಯಿಂದ ಮೋಹನ್ ಹಾಗೂ ಮಾಳವಿಕ ಹೊರಬಿದ್ದಿದ್ದಾರೆ.
ಈವರೆಗೂ ಕನ್ನಡಿಗರಿಂದ ಓಟ್ ಪಡೆದು 12 ಎಲಿಮಿನೇಶನ್ನಿಂದ ತಪ್ಪಿಸಿಕೊಂಡು ಫೈನಲ್ವರೆಗೂ ತಲುಪಿದ್ದ ಮಾಳವಿಕ ನಿನ್ನೆ ಬಿಗ್ ಮನೆಯಿಂದ ಹೊರಬಿದ್ದಿದ್ದಾರೆ. ಇದರ ಜೊತೆ ಮೋಹನ್ ಕೂಡಾ ಹೊರಬಿದ್ದಿದ್ದಾರೆ. ಈ ಮೂಲಕ ಫೈನಲ್ನಲ್ಲಿ ಬರೀ ಮೂವರು ಮಾತ್ರ ಉಳಿದಿದ್ದಾರೆ.
ಪ್ರಥಮ್, ರೇಖಾ, ಕೀರ್ತಿ ಈ ಮೂವರಲ್ಲಿ ಒಬ್ಬರು ಬಿಗ್ಬಾಸ್ ಸೀಸನ್-4ರ ವಿಜೇತರಾಗಲಿದ್ದಾರೆ. ಯಾರು ವಿಜೇತರಾಗಲಿದ್ದಾರೆ ಅನ್ನುವ ಪ್ರಶ್ನೆಗೆ ಇಂದು ತೆರೆ ಬೀಳಲಿದೆ.
Comments are closed.