ಪ್ರಮುಖ ವರದಿಗಳು

ಇಬ್ಬರು ಗೆಳೆಯರನ್ನು ಕಳೆದುಕೊಂಡ ದುನಿಯಾ ವಿಜಯ್‌ ಹುಟ್ಟುಹಬ್ಬದ ಸಂಭ್ರಮದ ವೇಳೆ ಕಣ್ಣೀರಿಟ್ಟರು !

Pinterest LinkedIn Tumblr

ಬೆಂಗಳೂರು: ಚಿತ್ರನಟ ದುನಿಯಾ ವಿಜಯ್ ಅವರಿಗಿಂದು 43ನೇ ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳು, ಚಿತ್ರರಂಗದ ಸ್ನೇಹಿತರು ಹಾಗು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

ಮಾಸ್ತಿಗುಡಿ ಚಿತ್ರದ ಚಿತ್ರೀಕರಣದ ವೇಳೆ ತಮ್ಮ ಸಹೋದರರಂತಿದ್ದ ಇಬ್ಬರು ಗೆಳೆಯರನ್ನು ಕಳೆದುಕೊಂಡು ದುಃಖದಲ್ಲಿದ್ದ ದುನಿಯಾ ವಿಜಯ್, ಸ್ನೇಹಿತರನ್ನು ನೆನೆದು ಕಣ್ಣೀರು ಹಾಕಿದರು. ಅಭಿಮಾನಿಗಳ ಒತ್ತಡಕ್ಕೆ ಮಣಿದು ಹುಟ್ಟುಹಬ್ಬ ಆಚರಿಸಿಕೊಂಡರೂ ಅವರಲ್ಲಿ ಹುಟ್ಟುಹಬ್ಬದ ಸಂಭ್ರಮ ಕಾಣಲಿಲ್ಲ.

ಮಧ್ಯರಾತ್ರಿ ೧೨ ಗಂಟೆಯಿಂದಲೇ ರಾಜರಾಜೇಶ್ವರಿ ನಗರದ ಮನೆ ಮುಂದೆ ದುನಿಯಾ ವಿಜಯ್ ಅಭಿಮಾನಿಗಳ ಜೊತೆ ವಿಶೇಷವಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡರು. ಹುಟ್ಟುಹಬ್ಬದ ಅಂಗವಾಗಿ’ಮಾಸ್ತಿಗುಡಿ’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಯಿತು.

ವಿಜಯ್ ಹುಟ್ಟುಹಬ್ಬಕ್ಕೆ ಶುಭ ಕೋರಲು ರಾಜ್ಯದ ವಿವಿಧೆಡೆಯಿಂದ ನೂರಾರು ಅಭಿಮಾನಿಗಳು ಜಮಾಯಿಸಿದ್ದರು. ಈ ವೇಳೆ ಮಾತನಾಡಿದ ದುನಿಯಾ ವಿಜಯ್, ಅನಿಲ್ ಮತ್ತು ಉದಯ್ ಎಲ್ಲೂ ಹೋಗಿಲ್ಲ, ಅವರಿಬ್ಬರೂ ನಮ್ಮ ಜೊತೆಯಲ್ಲೇ ಇದ್ದಾರೆ.ಈ ಹುಟ್ಟುಹಬ್ಬ ಮಾತ್ರವಲ್ಲದೇ ನನ್ನ ಎಲ್ಲಾ ಹುಟ್ಟುಹಬ್ಬಗಳನ್ನು ನಾನು ಅನಿಲ್ ಮತ್ತು ಉದಯ್ ನೆನಪಿನಲ್ಲೇ ಆಚರಣೆ ಮಾಡುತ್ತೇನೆ ಎಂದು ಹೇಳಿದರು.

ಮಾಸ್ತಿಗುಡಿ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಚಿತ್ರಕ್ಕೆ ಒಳ್ಳೆಯದಾಗಲಿದೆ. ಚಿತ್ರದಿಂದ ಅನಿಲ್ ಮತ್ತು ಉದಯ್ ಕುಟುಂಬಕ್ಕೆ ಸಹಾಯ ಮಾಡುವ ಆಸೆ ಇದೆ. ಸದ್ಯದಲ್ಲೇ ಚಿತ್ರವನ್ನು ತೆರೆಗೆ ತರು ಉದ್ದೇಶವಿದೆ ಎಂದು ಹೇಳಿದರು.

ಹಿರಿಯ ಪೋಷಕ ನಟರಾದ ರಂಗಾಯಣ ರಘು ಮತ್ತು ಸಾಧು ಕೋಕಿಲಾ ಸೇರಿದಂತೆ ಅನೇಕರು ದುನಿಯಾ ವಿಜಯ್ ಅವರಿಗೆ ಹುಟ್ಟುಹಬ್ಬದ ಶುಭಕೋರಿದರು.

ಪತ್ನಿ ಕೀರ್ತಿ, ದುನಿಯಾ ವಿಜಯ್ ಅವರಿಗೆ ಶುಭಕೋರಿ ಕಷ್ಟು ಸುಖದಲ್ಲಿ ಪತಿಯ ಜೊತೆ ಸದಾ ಇರುತ್ತೇನೆ.ಅನಿಲ್ ಅಣ್ಣ ಮತ್ತು ಉದಯ್ ಅಣ್ಣ ನಮ್ಮ ಜೊತೆ ಸದಾ ಇದ್ದಾರೆ ಎಂದು ಅಗಲಿದ ಕಲಾವಿದರನ್ನು ನೆನೆದು ಭಾವುಕರಾದರು.

ಚಿತ್ರರಂಗ ಗಣ್ಯರ ಶುಭಹಾರೈಕೆ;
ಸಇಂದು ೪೩ ನೇ ಹುಟ್ಟುಹಬ್ಬ ಆಚರಿಸಿಕೊಂಡ ದುನಿಯಾ ವಿಜಯ್ ಅವರಿಗೆ ಚಿತ್ರರಂಗ ಗಣ್ಯರು ಶುಭಕೋರಿದರು.

Comments are closed.