ಪುಣೆ: ತನ್ನ ಪತ್ನಿ ಸಾಮಾಜಿಕ ಮಾಧ್ಯಮದಲ್ಲಿ ವಯಕ್ತಿಕ ಬದುಕಿನ ಹಲವು ವಿಷಯಗಳನ್ನು ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಕ್ಕೆ ಆಕ್ರೋಶ ಗೊಂಡ ಪತಿ ಆಕೆಯನ್ನು ಕೊಂದು ತಾನು ನೇಣಿಗೆ ಶರಣಾಗಿದ್ದಾನೆ.
ಪುಣೆಯ ಸಾಫ್ಟೇ ವೇರ್ ಎಂಜಿನೀಯರ್ ರಾಕೇಶ್ ಗಂಗುರ್ಡೆ ಹಾಗೂ ಸೋನಾಲಿ ಮೃತರು. ಈ ದಂಪತಿ ಹದಾಪ್ಸಾರ್ ನಿಂದ 12 ಕಿಮೀ ದೂರದಲ್ಲಿರುವ ಶಿವಪಾರ್ಕ್ ಅಪಾರ್ಟ್ ಮೆಂಟ್ ನಲ್ಲಿ ವಾಸಿಸುತ್ತಿದ್ದರು. ರಾಕೇಶ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಸೋನಾಲಿ ಗೃಹಿಣಿಯಾಗಿದ್ದರು.
4 ವರ್ಷಗಳ ಹಿಂದೆ ವಿವಾಹವಾಗಿದ್ದ ಈ ದಂಪತಿಗೆ ಮಕ್ಕಳಿರಲಿಲ್ಲ, ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿದ್ದ ಸೋನಾಲಿ ತಮ್ಮ ಮದುವೆ ವಿಚಾರ ಸೇರಿದಂತೆ ಹಲವು ಸಂಸಾರದ ಹಲವು ವಯಕ್ತಿಕ ವಿಷಯಗಳನ್ನು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಿದ್ದರು.ಈ ಸಂಬಂಧ ದಂಪತಿ ನುವೆ ಸದಾ ಜಗಳವಾಗುತ್ತಿತ್ತು.
ನಿನ್ನೆ ಸೋನಾಲಿ ಸಹೋದರ ಆಕೆಗೆ ಕರೆ ಮಾಡಿದ್ದಾರೆ, ಮೊಬೈಲ್ ನಾಟ್ ರೀಚೆಬಲ್ ಅಗಿದ್ದರಿಂದ ರಾಕೇಶ್ ಗೂ ಕೂಡ ಕರೆ ಮಾಡಿದ್ದಾರೆ. ಇಬ್ಬರು ಫೋನ್ ಸ್ವೀಕರಿಸದ ಹಿನ್ನೆಲೆಯಲ್ಲಿ ಆತಂಕಗೊಂಡ ಸೋನಾಲಿ ಸಹೋದರ ಅಪಾರ್ಟ್ ಮೆಂಟ್ ಗೆ ಆಗಮಿಸಿ ಬಾಗಿಲು ಮುರಿದಾಗ ಇಬ್ಬರು ಸಾವನ್ನಪ್ಪಿರುವುದು ತಿಳಿದು ಬಂದಿದೆ.
ಮನೆಯಲ್ಲಿ ಡೆತ್ ನೋಟ್ ಸಿಕ್ಕಿದ್ದು ತಮ್ಮ ಘಟನೆಗೆ ನಾನೇ ಕಾರಣ ಎಂದು ಬರೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Comments are closed.