ರಾಷ್ಟ್ರೀಯ

ಕ್ರೀಡಾ ಸಚಿವರ ‘ಹಿಜಾಬ್’ ಟ್ವೀಟ್‍ಗೆ ಖಡಕ್ ಉತ್ತರ ನೀಡಿದ ದಂಗಲ್ ನಟಿ ಝೈರಾ

Pinterest LinkedIn Tumblr


ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರನ್ನು ಭೇಟಿ ಮಾಡಿದ್ದಕ್ಕೆ ಜನರಿಂದ ಆಕ್ಷೇಪಕ್ಕೊಳಗಾಗಿ ಸುದ್ದಿಯಾಗಿದ್ದ ‘ದಂಗಲ್’ ಚಿತ್ರದ ನಟಿ ಝೈರಾ ವಾಸೀಮ್ ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದಾಳೆ.

ಈ ಬಾರಿ ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯಲ್ ಅವರಿಗೆ ಖಡಕ್ ಪ್ರತಿಕ್ರಿಯೆ ನೀಡುವ ಮೂಲಕ ಝೈರಾ ಸುದ್ದಿಯಾಗಿದ್ದಾಳೆ.

ದೆಹಲಿಯ ತ್ಯಾಗರಾಜ್ ಸ್ಟೇಡಿಯಂನಲ್ಲಿ ನಡೆದ ಇಂಡಿಯಾ ಆರ್ಟ್ ಫೆಸ್ಟ್ ನಲ್ಲಿ ಭಾಗವಹಿಸಿದ್ದ ಕೇಂದ್ರ ಕ್ರೀಡಾ ಮತ್ತು ಯುವಜನ ಖಾತೆ ಸಚಿವ ವಿಜಯ್ ಗೋಯಲ್ ಜನವರಿ 18ರಂದು ಆರ್ಟ್ ಫೆಸ್ಟ್ ನಲ್ಲಿದ್ದ ಹಿಜಾಬ್ ಧರಿಸಿದ ಮಹಿಳೆಯ ಪೇಟಿಂಗ್‍ವೊಂದನ್ನು ಟ್ವೀಟ್ ಮಾಡಿದ್ದರು. ಈ ಫೋಟೊ ಜತೆ ‘ಈ ಪೇಟಿಂಗ್ ಝೈರಾ ವಾಸಿಮ್ ಅವರ ಕಥೆಯೊಂದಿಗೆ ಸಾಮ್ಯತೆ ಹೊಂದಿದೆ. ಪಂಜರ ಮುರಿದು ನಮ್ಮ ಹೆಣ್ಮಕ್ಕಳು ಮುಂದೆ ಸಾಗುತ್ತಿದ್ದಾರೆ, ನಮ್ಮ ಹೆಣ್ಣು ಮಕ್ಕಳು ಗಟ್ಟಿಗಿತ್ತಿಯರು’ ಎಂಬ ವಾಕ್ಯವನ್ನೂ ಬರೆಯಲಾಗಿತ್ತು.

View image on Twitter
View image on Twitter
Follow
Vijay Goel ✔ @VijayGoelBJP
This painting tells a story similar to @zairawasim, पिंजरा तोड़ कर हमारी बेटियां बढ़ने लगी हैं आगे | More power to our daughters!
2/2
12:31 PM – 19 Jan 2017 · India
238 238 Retweets 388 388 likes
ಈ ಟ್ವೀಟ್‍ಗೆ ಪ್ರತಿಕ್ರಿಯಿಸಿದ ಝೈರಾ, ಸರ್ ಎಲ್ಲ ಗೌರವಗಳೊಂದಿಗೆ ಈ ಮಾತುಗಳನ್ನು ಹೇಳುತ್ತಿದ್ದೇನೆ. ನಾನು ನಿಮ್ಮ ಮಾತನ್ನು ಒಪ್ಪುವುದಿಲ್ಲ. ಈ ರೀತಿ ಹುಂಬ ವಿವರಣೆಯೊಂದಿಗೆ ನನ್ನನ್ನು ಸೇರಿಸಬೇಡಿ. ಹಿಜಾಬ್ ಧರಿಸಿರುವ ಮಹಿಳೆಯರು ಸುಂದರ ಮತ್ತು ಸ್ವತಂತ್ರವಾಗಿದ್ದಾರೆ. ಅಂದಹಾಗೆ, ಈ ಪೇಟಿಂಗ್‍ನಲ್ಲಿ ಚಿತ್ರಿಸಿರುವ ಕಥೆಗೂ ನನ್ನ ಕಥೆಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾಳೆ.

19 Jan
Vijay Goel ✔ @VijayGoelBJP
This painting tells a story similar to @zairawasim, पिंजरा तोड़ कर हमारी बेटियां बढ़ने लगी हैं आगे | More power to our daughters!
2/2 pic.twitter.com/RaolLKrZeg
Follow
Zaira Wasim @zairawasim
@VijayGoelBJP Moreover, the story depicted through this painting is not even remotely relevant to mine. (3/3)
11:34 AM – 20 Jan 2017
749 749 Retweets 1,197 1,197 likes
19 Jan
Vijay Goel ✔ @VijayGoelBJP
This painting tells a story similar to @zairawasim, पिंजरा तोड़ कर हमारी बेटियां बढ़ने लगी हैं आगे | More power to our daughters!
2/2 pic.twitter.com/RaolLKrZeg
Follow
Zaira Wasim @zairawasim
@VijayGoelBJP Women in hijab are beautiful and free (2/3)
11:33 AM – 20 Jan 2017
1,066 1,066 Retweets 1,602 1,602 likes
ಝೈರಾ ಟ್ವೀಟ್‍ಗೆ ಪ್ರತಿಕ್ರಿಯಿಸಿದ ಗೋಯಲ್ ನನ್ನ ಟ್ವೀಟ್‍ನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದಿದ್ದಾರೆ.

ಅದೇ ವೇಳೆ ಗೋಯಲ್ ಟ್ವೀಟ್‍ಗೆ ಬಗ್ಗೆ ಹಲವಾರು ಜನ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಈ ಪೇಟಿಂಗ್‍ಗೂ ಝೈರಾಗೂ ಏನು ಸಂಬಂಧ? ಕುಸ್ತಿ ಮತ್ತು ಬುರ್ಖಾ, ಪಂಜರ ಇದಕ್ಕೆಲ್ಲಾ ಏನೂ ಸಂಬಂಧವಿದೆ ಎಂದು ಪ್ರಶ್ನಿಸಲಾಗಿದೆ.

ಪಂಜರ ಮುರಿದು ಝೈರಾ ನಿಮಗೆ ಸರಿಯಾಗಿಯೇ ಉತ್ತರಿಸಿದ್ದಾಳೆ ಎನ್ನುವ ಮೂಲಕ ಝೈರಾಳ ಪ್ರತಿಕ್ರಿಯೆಗೆ ನೆಟಿಜನ್‍ಗಳೂ ಭಲೇ ಎಂದಿದ್ದಾರೆ.

Comments are closed.