ಪ್ರಮುಖ ವರದಿಗಳು

ಹಾಡು ಹಗಲೇ ಮಹಿಳೆಯರಿಗೆ ಮುತ್ತಿಟ್ಟು ಪರಾರಿಯಾಗುತ್ತಿದ್ದ ಕುಖ್ಯಾತ ಕಿಸ್ಸಿಂಗ್ ಕಿಂಗ್ ಸುಮಿತ್‌ ವರ್ಮಾ, ಆತನ ಸಹಚರನ ಬಂಧನ

Pinterest LinkedIn Tumblr

ನವದೆಹಲಿ: ಹಾಡು ಹಗಲೇ ನಡು ರಸ್ತೆಯಲ್ಲಿ ಈತ ಮಹಿಳೆಯರನ್ನು ಬರೆಸೆಳೆದು ಮುತ್ತಿಕ್ಕಿ ಕ್ಷಣಾರ್ಧದಲ್ಲಿ ಪರಾರಿಯಾಗುತ್ತಿದ್ದ. ನಟೋರಿಯಸ್ ಕಿಸ್ಸಿಂಗ್ ಕಿಂಗ್ ಹಾಗೂ ಆತನ ಸಹಚರರನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.

ಲೈಂಗಿಕ ಕಿರುಕುಳ ಹಾಗೂ ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಕಿಸ್ಸಿಂಗ್ ಕಿಂಗ್ ಸುಮಿತ್‌ ವರ್ಮಾ ಹಾಗೂ ಆತನ ಸಹಚರ ಸತ್ಯಜೀತ್ ಅವರನ್ನು ಇಂದು ಮಧ್ಯಾಹ್ನ ಗುರ್ಗಾಂವ್‌ ನಲ್ಲಿ ದೆಹಲಿ ಕ್ರೈಮ್‌ ಬ್ರಾಂಚ್‌ ಪೊಲೀಸರು ಬಂಧಿಸಿದ್ದಾರೆ.

ಕ್ರೇಜಿ ಸುಮಿತ್‌ ಎಂದೇ ಕುಖ್ಯಾತನಾಗಿದ್ದ ಈತ ದೆಹಲಿಯಲ್ಲಿ ಮಹಿಳೆಯರಿಗೆ ದುಃಸ್ವಪ್ನವಾಗಿದ್ದ. ಹಾಡು ಹಗಲೇ ನಡು ರಸ್ತೆಯಲ್ಲಿ ಈತ ಮಹಿಳೆಯರನ್ನು ಬರೆಸೆಳೆದು ಮುತ್ತಿಕ್ಕಿ ಕ್ಷಣಾರ್ಧದಲ್ಲಿ ಪರಾರಿಯಾಗುತ್ತಿದ್ದ. ತನ್ನ ಈ ಚುಂಬನ ಚೇಷ್ಟೆಯ ವಿಡಿಯೋಗಳನ್ನು ಆತ ಯೂ ಟ್ಯೂಬ್‌ಗ ಅಪ್‌ಲೋಡ್‌ ಕೂಡ ಮಾಡುತ್ತಿದ್ದ.

“ದಿ ಫ‌ನ್ನಿಯೆಸ್ಟ್‌ ಇಂಡಿಯನ್‌ ಯೂ ಟ್ಯೂಬ್‌ ಪ್ರ್ಯಾಂಕ್‌ ಆಫ್ 2017′ ಎಂಬ ಈತನ ಚುಂಬನ ಚೇಷ್ಟೆಯ ವಿಡಿಯೋಗೆ 200 ಲೈಕ್‌ಗಳು ಸಿಕ್ಕಿದ್ದವು. ವ್ಯಾಪಕವಾಗಿ ವೀಕ್ಷಿಸಲ್ಪಟ್ಟ ಈ ವಿಡಿಯೋಗಳನ್ನು ಹಾಗೂ ಚುಂಬನ ಚೇಷ್ಟೆ ತೋರಿದ ಸುಮಿತ್‌ ವರ್ಮಾನನ್ನು ಜನರು ಸಾಮಾಜಿಕ ಜಾಲ ತಾಣದಲ್ಲಿ ಖಂಡಿಸಿದ್ದರು.

ಜನರ ಈ ಆಕ್ರೋಶದಿಂದ ಬೆದರಿದ್ದ ಸುಮಿತ್‌ ವರ್ಮಾ ತನ್ನ ಚುಂಬನ ಚೇಷ್ಟೆಯ ವಿಡಿಯೋವನ್ನು ಇಂಟರ್‌ನೆಟ್‌ನಿಂದ ಕಿತ್ತು ಹಾಕಿ ತನ್ನ ಕುಕೃತ್ಯಕ್ಕೆ ಜನರಲ್ಲಿ ಕ್ಷಮೆಯಾಚಿಸಿದ್ದ.

Comments are closed.