ಪ್ರಮುಖ ವರದಿಗಳು

ರೂ.144 ಕ್ಕೆ ಉಚಿತ ಅನಿಯಮಿತ ಕರೆ, 300 ಎಂಬಿ ಡಾಟಾ..ಬಿಎಎಸ್‍ಎನ್‍ಎಲ್ ಹೊಸ ಆಫರ್ !

Pinterest LinkedIn Tumblr

bsnl

ಚೆನ್ನೈ: ರಿಲಯನ್ಸ್ ಜಿಯೋ ಸೇವೆಯ ಬಳಿಕ ಈಗ ದರ ಸಮರ ಮತ್ತೆ ಆರಂಭವಾಗಿದ್ದು, ಬಿಎಎಸ್‍ಎನ್‍ಎಲ್ ಈಗ ಗ್ರಾಹಕರಿಗೆ ಅನ್‍ಲಿಮಿಟೆಡ್ ಕರೆಗಳ ಆಫರ್ ಪ್ರಕಟಿಸಿದೆ.

ರಿಲಯನ್ಸ್ ಜಿಯೋ ಜಿಯೋ ಜೊತೆ ಸ್ಪರ್ಧೆಗಿಳಿದಿರುವ ಇತರೆ ಟೆಲಿಕಾಂ ಸಂಸ್ಥೆಗಳು ಹೊಸ ವರ್ಷದಿಂದ ನಾನಾ ಆಫರ್ ಗಳನ್ನೂ ನೀಡಿ ತಮ್ಮ ಗ್ರಾಹಕರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿವೆ, ಇದೆ ಪ್ರಯತ್ನದಲ್ಲಿ ಸರ್ಕಾರಿ ಸ್ವಾಮ್ಯದ ಬಿಬಿಎಸ್ಎನ್ಎಲ್ ಕೂಡ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದ್ದು, ಕೇವಲ 144 ರೂ.ಗೆ ತಿಂಗಳುಪೂರ್ತಿ ಉಚಿತ ಅನಿಯಮಿತ ಸ್ಥಳೀಯ ಮತ್ತು ಎಸ್.ಟಿ.ಡಿ. ಕರೆ ಮತ್ತು 300 ಎಂ.ಬಿ. ಉಚಿತ 2ಜಿ/ ಜಿ ಡಾಟಾ ನೀಡಿದೆ.

144 ರೂ. ರಿಚಾರ್ಜ್ ಮಾಡಿದರೆ ಸ್ಥಳೀಯ ಮತ್ತು ಎಸ್‍ಟಿಡಿ ಕರೆ ಗಳನ್ನು ಉಚಿತವಾಗಿ ಮಾಡಬಹುದು ಎಂದು ಬಿಎಸ್‍ಎನ್‍ಎಲ್ ಹೇಳಿದೆ.

ಹೊಸ ಆಫರ್ 6 ತಿಂಗಳವರೆಗೆ ಲಭ್ಯವಿದ್ದು, ತಿಂಗಳಿಗೆ 300 ಎಂಬಿ ಡೇಟಾ ಕೂಡ ಉಚಿತವಾಗಿ ಸಿಗಲಿದೆ. ಪ್ರಿಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಗ್ರಾಹಕರು ಈ ಕೊಡುಗೆ ಬಳಸಬಹುದು ಎಂದು ಬಿಎಸ್‍ಎನ್‍ಎಲ್ ಅಧ್ಯಕ್ಷ ಅನುಪಮ್ ಶ್ರೀವಾಸ್ತವ ತಿಳಿಸಿದ್ದಾರೆ.

ದೇಶದಲ್ಲಿ ಈಗ 4,400 ವೈಫೈ ಹಾಟ್‍ಸ್ಪಾಟ್ ಆರಂಭಿಸಿದ್ದೇವೆ, ಮುಂದಿನ ಒಂದು ವರ್ಷದಲ್ಲಿ ಒಟ್ಟು 40 ಸಾವಿರ ವೈಫೈ ಹಾಟ್‍ಸ್ಪಾಟ್ ಆರಂಭಿಸುವ ಗುರಿಯನ್ನು ಹಾಕಿದ್ದೇವೆ ಎಂದು ಅವರು ಹೇಳಿದರು.

Comments are closed.