
ಇಸ್ತಾನ್ ಬುಲ್: ಡಿ.31 ರಂದು ಮಧ್ಯರಾತ್ರಿ ಹೊಸ ವರ್ಷದ ಸಂಭ್ರಮಾಚರಣೆ ನಡೆಯುತ್ತಿದ್ದ ವೇಳೆ ಇಸ್ತಾನ್ ಬುಲ್ ನ ನೈಟ್ ಕ್ಲಬ್ ನಲ್ಲಿ ನಡೆದ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 39 ಕ್ಕೆ ಏರಿದೆ.
ಉಗ್ರ ದಾಳಿಯ ಬಗ್ಗೆ ಇಸ್ತಾನ್ ಬುಲ್ ಗೌರ್ನರ್ ವಸಿಪ್ ಸಹಿನ್, ಮೃತಪಟ್ಟವರಲ್ಲಿ 21 ಜನರ ಗುರುತನ್ನು ಪತ್ತೆ ಮಾಡಲಾಗಿದೆ ಈ ಪೈಕಿ 16 ಜನರು ವಿದೇಶಿ ನಾಗರಿಕರಾಗಿದ್ದು, ಐವರು ಟರ್ಕಿ ದೇಶದವರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಅಮೆರಿಕ ಟರ್ಕಿಯ ಇಸ್ತಾನ್ ಬುಲ್ ನಲ್ಲಿ ನಡೆದಿರುವ ದಾಳಿಯನ್ನು ಉಗ್ರರ ದಾಳಿ ಎಂದು ಹೇಳಿದ್ದು, 2017 ರ ಮೊದಲ ಉಗ್ರರ ದಾಳಿ ಎಂದು ಹೇಳಿದೆ. ದಾಳಿ ನಡೆಸಿದ ಉಗ್ರರಿಗಾಗಿ ಶೋಧಕಾರ್ಯಾಚರಣೆ ಮುಂದುವರೆದಿದ್ದು, ಭದ್ರತಾ ಪಡೆಗಳು ಅಗತ್ಯ ಕ್ರಮ ಕೈಗೊಂಡಿವೆ ಎಂದು ಇಸ್ತಾನ್ ಬುಲ್ ಗೌರ್ನರ್ ತಿಳಿಸಿದ್ದಾರೆ.
ನೈಟ್ ಕ್ಲಬ್ ನಲ್ಲಿ ನಡೆದಿರುವ ದಾಳಿಗೆ ಈ ವರೆಗೂ ಯಾವುದೇ ಉಗ್ರ ಸಂಘಟನೆ ಹೊಣೆ ಹೊತ್ತುಕೊಂಡಿಲ್ಲ. ದಾಳಿಯಲ್ಲಿ ಬದುಕುಳಿದಿರುವ ಓರ್ವ ವ್ಯಕ್ತಿ ಉಗ್ರರ ದಾಳಿ ಬಗ್ಗೆ ಮಾಹಿತಿ ನೀಡಿದ್ದು, ದಾಳಿ ನಡೆಸಿದ ಉಗ್ರರ ಗುರುತು ಸಿಗಲಿಲ್ಲ. ಆದರೆ ಅವರೊಂದಿಗೆ ಓರ್ವ ಗನ್ ಮ್ಯಾನ್ ಇದ್ದ ಎಂದು ಹೇಳಿದ್ದಾರೆ.
Comments are closed.