ಪ್ರಮುಖ ವರದಿಗಳು

ಈ ಮದುವೆಯೇ ವಿಶಿಷ್ಟ ! ಇವರಿಬ್ಬರ ಪ್ರೀತಿ ಹುಟ್ಟಿದ್ದು ಎಲ್ಲಿ ಗೊತ್ತಾ..?

Pinterest LinkedIn Tumblr

seenu-vinod

ಕೊಚ್ಚಿ: ಫೇಸ್ ಬುಕ್ ನಲ್ಲಿ ಪರಿಚಿತರಾಗಿ ಮದುವೆಯಾದವರ ಬಗ್ಗೆ ನಾವು ಕೇಳಿದ್ದೇವೆ. ಇದೀಗ ಟ್ವಿಟ್ಟರ್ ನಲ್ಲಿ ಫಾಲೋ ಮಾಡಿ ಪ್ರೇಮಿಗಳಾಗಿ ಮದುವೆಯಾಗುವ ಟ್ರೆಂಡ್ ಬೆಳೆಯುತ್ತಿದೆ.

ಮಲಯಾಳಿ ಹುಡುಗ ಹುಡುಗಿಯರಿಬ್ಬರು ಟ್ವಿಟ್ಟರ್ ನಲ್ಲಿ ಫಾಲೋ ಮಾಡುತ್ತಿದ್ದರು. ಪರಸ್ಪರ ಪರಿಚಯ, ಸ್ನೇಹ ಪ್ರೀತಿಗೆ ತಿರುಗಿ ಟ್ವಿಟ್ಟರ್ ನಲ್ಲಿಯೇ ಪ್ರಪೋಸ್ ಮಾಡಿದ್ದಾರೆ. ಡಿಜಿಟಲ್ ಜಗತ್ತಿನ ಪರಿಕಲ್ಪನೆಯನ್ನು ಪಾಲಿಸಿರುವ ಇವರು ಕಳೆದ ವಾರ ಮದುವೆಯಾಗಿದ್ದಾರೆ.

ಸೀನು ಸುಧಾಕರನ್ ಮತ್ತು ವಿನು ಗೋವಿಂದ್ ಟ್ವಿಟ್ಟರ್ ಮೂಲಕ ಪ್ರೀತಿ ಬೆಳೆಸಿ ಮದುವೆಯಾದ ಜೋಡಿ. ಆದರೆ ಇವರಿಬ್ಬರ ಪ್ರೀತಿಯನ್ನು ತಮ್ಮ ಇತರ ಸ್ನೇಹಿತರು, ಟ್ವಿಟ್ಟರ್ ನಲ್ಲಿನ ಫಾಲೋವರ್ಸ್ ಗಳ ಮಧ್ಯೆಯೂ ಗುಟ್ಟಾಗಿ ಇಟ್ಟಿದ್ದರು. ತಮಗೆ ಅಷ್ಟು ಆಪ್ತರೆನಿಸಿಕೊಂಡವರ ಮಧ್ಯೆ ಮಾತ್ರ ಅವರಿಬ್ಬರ ನಡುವಿನ ಸಂದೇಶಗಳು ಗೊತ್ತಾಗುತ್ತಿದ್ದವು ಮತ್ತು ಸಿಗುತ್ತಿತ್ತು.

ಅವರಿಬ್ಬರ ಮದುವೆಯನ್ನು ಕೂಡ ಟ್ವಿಟ್ಟರ್ ನಲ್ಲಿ ಘೋಷಿಸಲಾಗಿತ್ತು. ಮದುವೆಗೆ ಕೇರಳ ಮತ್ತು ಕೆಲ ವಿದೇಶಿ ಫಾಲೋವರ್ಸ್ ಕೂಡ ಬಂದಿದ್ದರು. ಮದುವೆಯ ಫೋಟೋಗಳು, ಸ್ನೇಹಿತರು, ಬಂಧುಗಳು ಬಂದು ಆಶೀರ್ವಾದ ಮಾಡುವುದನ್ನು ನೇರವಾಗಿ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದರು.

ಟ್ವಿಟ್ಟರ್ ನಲ್ಲಿ #SeenuVinu ಹ್ಯಾಶ್ ಟಾಗ್ ನಲ್ಲಿ ಮದುವೆ ಜೋಡಿಯ ಫೋಟೋಗಳು ಸಿಗುತ್ತವೆ.ಸೀನು ಸುಧಾಕರನ್ ಮತ್ತು ವಿನು ಗೋವಿಂದ್ ಕ್ರಮವಾಗಿ @BlabbingFingers ಮತ್ತು @Govindhan916ಎಂಬ ಹೆಸರಿನಲ್ಲಿ ಟ್ವಿಟ್ಟರ್ ಖಾತೆಯನ್ನು ಹೊಂದಿದ್ದಾರೆ.

Comments are closed.