ಅಂತರಾಷ್ಟ್ರೀಯ

ಕಪ್ಪು ಸಮುದ್ರದಲ್ಲಿ ರಷ್ಯನ್ ವಿಮಾನ ಪತನ; 92 ಮಂದಿ ಸಾವು

Pinterest LinkedIn Tumblr

russian-missing-plane

ಮಾಸ್ಕೋ: ರಷ್ಯಾದ ಸೋಚಿ ನಗರದ ಕಪ್ಪು ಸಮುದ್ರದ ತೀರದಿಂದ ರೇಡಾರ್ ಕಣ್ಣಿಂದ ನಾಪತ್ತೆಯಾಗಿದ್ದ ರಷ್ಯಾದ ಮಿಲಿಟರಿ ವಿಮಾನ ಟಿಯು-154 ಇಂದು ಸಾಗರದಲ್ಲಿ ಪತನಗೊಂಡಿರುವ ಮಾಹಿತಿ ತಿಳಿದುಬಂದಿದೆ. ಈ ರಷ್ಯನ್ ವಿಮಾನದಲ್ಲಿ 92 ಜನರಿದ್ದರೆನ್ನಲಾಗಿದ್ದು, ಎಲ್ಲರೂ ಜಲಸಮಾಧಿಯಾಗಿರುವ ಸಾಧ್ಯತೆ ಇದೆ. ಸೋಚಿ ಸಾಗರ ಪ್ರದೇಶದಲ್ಲಿ ರಷ್ಯಾದ ರಕ್ಷಣಾ ತಂಡವೊಂದು ಘಟನಾ ಸ್ಥಳಕ್ಕೆ ಧಾವಿಸಿದೆ ಎಂದು ಇಂಟರ್’ಫ್ಯಾಕ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

“ರಷ್ಯಾದ ರಕ್ಷಣಾ ಸಚಿವಾಲಯಕ್ಕೆ ಸೇರಿದ ಟಿಯು-154 ವಿಮಾನದ ಅವಶೇಷಗಳು ಸೋಚಿ ನಗರದಿಂದ 1.5 ಕಿ.ಮೀ ಆಚೆ ಇರುವ ಸಾಗರ ಪ್ರದೇಶದಲ್ಲಿ ಪತ್ತೆಯಾಗಿವೆ. ನೀರಿನಿಂದ 50ರಿಂದ 70 ಮೀಟರ್ ಆಳದಲ್ಲಿ ಈ ಅವಶೇಷಗಳು ಸಿಕ್ಕಿವೆ ಎಂದು ಸಚಿವಾಲಯದ ಪ್ರಕಟಣೆ ಹೇಳಿದೆ ಎಂದು ಸುದ್ದಿ ಸಂಸ್ಥೆ ತಿಳಿಸಿದೆ.

ರಷ್ಯಾ ವಿಮಾನ ಪತನಕ್ಕೆ ಖಚಿತ ಕಾರಣಗಳು ಇನ್ನೂ ಗೊತ್ತಾಗಿಲ್ಲ. ತಿಳಿದುಬಂದಿರುವ ಪ್ರಾಥಮಿಕ ಮಾಹಿತಿ ಪ್ರಕಾರ ತಾಂತ್ರಿಕ ದೋಷದಿಂದ ಅಪಘಾತ ಸಂಭವಿಸಿರುವ ಶಂಕೆ ಇದೆ ಎಂದು ಆರ್’ಐಎ ಸುದ್ದಿ ಸಂಸ್ಥೆ ವರದಿ ಮಾಡಿದೆ.

ದುರಂತಕ್ಕೀಡಾದ ಈ ವಿಮಾನದಲ್ಲಿದ್ದ 91 ಜನರ ಪೈಕಿ ರಷ್ಯಾದ ಸೇನಾ ಸಿಬ್ಬಂದಿ ಅಷ್ಟೇ ಅಲ್ಲದೇ ಸಂಗೀತಗಾರರು, ಪತ್ರಕರ್ತರೂ ಇದ್ದರೆನ್ನಲಾಗಿದೆ.

Comments are closed.