ಕರ್ನಾಟಕ

ರೂಪದರ್ಶಿಯ ಅಶ್ಲೀಲ ಫೋಟೊ ಫೇಸ್ ಬುಕ್’ನಲ್ಲಿ ಹಾಕುದಾಗಿ ಹಣಕ್ಕೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಮೂವರು ಯುವಕರ ಬಂಧನ

Pinterest LinkedIn Tumblr

anekal-blackmail

ಬೆಂಗಳೂರು: ಕಳವು ಮಾಡಿದ ಮೊಬೈಲ್‌ನಲ್ಲಿದ್ದ ಪೋಟೋಗಳನ್ನಿಟ್ಟುಕೊಂಡು ಅಶ್ಲೀಲ ಫೋಟೊ ಕಳುಹಿಸಿ ಹಣ ನೀಡುವಂತೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ಸೇರಿ ಮೂವರು ಯುವಕರನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.

ಹೊಸಪಾಳ್ಯ ನಿವಾಸಿಗಳಾದ ಅಶ್ವಿನ್ ಮೋಸೆಸ್(೨೦),ಅಕ್ಷಯ್,ಕಿರಣ್ ಬಂಧಿತ ಆರೋಪಿಗಳಾಗಿದ್ದಾರೆ. ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಅಶ್ವಿನ್ ಮೋಸೆಸ್, ಬಿಬಿಎ ವಿದ್ಯಾರ್ಥಿಯಾಗಿರುವ ಅಕ್ಷಯ್ ಹಾಗೂ ಇವರ ಸ್ನೇಹಿತನಾಗಿದ್ದ ಮತ್ತೊಬ್ಬ ಆರೋಪಿ ಕಿರಣ್ ಸೇರಿ ಮೂವರು ಕಳೆದ ಅಕ್ಟೋಬರ್‌ನಲ್ಲಿ ರೂಪದರ್ಶಿಯೊಬ್ಬರ ಮೊಬೈಲ್ ಕಳವು ಮಾಡಿದ್ದರು.

ರೂಪದರ್ಶಿಯ ಸ್ನೇಹಿತನ ಬಳಿ ಕಳವು ಮಾಡಿದ್ದ ಮೊಬೈಲ್ ನಲ್ಲಿ ಮಾಡೆಲ್‌ನ ಅಶ್ಲೀಲ ಫೋಟೊವಿದ್ದು ಅದನ್ನು ರೂಪದರ್ಶಿಯ ಮೊಬೈಲ್ ನಂಬರ್ ಪತ್ತೆಮಾಡಿ ಆಕೆಗೆ ಕಳುಹಿಸಿ 1 ಲಕ್ಷ ಹಣ ನೀಡುವಂತೆ ಬ್ಲ್ಯಾಕ್ ಮೇಲ್ ಮಾಡಿದ್ದರು.

ಹಣ ನೀಡದಿದ್ದರೇ ಫೇಸ್ ಬುಕ್ ಗೆ ಫೋಟೊ ಹಾಕುವುದಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಮೂವರ ವಿರುದ್ದ ರೂಪದರ್ಶಿಯ ಸ್ನೇಹಿತ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹಣ ನೀಡುವುದಾಗಿ ಹೇಳಿ ಮೂವರು ಆರೋಪಿಗಳನ್ನ ಕರೆಸಿ ಬಂಧಿಸಿದ್ದಾರೆ ಎಂದು ಡಿಸಿಪಿ ಡಾ.ಬೋರಲಿಂಗಯ್ಯ ಅವರು ತಿಳಿಸಿದ್ದಾರೆ.

Comments are closed.