ಪ್ರಮುಖ ವರದಿಗಳು

ಬಿಜೆಪಿ ನಾಯಕರಿಗೆ ಶಾಕ್ ನೀಡಿದ ಮೋದಿ ! ಬ್ಯಾಂಕ್ ವಿವರ ನೀಡುವಂತೆ ಸೂಚನೆ

Pinterest LinkedIn Tumblr

modi

ನವದೆಹಲಿ: ರು.500 ಹಾಗೂ 1,000 ಮುಖಬೆಲೆಯ ನೋಟುಗಳ ರದ್ಧತಿ ಆದೇಶ ಹೊರಡಿಸಲಾದ ನವೆಂಬರ್ 8ರಿಂದ ಡಿಸೆಂಬರ್ 31ರವರೆಗಿನ ತಮ್ಮ ಬ್ಯಾಂಕ್ ಖಾತಾ ವಹಿವಾಟುಗಳ ಸಂಪೂರ್ಣ ವಿವರವನ್ನು ಸಲ್ಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿಯ ಎಲ್ಲ ಸಂಸತ್ ಸದಸ್ಯರು, ಶಾಸಕರಿಗೆ ಸೂಚನೆ ನೀಡಿದ್ದಾರೆ.

ದುಬಾರಿ ಮುಖಬೆಲೆ ನೋಟುಗಳ ಮೇಲೆ ನಿಷೇಧ ಹೇರಿದ ದಿಂದಿಂದ ಹಿಡಿದು ಡಿಸೆಂಬರ್ 31ರವರೆಗಿನ ನಿಮ್ಮ ಬ್ಯಾಂಕ್ ವಹಿವಾಟಿನ ವಿವರಗಳನ್ನು ಸಲ್ಲಿಸಿ ಎಂದು ಬಿಜೆಪಿ ಎಲ್ಲಾ ಸಂಸದರು, ಶಾಸಕರಿಗೆ ಸೂಚನೆ ನೀಡಿದ್ದಾರೆಂದು ಹೇಳಲಾಗುತ್ತಿದೆ.

ನೋಟು ನಿಷೇಧ ಹೇರಿಕೆಯ ನಿರ್ಧಾರ ಕೈಗೊಳ್ಳುವುದಕ್ಕೂ ಮುನ್ನವೇ ಕೆಲ ಬಿಜೆಪಿ ನಾಯಕರಿಗೆ ಈ ವಿಚಾರ ತಿಳಿದಿತ್ತು ಎಂದು ವಿರೋಧ ಪಕ್ಷಗಳು ಈ ಹಿಂದೆ ಆರೋಪ ವ್ಯಕ್ತಪಡಿಸಿದ್ದವು. ಈ ಹಿನ್ನಲೆಯಲ್ಲಿ ಪ್ರಧಾನಿ ಮೋದಿಯವರು ವಿರೋಧ ಪಕ್ಷಗಳ ಬಾಯಿ ಮುಚ್ಚಿಸಲು ಈ ನಿರ್ಧಾರವನ್ನು ಕೈಗೊಂಡಿದ್ದು, ಪಕ್ಷದ ಎಲ್ಲಾ ಸಂಸದರು ಹಾಗೂ ಬಿಜೆಪಿ ಆಡಳಿದಲ್ಲಿರುವ ಎಲ್ಲಾ ರಾಜ್ಯಗಳ ಶಾಸಕರು ಸೇರಿದಂದೆ ಪಕ್ಷದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲರೂ ತಮ್ಮ ಬ್ಯಾಂಕ್ ವಹಿವಾಟಿನ ವಿವಗಳನ್ನು 2017 ಜನವರಿ 1ರ ಒಳಗಾಗಿ ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ನೀಡಬೇಕೆಂದು ಆದೇಶಿಸಿದ್ದಾರೆಂದು ಮೂಲಗಳು ತಿಳಿಸಿವೆ.

Comments are closed.