ಮಂಗಳೂರು : ಕೇಂದ್ರ ಸರಕಾರ ಹಳೆಯ 500 ರೂ. ಹಾಗೂ 1000 ರೂ.ಗಳ ನೋಟನ್ನು ನಿರ್ಬಂಧಗೊಳಿಸಿರುವುದನ್ನು ವಿರೋಧಿಸಿ ಸೋಮವಾರ ವಿರೋಧ ಪಕ್ಷಗಳು ಆಕ್ರೋಶ ದಿನಾಚರಣೆ ಆಚರಿಸಿದರೆ ಇನೊಂದೆಡೆ ಮಂಗಳೂರಿನ ಯವ ಬ್ರಿಗೇಡ್ ಕಾರ್ಯಕರ್ತರು ಸಂಭ್ರಮ ದಿನಾಚರಣೆಯನ್ನು ಆಚರಿಸಿದರು.
ನಗರದ ವಿಠೋಬ ರುಕ್ಮಯಿ ದೇವಾಳದ ಅಂಗಣದಲ್ಲಿ ದೀಪ ( ಹಣತೆ) ಗಳನ್ನು ಹಚ್ಚಿ, ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಮಾಡಿದರು.