ಮನೋರಂಜನೆ

‘ಮುಂಗಾರು ಮಳೆ’ ಹುಡುಗಿ ಪೂಜಾ ಗಾಂಧಿ ಮದುವೆ ಸಿದ್ಧತೆಯಲ್ಲಿದ್ದಾರೆ…ಪ್ರೀತಿಸಿದ ಹುಡುಗ ಯಾರು ಗೊತ್ತಾ..?

Pinterest LinkedIn Tumblr

pooja-gandhi

ಬೆಂಗಳೂರು: ಮಳೆ ಹುಡುಗಿ ಪೂಜಾ ಗಾಂಧಿ ಸದ್ದಿಲ್ಲದೇ ಮದುವೆ ಸಿದ್ಧತೆಯಲ್ಲಿ ತೊಡಗಿದ್ದಾರೆ. ಉದ್ಯಮಿ ಪ್ರಶಾಂತ್‌ ಎಂಬುವರ ಜತೆ ಪ್ರೇಮಾಂಕುರವಾಗಿದೆ ಅಂತೆ.

ಹೌದು, ಸ್ವತಃ ಪೂಜಾ ಗಾಂಧಿ ಅವರೇ ಬಿಗ್ ಬಾಸ್ ಸೀಸನ್-4 ನಲ್ಲಿ ಹೇಳಿಕೊಂಡಿದ್ದಾರೆ.l ತಮ್ಮು ಮುಂದಿನ ಜಿಲೇಬಿ ಚಿತ್ರದ ಪ್ರಮೋಷನ್ ಗಾಗಿ ಆಗಮಿಸಿದ್ದ ಪೂಜಾ ಕೈ ಮೇಲಿರುವ ಹಚ್ಚೆ ಬಗ್ಗೆ ಸುದೀಪ್ ವಿಚಾರಿಸಿದಾಗ ಪೂಜಾ ಈ ವಿಷಯ ಬಾಯ್ಬಿಟ್ಟಿದ್ದಾರೆ.

ತಾವು ಪ್ರಶಾಂತ್ ಎಂಬ ಉದ್ಯಮಿಯನ್ನು ಪ್ರೀತಿಸುತ್ತಿದ್ದು. ಆತನ ಬಗ್ಗೆ ಹೆಚ್ಚಿನ ವಿವರಣೆ ನೀಡಲು ಪೂಜಾ ಬಯಸಲಿಲ್ಲ, ಆದರೆ ಶೀಘ್ರವೇ ಮದುವೆಯಾಗುವುದಾಗಿ ಹೇಳಿದ ಅವರು ಮದುವೆ ಡೇಟ್ ಬಗ್ಗೆ ಮಾಹಿತಿ ನೀಡಿಲ್ಲ.

ಹಲವು ದಿನಗಳಿಂದ ಪ್ರಶಾಂತ್ ಅವರನ್ನು ಪೂಜಾ ಪ್ರೀತಿಸುತ್ತಿದ್ದು, ಮನೆಯವರ ಒಪ್ಪಿಗೆ ಮೇರೆಗೆ ಸಪ್ತಪದಿ ತುಳಿಯಲು ನಿರ್ಧರಿಸಿದ್ದಾರಂತೆ.

Comments are closed.