ಗಲ್ಫ್

ದುಬೈಯಲ್ಲಿ ಚಹಾ ಮಾರುವವನ ಕೈಯಲ್ಲಿ ಇಲೆಕ್ಟ್ರಾನಿಕ್ ಮಳಿಗೆಯ ಉದ್ಘಾಟನೆ !

Pinterest LinkedIn Tumblr

neelesh-bhatia-key-fashion-electronics

ದುಬೈ: ಯುಎಇನಲ್ಲಿ ಕಳೆದ 20 ವರ್ಷಗಳಿಂದ ಚಹಾ ಮಾರಿ ಜೀವನ ಸಾಗಿಸುತ್ತಿದ್ದ 50 ವರ್ಷದ ಭಾರತೀಯ ವ್ಯಾಪಾರಿಯನ್ನು ಇಲ್ಲಿನ ಎಲೆಕ್ಟ್ರಾನಿಕ್ ಶಾಪ್ ಒಂದರ ಉದ್ಘಾಟನಾ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಹ್ವಾನಿಸಿ ಅವರ ಕೈಯಿಂದಲೇ ಉದ್ಘಾಟಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಕೀ ಫ್ಯಾಶನ್ಸ್ ಇಲೆಕ್ಟ್ರಾನಿಕ್ಸ್ ಟ್ರೇಡಿಂಗ್ ಕಂಪೆನಿ ಚೇರ್‌ಮನ್ ನೀಲೇಶ್ ಭಾಟಿಯಾ ಅವರು ಕಳೆದ 20 ವರ್ಷಗಳಿಂದ ದೇರಾ ಪ್ರದೇಶದ ಮುಸಲ್ಲಾ ರಸ್ತೆಯಲ್ಲಿ ಕಳೆದ ಚಹಾ ಮಾರಾಟ ಮಾಡುತ್ತಿರುವ ಕೇರಳ ಮೂಲದ ಮುಹಮ್ಮದ್ ಶಫಿಯವರಿಂದ ತನ್ನ ನೂತನ ಮಾಳಿಗೆಯ ಉದ್ಘಾಟನೆ ಮಾಡಿಸಿದ್ದಾರೆ.

ಗೌರವ ಅತಿಥಿಯಾಗಿ ಆಹ್ವಾನಿಸಲ್ಪಟ್ಟ ಶಫಿ ಅವರಿಗೆ ಭಾಟಿಯಾ ಶಾಲು ಹೊದಿಸಿ ಸನ್ಮಾನಿಸಿದರು. ಆನಂತರ ನೆರೆದಿದ್ದ ಆಹ್ವಾನಿತರ ಕರತಾಡನದ ನಡುವೆ ಶಫಿ ರಿಬ್ಬನ್ ಕತ್ತರಿಸುವ ಮೂಲಕ ಮಳಿಗೆಯನ್ನು ಉದ್ಘಾಟಿಸಿದರು. ಆನಂತರ ಶಫಿ ಅವರು ನೂತನ ಮೊಬೈಲ್ ಹೆಡ್‌ಫೋನ್ ಸೆಟ್ ಖರೀದಿಸಿ, ಮಳಿಗೆಯ ಪ್ರಥಮ ಗ್ರಾಹಕರೆನಿಸಿಕೊಂಡರು.

‘‘ನನಗೆ ಇಂತಹ ಗೌರವ ದೊರೆಯುವುದೆಂದು ನಾನು ಎಂದೂ ನಿರೀಕ್ಷಿಸಿರಲಿಲ್ಲ. ಜನರು ಇಂತಹ ಸದ್ಭಾವನೆಗಳನ್ನು ಪ್ರದರ್ಶಿಸಿರುವುದನ್ನು ನಾನೆಂದೂ ಕೇಳಿರಲಿಲ್ಲ. ಅಂಗಡಿ ಮಾಲಕ ಭಾಟಿಯಾ ಅವರಿಗೆ ಉದ್ಯಮ ಹಾಗೂ ಬಾಳಿನಲ್ಲಿ ಶ್ರೇಯಸ್ಸು ಒದಗಲಿ ಎಂಬುದೇ ನನ್ನ ಹಾರೈಕೆ’’ ಎಂದು ಶಫಿ ಭಾವುಕರಾಗಿ ಹೇಳಿದರು.

Comments are closed.