ರಾಷ್ಟ್ರೀಯ

ನಾಗ್ರೋಟಾ ಸೇನಾ ಶಿಬಿರದ ಮೇಲೆ ಉಗ್ರರ ದಾಳಿ; ಇಬ್ಬರು ಯೋಧರಿಗೆ ಗಾಯ

Pinterest LinkedIn Tumblr

2

ಜಮ್ಮು: ಜಮ್ಮು ಕಾಶ್ಮೀರದ ನಗ್ರೋಟಾ ಸೇನಾ ಶಿಬಿರದ ಮೇಲೆ ಇಂದು ಮುಂಜಾನೆ ಉಗ್ರರು ದಾಳಿ ನಡೆಸಿದ್ದಾರೆ.

ಬಲ್ಲಮೂಲಗಳ ಪ್ರಕಾರ ಮಂಗಳವಾರ ಮುಂಜಾನೆ 4 ಗಂಟೆಗೆ ಆತ್ಮಾಹುತಿ ದಳದ ಉಗ್ರರು ನಾಗ್ರೋಟಾದಲ್ಲಿರುವ ಸೇನಾ ಶಿಬಿರದ ಮೇಲೆ ದಾಳಿ ನಡೆಸಿದ್ದಾರೆ.

ದಾಳಿ ನಡೆದ ಪ್ರದೇಶಗಳ ಸುತ್ತಲೂ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಸೇನಾ ಶಿಬಿರದ ವ್ಯಾಪ್ತಿಯಲ್ಲಿರುವ ಶಾಲೆಗಳನ್ನು ಮುಚ್ಚಲಾಗಿದೆ, ಪ್ರಸ್ತುತ ಪ್ರದೇಶದಲ್ಲಿ ಈಗಲೂ ಗುಂಡಿನ ಚಕಮಕಿ ಮುಂದುವರಿದಿದೆ.

ಈ ದಾಳಿ- ಪ್ರತಿದಾಳಿಯಲ್ಲಿ ಭಾರತೀಯ ಸೇನೆಯ ಓರ್ವ ಯೋಧ ಮತ್ತು ಜೂನಿಯರ್ ಕಮಿಷನರ್ ಆಫೀಸರ್ ಗಾಯಗೊಂಡಿದ್ದಾರೆ ಎಂದು ಸಿಎನ್‍ಎಮ್ -ನ್ಯೂಸ್ 18 ಮಾಧ್ಯಮ ವರದಿ ಮಾಡಿದೆ.

ಶಸ್ತ್ರಾಸ್ತ್ರಧಾರಿಗಳಾದ ನಾಲ್ಕೈದು ಉಗ್ರರು ನಾಗ್ರೋಟಾದಲ್ಲಿರುವ 166 ಫೀಲ್ಡ್ ರೆಜಿಮೆಂಟ್ ಶಿಬಿರದ ಮೇಲೆ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.

Comments are closed.