ಪ್ರಮುಖ ವರದಿಗಳು

ವಾಟ್ಸಪ್’ನಲ್ಲಿ ವಿಡಿಯೋ ಕಾಲಿಂಗ್ ಮಾಡಲು ಹೀಗೆ ಮಾಡಿ…

Pinterest LinkedIn Tumblr

whatsapp

ಸದ್ಯ ಹಾಟ್ ಟಾಪಿಕ್ ಆಗಿರುವುದು ವಾಟ್ಸಪ್ ವಿಡಿಯೋ ಕಾಲಿಂಗ್. ಸ್ಕೇಪ್ ಮತ್ತು ಗೂಗಲ್ ಡಿಯೋ ಗೆ ಪ್ರತಿ ಸ್ಪರ್ಧಿಯಾಗಿ ವಾಟ್ಸಪ್ ನಲ್ಲಿ ವಿಡಿಯೋ ಕಾಲಿಂಗ್ ನೀಡಲು ಫೇಸ್ ಬುಕ್ ಚಿಂತನೆ ನಡೆಸಿತ್ತು. ಈ ಹಿನ್ನಲೆಯಲ್ಲಿ ಸದ್ಯ ಬೀಟಾ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

ನಿನ್ನೆಯಿಂದ ಮಾದ್ಯಮಗಳಲ್ಲಿ ವಾಟ್ಸಪ್ ವಿಡಿಯೋ ಕಾಲಿಂಗ್ ಮಾಡಬಹುದು ಎಂಬ ಸುದ್ದಿ ಬರುತ್ತಿದೆ ಆದರೆ ನಮಗೆ ಇನ್ನು ಆಪ್ ಡೇಟ್ ಸಿಕ್ಕಿಲ್ಲ, ಪ್ಲೇ ಸ್ಟೋರಿನಲ್ಲಿ ನೋಡಿದರು ಯಾವುದೇ ಪ್ರಯೋಜನ ವಿಲ್ಲ ಎನ್ನುವವರ ಸಂಖ್ಯೆ ಅಧಿಕವಾಗಿದೆ ಅವರಿಗಾಗಿಯೇ ಈ ಸುದ್ದಿ.

-ಮೊದಲು ನಿಮ್ಮ ಮೊಬೈಲ್ ನಲ್ಲಿ ಪ್ಲೇ ಸ್ಟೋರ್ ಓಪನ್ ಮಾಡಿ
-ನಂತರ ಮೈ ಆಪ್ ಅಂಡ್ ಗೇಮ್ಸ್ ಗೆ ಹೋಗಿ
-ನಂತರ ವಾಟ್ಸಪ್ ಓಪನ್ ಮಾಡಿ ಅದರಲ್ಲಿ ಅನ್ ಇನ್ಸಟಲ್ ಮತ್ತು ಒಪನ್ ಎಂಬ ಎರಡು ಆಯ್ಕೆಗಳು ಕಾಣಿಸುತ್ತವೆ.
-ನಂತರ ಕೆಳಗೆ ಸ್ಕ್ರಾಲ್ ಮಾಡಿ.
-ನಂತರ ಆಪ್ ಕೊನೆಯಲ್ಲಿ ಬೀಟಾ ಉಪಯೋಗಿಸಲು ‘ಐಮ್ ಇನ್’ ಎನ್ನುವ ಆಯ್ಕೆಯನ್ನು ಒತ್ತಿರಿ
-ನಂತರ ಕನ್ಫಮ್ ಆಯ್ಕೆ ಮಾಡಿಕೊಳ್ಳಿ ಕೆಲವೇ ನಿಮಿಷಗಳಲ್ಲೇ ನಿಮಗೆ ಬೀಟಾ ಉಪಯೋಗಿಸಲು ಅನುಮತಿ ದೊರೆಯುತ್ತದೆ.
-ನಂತರ ವಾಟ್ಸಪ್ ಅಪ್ ಡೇಟ್ ಮಾಡಿ.
ನೀವು ಯಾರಿಗೆ ಕಾಲ್ ಮಾಡಲು ಬಯಸುವಿರೋ ಅವರ ಬಳಿಯೂ ವಿಡಿಯೋ ಕಾಲಿಂಗ್ ಇದ್ದರೆ ಆರಾಮವಾಗಿ ಮುಖ ಮುಖ ನೋಡಿ ಮಾತನಾಡಬಹುದು.

Comments are closed.