
ಉಳ್ಳಾಲ: ತೊಕ್ಕೊಟ್ಟು ಒಳಪೇಟೆಯಲ್ಲಿ ಯಾವೂದೇ ಪರವಾನಿಗೆ ಇಲ್ಲದೇ ಕಾರ್ಯಾಚರಿಸುತ್ತಿದ್ದ ಗುಜರಿ ಅಂಗಡಿಯೊಂದು ಬೆಂಕಿ ಅನಾಹುತ ದಿಂದ ಸಂಪೂರ್ಣವಾಗಿ ಭಸ್ಮಗೊಂಡಿರುವ ಘಟನೆ ಮಂಗಳವಾರ ತಡರಾತ್ರಿ ನಡೆದಿದ್ದು, ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.

ನಿನ್ನೆ ತಡರಾತ್ರಿ ಈ ಗುಜರಿ ಅಂಗಡಿಗೆ ಏಕಾಏಕಿ ಬೆಂಕಿ ತಗಲಿ ಉರಿಯುತ್ತಿರುವುದು ಕಂಡು ಬಂದಿದ್ದು, ಅಪಯಾದ ಅರಿವು ಅರಿತ ಸ್ಥಳಿಯರು ಒಗ್ಗಟ್ಟಾಗಿ ಸತತ ಪ್ರಯತ್ನದಿಂದ ಬೆಂಕಿ ನಡಿಸಲು ಪ್ರಯತ್ನಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿಗಳು ಸಾರ್ವಜನಿಕರ ಸಹಕಾರದೊಂದಿಗೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಿನ್ನೆಯಷ್ಟೇ ಅಂಗಡಿ ಮಾಲಕ ಅಲ್ಲಿದ್ದ ಸೊತ್ತುಗಳನ್ನು ರಫ್ತು ಮಾಡಿದ್ದರಿಂದಾಗಿ ಕೇವಲ ರಟ್ಟುಗಳು ಮಾತ್ರ ಅಂಗಡಿಯಲ್ಲಿತ್ತು. ಅವೆಲ್ಲಾ ಬೆಂಕಿಗೆ ಉರಿದು ಸಂಪೂರ್ಣವಾಗಿ ನಾಶವಾಗಿದೆ. ಈ ಸಂದರ್ಭ ಅಂಗಡಿಯಲ್ಲಿ ಹೆಚ್ಚಿನ ಸೊತ್ತುಗಳು ಇಲ್ಲದಿದ್ದ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕನಿಗೆ ಲಕ್ಷಾಂತರ ನಷ್ಟವುಂಟಾಗಿದೆ.

ಅಂಗಡಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಸಾಧ್ಯತೆಗಳಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಅಂಗಡಿಗೆ ವಿದ್ಯುತ್ ಇಲ್ಲದೇ ಇರುವುದರಿಂದ ಯಾವುದೇ ರೀತಿಯ ಶಾರ್ಟ್ ಸಕ್ರ್ಯೂಟ್ ಸಂಭವಿಸಿರಲು ಸಾಧ್ಯವಿಲ್ಲ. ಅದ್ದರಿಂದ ಇದು ಉದ್ದೇಶಪೂರ್ವಕವಾಗಿಯೇ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿರ ಬೇಕು ಎನ್ನಲಾಗಿದೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.