ಕರ್ನಾಟಕ

ಬಹಳ ಅದ್ದೂರಿಯಾಗಿ ನಡೆದ ಜನಾರ್ದನ ರೆಡ್ಡಿ ಪುತ್ರಿ ಬ್ರಹ್ಮಿಣಿ ವಿವಾಹ

Pinterest LinkedIn Tumblr

reeee

ಬೆಂಗಳೂರು: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಪುತ್ರಿ ಬ್ರಹ್ಮಿಣಿ ಹಾಗೂ ಉದ್ಯಮಿ ರಾಜೀವ್‌ರೆಡ್ಡಿ ವಿವಾಹ ಇಂದು ಧನುರ್‌ಲಗ್ನದಲ್ಲಿ ನೆರವೇರಿತು.

mm

ಬೆಳಗ್ಗೆ ೯.೩೦ ರಿಂದ ೧೦.೩೦ ವರೆಗಿನ ಧನುರ್‌ಲಗ್ನದಲ್ಲಿ ರಾಜೀವ್ ರೆಡ್ಡಿ ಮಾಂಗಲ್ಯ ಧಾರಣೆ ನೆರವೇರಿಸಿದರು.

ಹೈದ್ರಾಬಾದ್ ಮೂಲದ ಉದ್ಯಮಿ, ದುಬೈನಲ್ಲಿ ನೆಲೆಸಿರುವ ರಾಜೀವ್ ರೆಡ್ಡಿ ಜತೆ ಬ್ರಹ್ಮಿಣಿ ವಿವಾಹ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಿರ್ಮಿಸಿರುವ ಅದ್ಧೂರಿ ವೇದಿಕೆಯಲ್ಲಿ ನೆರವೇರಿತು. ಮೊದಲು ವಧು-ವರರಿಬ್ಬರೂ ಕಲ್ಯಾಣ ಮಂಪಟಕ್ಕೆ ಆಗಮಿಸಿ, ಧಾರೆ ಪೂರ್ವ ನಡೆದ ಸಾಂಪ್ರದಾಯಿಕ ವಿಧಿ ವಿಧಾನಗಳ ಬಳಿಕ ಬ್ರಹ್ಮಿಣಿಗೆ ಮಾಂಗಲ್ಯ ಕಟ್ಟಿದರು.

೮ ಅರ್ಚಕರಿಂದ ವಿವಾಹ ಪೂಜಾ ವಿಧಿ ವಿಧಾನ ನೆರವೇರುತ್ತಿದ್ದು, ಅದ್ಧೂರಿ ವೇದಿಕೆಯಲ್ಲಿ ವಿವಾಹದ ನಂತರ ಬೆಳಗ್ಗೆ ೧೦.೩೦ರಿಂದ ಮಧ್ಯಾಹ್ನ ೩ ಗಂಟೆಯವರೆಗೆ ಆರತಕ್ಷತೆ ನಡೆಯಿತು. ಶ್ರೀನಿವಾಸಕಲ್ಯಾಣ ಮಂಟಪದಲ್ಲಿ ವಿವಾಹ ಸಮಾರಂಭ ನಡೆಯಿತು. ೩೦ಕ್ಕೂ ಹೆಚ್ಚು ಧರ್ಮಗುರು ಆಶೀರ್ವಚನಗೈದರು.

ಬೆಳಗ್ಗೆ ಮೊದಲು ವಧು ಬ್ರಹ್ಮಿಣಿ ಶ್ರೀನಿವಾಸನಿಗೆ ಪೂಜೆ ಸಲ್ಲಿಸಿದರು. ನಂತರ ವರ ರಾಜೀವ್‌ರೆಡ್ಡಿ ಕಲ್ಯಾಣ ಮಂಟಪಕ್ಕೆ ಜನಾರ್ದನ ರೆಡ್ಡಿ ಅವರೊಂದಿಗೆ ವಿಜಯ ವಿಠ್ಠಲ ದೇವಸ್ಥಾನದಿಂದ ಸಾರೋಟಿನಲ್ಲಿ ಆಗಮಿಸಿ ಶ್ರೀನಿವಾಸನಿಗೆ ಪೂಜೆ ಸಲ್ಲಿಸಿದರು.

ರೆಡ್ಡಿ ಸಂಪ್ರದಾಯದಂತೆ ವಿವಾಹ ನೆರವೇರಿಸಲಾಯಿತು. ಕಲ್ಯಾಣ ಮಂಟಪದಲ್ಲಿ ಮಂತ್ರಘೋಷಗಳ ಉದ್ಘಾರ ಕೇಳಿ ಬಂತು. ಸಪ್ತದ್ವಾರ ಕಲ್ಯಾಣ ಮಂಟಪವನ್ನು ವಧು-ವರರು ಪ್ರವೇಶಿಸಿದ್ದು, ಕುಟುಂಬ ಸದಸ್ಯರಿಂದ ಸಾಂಪ್ರದಾಯಿಕ ಆಚರಣೆ ಮುಂದುವರಿದಿದೆ. ಆರು ಮಹಿಳೆಯರು ನಾದಸ್ವರ ನುಡಿಸಿದರು.

ವಿವಾಹದ ಇನ್ನೊಂದು ವಿಶೇಷ ಭೋಜನ. ಉತ್ತರ ಭಾರತ ಹಾಗೂ ದಕ್ಷಿಣ ಭಾರತ ಶೈಲಿಯ ಅಡುಗೆ ವ್ಯವಸ್ಥೆ ಮಾಡಲಾಗಿದೆ. ಸುಮಾರು ೬೦ ಸಾವಿರ ಮಂದಿಗೆ ಊಟಕ್ಕೆ ವ್ಯವಸ್ಥೆ ಮಾಡಲಾಗಿದ್ದು, ವಿವಿಐಪಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಊಟದ ಮೆನುವಿನಲ್ಲಿ ೧೬ ವಿಧದ ಸಿಹಿ ತಿಂಡಿಗಳು ಇವೆ.

ಅರಮನೆ ಮೈದಾನದಲ್ಲಿ ಬಳ್ಳಾರಿಯಲ್ಲಿರುವ ವಧು ಬ್ರಹ್ಮಿಣಿ ಮನೆ ಹಾಗೂ ಹೈದರಬಾದ್ ನಲ್ಲಿರುವ ವರ ರಾಜೀವ್ ರೆಡ್ಡಿ ಮನೆಯ ಪ್ರತಿಕೃತಿ ಸಹ ನಿರ್ಮಿಸಲಾಗಿದೆ. ಮೂರು ಸಾವಿರ ಮಂದಿಯನ್ನು ಭದ್ರತೆಗಾಗಿಯೇ ನೇಮಿಸಿದ್ದು, ಅದರಲ್ಲಿ ಬೌನ್ಸರ್‌ಗಳು ಕೂಡ ಸೇರಿದ್ದಾರೆ. ಐವತ್ತು ಸಾವಿರ ಮಂದಿ ಮದುವೆಯಲ್ಲಿ ಭಾಗವಹಿಸಿದ್ದಾರೆ. ಅನೇಕ ರಾಜಕಾರಣಿಗಳು, ಉದ್ಯಮಿಗಳು ಮದುವೆಗೆ ಆಗಮಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Comments are closed.