ಬೆಂಗಳೂರು: ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಬಂದಿದ್ದ ಹುಚ್ಚ ವೆಂಕಟ್ ಅವರು ಪ್ರಥಮ್ ಮೇಲೆ ಹಲ್ಲೆ ನಡೆಸಿರುದಕ್ಕೆ ಕಾರ್ಯಕ್ರಮ ನಡೆಸಿಕೊಡುವ ನಟ ಕಿಚ್ಚ ಸುದೀಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಎಪಿಸೋಡ್ ನಿನ್ನೆ ಪ್ರಸಾರವಾಗಿದ್ದು, ಇದನ್ನು ವೀಕ್ಷಿಸಿದ ಸುದೀಪ್ ಇದರಲ್ಲಿ ಹುಚ್ಚ ವೆಂಕಟ್ ರದ್ದು ತಪ್ಪಿದೆ. ಅವರು ಸ್ಪರ್ಧಿಯ ಮೇಲೆ ಕೈ ಮಾಡಿದ್ದು ಸರಿಯಲ್ಲ. ಹೀಗಾಗಿ ಹುಚ್ಚ ವೆಂಕಟ್ ಗೆ ಶಿಕ್ಷೆಯಾಗುವವರೆಗೂ ತಾನು ಬಿಗ್ ಬಾಸ್ ಕಾರ್ಯಕ್ರಮ ನಿರೂಪಣೆ ಮಾಡುವುದಿಲ್ಲ ಎಂದು ಸುದೀಪ್ ಘೋಷಿಸಿದ್ದಾರೆ. ಟ್ವಿಟರ್ ನಲ್ಲಿ ಈ ಬಗ್ಗೆ ಸುದೀಪ್ ಪ್ರಕಟಿಸಿದ್ದಾರೆ.
“ಈಗಷ್ಟೇ ಎಪಿಸೋಡ್ ನೋಡಿದೆ. ಆತ ಸೀದಾ ಮನೆಯೊಳಗೆ ಹೋಗಿ ಒಬ್ಬನಿಗೆ ಹೊಡೆದು ರಾಜಾರೋಷವಾಗಿ ಬರಬಹುದು ಎಂದುಕೊಂಡಿದ್ದರೆ ಅದು ಆತನ ತಪ್ಪು. ಆತನ ನಡೆ ಅಕ್ಷಮ್ಯ. ಹೀಗಾಗಿ ಆತನಿಗೆ ಶಿಕ್ಷೆಯಾಗುವವರೆಗೂ ನಾನು ಕಾರ್ಯಕ್ರಮ ನಿರೂಪಿಸುವುದಿಲ್ಲ. ಇದು ವೀಕ್ಷಕರಿಗೆ ನನ್ನ ಪ್ರಾಮಿಸ್” ಎಂದು ಸುದೀಪ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಕಳೆದ ಸೀಜನ್’ನಲ್ಲಿ ರವಿ ಮುರೂರು ಅವರ ಮೇಲೆ ಹಲ್ಲೆ ನಡೆಸಿದ್ದ ‘ಹುಚ್ಚ’ ವೆಂಕಟ್, ಸೀಜನ್4ರ ಸ್ಪರ್ಧಿ ಪ್ರಥಮ್’ಗೆ ರಕ್ತ ಬರುವಂತೆ ಹೊಡೆದು ಮನೆಯಿಂದ ಹೊರ ಬಂದಿದ್ದಾರೆ.
ಹುಚ್ಚ ವೆಂಕಟ್’ರನ್ನು ಬಿಗ್ ಬಾಸ್ ಮನೆಗೆ ಕೆಲವೊಂದು ಶರತ್ತುಗಳನ್ನು ವಿಧಿಸಿ, ಜೊತೆಗೆ ಗಾರ್ಡ್’ಗಳ ಜೊತೆ ಬಿಗ್ ಮನೆಯೊಳಗೆ ಎಂಟ್ರಿ ಪಡೆದಿದ್ದರು. ಆದರೆ ಕೊನೆಯಲ್ಲಿ ಪ್ರಥಮ್ ಮೇಲೆ ಕೈ ಮಾಡಿದ್ದರು.
ಇದಕ್ಕೆ ಟ್ವೀಟರ್ ಮೂಲಕ ಪ್ರತಿಕ್ರಿಯೆ ನೀಡಿರುವ ಬಿಗ್ ಬಾಸ್ ನಿರೂಪಕ ಕಿಚ್ಚ ಸುದೀಪ್, ನಾನು ಈಗಷ್ಟೆ ಕಾರ್ಯಕ್ರಮವನ್ನು ನೋಡಿದೆ, ಅದರಲ್ಲಿ ಹಚ್ಚು ವೆಂಕಟ್ ಮಾಡಿರುವುದು ಅಕ್ಷಮ್ಯ ತಪ್ಪು, ನಾನು ಖಂಡಿತ ನ್ಯಾಯದ ಪರ ನಿಲ್ಲುತ್ತೇನೆ ಎಂದಿದ್ದಾರೆ.